Advertisement

ಮೈದುಂಬಿದೆ ಆಲಮಟ್ಟಿ ಜಲಾಶಯ

03:12 PM Aug 02, 2017 | |

ಆಲಮಟ್ಟಿ: ವಿಜಯಪುರ ಜಿಲ್ಲೆಯಲ್ಲಿ ಸಮರ್ಪಕವಾಗಿ ಮಳೆಯಾಗದಿದ್ದರೂ ಕೃಷ್ಣೆ ಉಗಮಸ್ಥಾನ ಮಹಾಬಳೇಶ್ವರ ಹಾಗೂ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿದ ಪರಿಣಾಮ ಇಲ್ಲಿನ ಲಾಲಬಹಾದ್ದೂರ ಶಾಸ್ತ್ರೀ ಜಲಾಶಯ ಮಂಗಳವಾರ ಸಂಪೂರ್ಣ ಭರ್ತಿಯಾಗಿದೆ.

Advertisement

ಬಿಸಿಲನಾಡು, ಮಳೆಯಾದರೆ ಬೆಳೆ ಮಳೆಯಾಗದಿದ್ದರೆ ಗುಳೆ ಎನ್ನುವ ವ್ಯಂಗ್ಯೋಕ್ತಿಯಂತೆ ವಿಜಯಪುರ ಜಿಲ್ಲೆಯಲ್ಲಿ ಕಳೆದ ವರ್ಷ ಬರ ಬಿದ್ದಿದ್ದರಿಂದ ನೀರಿಗಾಗಿ ಪರಿತಪಿಸುವಂತಾಗಿತ್ತು, ಆದರೆ ಕೆಲ ದಿನಗಳಿಂದ ಒಂದಿಷ್ಟು ಮಳೆ ಸುರಿದಿದ್ದು, ರೈತರು ವರುಣನನ್ನು ನಂಬಿ ಬೀಜ ಬಿತ್ತನೆ ಮಾಡಿದ್ದಾರೆ. ರಾಜ್ಯದಲ್ಲಿ ವ್ಯಾಪಕವಾಗಿ ಮಳೆಯಾಗದಿದ್ದರೂ ಮಹಾರಾಷ್ಟ್ರದ ಮಹಾಬಲೇಶ್ವರ, ಬೆಳಗಾವಿ ಜಿಲ್ಲೆ ಸೇರಿದಂತೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾಗಿದ್ದರಿಂದ ಜೂ. 16ರಿಂದ ಆಲಮಟ್ಟಿ ಲಾಲ್‌ ಬಹಾದ್ದೂರ್‌ ಶಾಸ್ತ್ರೀ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಬಿಸಿಲಿನಿಂದ ಬಸವಳಿದಿದ್ದ ರೈತರ ಮೊಗದಲ್ಲಿ ಸಮಾಧಾನ ಮೂಡುವಂತಾಗಿದೆ.

519.60 ಮೀ. ಎತ್ತರ, ಗರಿಷ್ಠ 123.081 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಮಂಗಳವಾರ 35,672 ಕ್ಯೂಸೆಕ್‌ ಒಳಹರಿವು ದಾಖಲಾಗಿದೆ. ಗರಿಷ್ಠ ಮಟ್ಟದಲ್ಲಿ ನೀರು ಸಂಗ್ರಹವಾಗಿದ್ದು, ಜಲಚರಗಳಿಗಾಗಿ 17.650 ಟಿಎಂಸಿ ಮೀಸಲಿರಿಸಿ, ಉಳಿದ 105.431 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಬಹುದಾಗಿದೆ. ಕಳೆದ ವರ್ಷವೂ ಇದೇ ದಿನ ಜಲಾಶಯ ಭರ್ತಿಯಾಗಿತ್ತು. ಒಳಹರಿವು 15,420 ಕ್ಯೂಸೆಕ್‌ ಇತ್ತು. ಅಷ್ಟೇ ಪ್ರಮಾಣದ ನೀರನ್ನು ಕೆಪಿಸಿಎಲ್‌ ಹಾಗೂ ಕಾಲುವೆಗಳ ಮೂಲಕ ಹರಿಸಲಾಗುತ್ತಿತ್ತು. ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಆಲಮಟ್ಟಿ ಲಾಲ್‌
ಬಹಾದ್ದೂರ್‌ ಶಾಸ್ತ್ರೀ ಹಾಗೂ ನಾರಾಯಣಪುರ ಬಸವಸಾಗರ ಜಲಾಶಯಗಳಿಂದ ಸುಮಾರು 6.5 ಲಕ್ಷ ಹೆಕ್ಟೇರ್‌ ಜಮೀನು ನೀರಾವರಿಗೆ ಒಳಪಡಲಿದೆ. ಬಸವಸಾಗರ ಜಲಾಶಯ ವ್ಯಾಪ್ತಿಯಲ್ಲಿ ನಾರಾಯಣಪುರ ಎಡದಂಡೆ ಕಾಲುವೆ-27961, ಹುಣಸಗಿ ಶಾಖಾ ಕಾಲುವೆ-22172, ರಾಂಪುರ ಏತ ನೀರಾವರಿ ಕಾಲುವೆ-21571.50, ಶಹಾಪುರ ಶಾಖಾ ಕಾಲುವೆ- 103417, ಮುಡಬೂಳ ಶಾಖಾ ಕಾಲುವೆ-41885, ಇಂಡಿ ಶಾಖಾ ಕಾಲುವೆ-124110.92, ಇಂಡಿ ಏತ ನೀರಾವರಿ ಯೋಜನೆ-50838.10, ಜೇವರ್ಗಿ ಶಾಖಾ ಕಾಲುವೆ-55266.58, ನಾರಾಯಣಪುರ ಬಲದಂಡೆ ಕಾಲುವೆ-97202.94, ರಾಜನಕೊಳೂರ ಏತ ನೀರಾವರಿ-845.19, ಮರೋಳ (ರಾಮಥಾಳ) ಏತ ನೀರಾವರಿ ಮೊದಲ ಹಂತಪೂರ್ವ ಕಾಲುವೆ- 6015.93, ಮರೋಳ (ರಾಮಥಾಳ) ಮೊದಲ ಹಂತ ಪಶ್ಚಿಮ ಕಾಲುವೆ-6970.80, ಮರೋಳ (ರಾಮಥಾಳ) ಹಂತ 2 ಹನಿ ನೀರಾವರಿ ಪೂರ್ವ-9840.97, ಮರೋಳ (ರಾಮಥಾಳ) ಹಂತ 2 ಹನಿ ನೀರಾವರಿ ಪಶ್ಚಿಮ-9360.57 ಹೆಕ್ಟೇರ್‌ ಹಾಗೂ ಆಲಮಟ್ಟಿ ಜಲಾಶಯ ವ್ಯಾಪ್ತಿಯಲ್ಲಿ ಬರುವ ಆಲಮಟ್ಟಿ ಎಡದಂಡೆ ಕಾಲುವೆ-21981.11, ಆಲಮಟ್ಟಿ ಬಲದಂಡೆ ಕಾಲುವೆ-8939.98, ಮುಳವಾಡ ಏತ ನೀರಾವರಿ ಪೂರ್ವ
ಕಾಲುವೆ-6046.91, ಮುಳವಾಡ ಏತ ನೀರಾವರಿ ಪಶ್ಚಿಮ ಕಾಲುವೆ-15862.84, ಸೊನ್ನ ಏತ ನೀರಾವರಿ-546.69, ತಿಮ್ಮಾಪುರ ಏತ ನೀರಾವರಿ ಯೋಜನೆ ಡಿಸಿ 1-12,472.38, ತಿಮ್ಮಾಪುರ ಏತ ನೀರಾವರಿಯೋಜನೆ ಡಿಸಿ 2-3382.86, ಚಿಮ್ಮಲಗಿ ಏತ ನೀರಾವರಿ ಸಂಯುಕ್ತ ಕಾಲುವೆ-1073.31, ಚಿಮ್ಮಲಗಿ ಏತ ನೀರಾವರಿ ಪಶ್ಚಿಮ ಕಾಲುವೆ-4140.47, ತೆಗ್ಗಿಸಿದ್ದಾಪುರ ಏತ ನೀರಾವರಿ ಯೋಜನೆ-471.68, ರೊಳ್ಳಿಮನ್ನಿಕೇರಿ-797.20 ಹೆಕ್ಟೇರ್‌ ಸೇರಿ ಒಟ್ಟು 6,53,173.93 ಹೆಕ್ಟೇರ್‌ ಪ್ರದೇಶವು ಮುಂಗಾರು ಹಂಗಾಮಿಗೆ ನೀರಾವರಿಗೊಳಪಡಲಿವೆ.

ವಿದ್ಯುತ್‌ಗೂ ನೀರು: ಕೂಡಗಿಯಲ್ಲಿ ನಿರ್ಮಿಸಿರುವ ರಾಷ್ಟ್ರೀಯ ಉಷ್ಣ ವಿದ್ಯುತ್‌ ಸ್ಥಾವರಕ್ಕೆ ಆಲಮಟ್ಟಿ ಪಾರ್ವತಿಕಟ್ಟೆ ಸೇತುವೆ ಹತ್ತಿರದಿಂದ 18 ಕಿ.ಮೀ. ಅಂತರದ ಕೊಳವೆ ಮಾರ್ಗವಾಗಿ ಒಂದು ವರ್ಷಕ್ಕೆ 2.50 ಟಿಎಂಸಿ ಹಾಗೂ ಆಲಮಟ್ಟಿ ಜಲಾಶಯದ ಬಲಭಾಗದಲ್ಲಿರುವ ಕರ್ನಾಟಕ ವಿದ್ಯುತ್‌ ಉತ್ಪಾದನಾ ಘಟಕದ 55 ಮೆ.ವ್ಯಾ.ನ 5 ಹಾಗೂ 15 ಮೆ.ವ್ಯಾ.ನ 1 ಘಟಕ ಸೇರಿದಂತೆ ಒಟ್ಟು ಆರು ಘಟಕಗಳಿಂದ 290 ಮೆ.ವ್ಯಾ. ವಿದ್ಯುತ್‌ ಉತ್ಪಾದಿಸಲಾಗುತ್ತಿದೆ.

ಕೆರೆ-ಬಾಂದಾರ: ವಿಜಯಪುರ ಜಿಲ್ಲೆಯ 16 ಕೆರೆ, 5 ಬಾಂದಾರ್‌ ಮತ್ತು ಬಾಗಲಕೋಟೆ ಜಿಲ್ಲೆಯ 7 ಕೆರೆಗಳ ತುಂಬುವ ಯೋಜನೆ ಹಾಗೂ ಮಮದಾಪುರ, ಸಾರವಾಡ, ಬಬಲೇಶ್ವರ, ಬೇಗಂತಲಾಬ, ಭೂತನಾಳ, ತಿಡಗುಂದಿ, ತಿಕೋಟಾ ಮತ್ತು ಇತರೆ 10 ಕೆರೆ ತುಂಬಲಾಗುತ್ತಿದೆ.
ಒಟ್ಟಾರೆ ಆಲಮಟ್ಟಿ ಲಾಲ್‌ ಬಹಾದ್ದೂರ್‌ ಶಾಸ್ತ್ರೀ  ಜಲಾಶಯದಲ್ಲಿ ಸಂಗ್ರಹವಾಗುವ 123.081 ಟಿಎಂಸಿ ಅಡಿ ನೀರಿನಲ್ಲಿ ಎಲ್ಲ ಕಾಲುವೆ ಜಾಲ, ಕೆರೆ ತುಂಬುವ ಯೋಜನೆ, ಕೈಗಾರಿಕೆ, ಭಾಷ್ಪೀಕರಣ ಹಾಗೂ ಕುಡಿಯುವ ನೀರು ಸೇರಿದಂತೆ ಒಟ್ಟು 17.90 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಲಾಗುತ್ತದೆ. ಅಲ್ಲದೇ ನಾರಾಯಣಪುರದ ಬಸವಸಾಗರದಲ್ಲಿ 33.313 ಟಿಎಂಸಿ ಅಡಿ ನೀರಿನಲ್ಲಿ ಎಲ್ಲ ಕಾಲುವೆಗಳು, ಹನಿ ನೀರಾವರಿ ಯೋಜನೆಗಳು, ಕೈಗಾರಿಕೆ, ಭಾಷ್ಪೀಕರಣ ಹಾಗೂ ಕುಡಿಯುವ ನೀರು ಸೇರಿದಂತೆ 105.75 ಟಿಎಂಸಿ ಅಡಿ ನೀರು ಬಳಸಿಕೊಳ್ಳಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next