Advertisement

ಮನೆಯ ಬಾಗಿಲೂ ಒಡೆದಿಲ್ಲಾ, ನಕಲಿ ಕೀಯೂ ಬಳಸಿಲ್ಲಾ, ಆದರೂ ಮನೆಯಲ್ಲಿ 2 KG ಚಿನ್ನ ನಾಪತ್ತೆ

02:09 PM Sep 01, 2020 | sudhir |

ಮೈಸೂರು: ನಕಲಿ ಕೀ ಬಳಕೆಯಾಗಿಲ್ಲ, ಮನೆಯ ಹಿಂಬಾಗಿಲು, ಮುಂಬಾಗಿಲು ಯಾವುದನ್ನೂ ಮೀಟಿಲ್ಲ ಆದರೂ ಮನೆಯಲ್ಲಿ ಎರಡು ಕೆಜಿ ಚಿನ್ನ ಕಳ್ಳತನವಾಗಿರುವ ಕುರಿತು ತಿಳಿದು ಬಂದಿದ್ದು, ಈ ವಿಚಿತ್ರ ರೀತಿಯ ಕಳ್ಳತನ ಮೈಸೂರಿನ ಸರಸ್ವತಿಪುರಂನಲ್ಲಿ ನಡೆದಿದ್ದು ಹಲವು ರೀತಿಯ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

Advertisement

ಸರಸ್ವತಿಪುರಂನಲ್ಲಿರುವ 5ನೇ ಮುಖ್ಯ ರಸ್ತೆಯಲ್ಲಿ ವಿಜಿ ಕುಮಾರ್ ಮತ್ತು ವನಜಾಕ್ಷಿ ಎಂಬವರ ಮನೆಯಲ್ಲಿಯೇ ಕಳ್ಳತನ ನಡೆದಿದೆ.

ವಿಜಿಕುಮಾರ್ ಬಿಸಿನೆಸ್ ಮೆನ್ ಆಗಿದ್ದು, ಅವರ ಪತ್ನಿ ವನಜಾಕ್ಷಿ ಮೈಸೂರು ನಗರ ಪೊಲೀಸ್ ವಿಭಾಗದಲ್ಲಿ ದಫೇದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಜಿ ಕುಮಾರ್ ಅವರಿಗೆ ಆ.17ರಂದು ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಅವರನ್ನು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಇದೀಗ ಅವರ ತಾಯಿಯವರಲ್ಲಿಯೂ ಕೋವಿಡ್ ಸೋಂಕು ದೃಢಪಟ್ಟಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಈ ಮಧ್ಯೆ ಸೋಮವಾರ ಮಧ್ಯಾಹ್ನ ಅವರನ್ನು ಆಸ್ಪತ್ರೆಗೆ ಕರೆದೊಯ್ದ ವೇಳೆ ಮನೆಯಲ್ಲಿದ್ದ 2ಕೆಜಿಯಷ್ಟು ಚಿನ್ನಾಭರಣವನ್ನು ಕಳ್ಳರು ಕದ್ದೊಯ್ದಿದ್ದಾರೆ ಎನ್ನಲಾಗಿದೆ.

ಒಂದೂವರೆ ಕೆಜಿಯಷ್ಟು ಚಿನ್ನಾಭರಣ ಇವರದ್ದಾಗಿದ್ದು, ಮತ್ತೆ ಅರ್ಧ ಕೆಜಿಯಷ್ಟು ಚಿನ್ನ ಇವರ ಸಂಬಂಧಿಕರು ತಮ್ಮ ಮನೆ ರಿಪೇರಿಯಲ್ಲಿದೆ ಎಂದು ಇವರ ಮನೆಯಲ್ಲಿಯೇ ಇರಿಸಿದ್ದರು ಎನ್ನಲಾಗಿದೆ. ಆದರೆ ಕಳ್ಳತನ ಮಾತ್ರ ವಿಚಿತ್ರ ರೀತಿಯಲ್ಲಿ ನಡೆದಿದೆ. ಮನೆಯ ನಕಲಿ ಕೀ ಬಳಕೆಯಾಗಿಲ್ಲ, ಬಾಗಿಲನ್ನು ಮೀಟಿಲ್ಲ, ಆದರೂ ಕಳ್ಳತನ ನಡೆದಿದೆ.

ಸರಸ್ವತಿಪುರಂ ಪೊಲೀಸ್ ಠಾಣೆಯ ಠಾಣಾಧಿಕಾರಿ ವಿಜಯ್ ಕುಮಾರ್ ಮತ್ತು ಭವ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಕೂಡ ಆಗಮಿಸಿ ಪರಿಶೀಲನೆ ನಡೆಸಿದೆ. ಯಾವ ಕುರುಹು ಕೂಡ ಕಂಡು ಬರುತ್ತಿಲ್ಲ ಎನ್ನಲಾಗಿದ್ದು, ಮನೆಯವರೇ ಯಾರೋ ತೆಗೆದಿರಬೇಕು. ಅಥವಾ ಅವರ ಪರಿಚಿತರು ಕೃತ್ಯ ನಡೆಸಿರಬೇಕೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

Advertisement

ಸರಸ್ವತಿ ಪುರಂಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next