Advertisement

ಮೈಸೂರು: ಕ್ಲೋರಿನ್ ಸಿಲಿಂಡರ್ ನಲ್ಲಿದ್ದ ಅನಿಲ ಸೋರಿಕೆ; 25 ಜನರು ಅಸ್ವಸ್ಥ

07:10 PM Mar 07, 2022 | Team Udayavani |

ಮೈಸೂರು: ಮೈಸೂರು ರೈಲ್ವೆ ಕ್ವಾಟ್ರಸ್ ನಲ್ಲಿ ಕ್ಲೋರಿನ್ ಸಿಲಿಂಡರ್ ನಲ್ಲಿದ್ದ ಅನಿಲ ಸೋರಿಕೆಯಾಗಿ 25 ಜನರು ಅಸ್ವಸ್ಥರಾಗಿರುವ ಘಟನೆ ಸೋಮವಾರ ಸಂಜೆ ನಡೆದಿದೆ.

Advertisement

ಮೈಸೂರಿನ ಯಾದವಗಿರಿಯಲ್ಲಿರುವ ರೈಲ್ವೆ ಕ್ವಾಟ್ರಸ್ ನಲ್ಲಿ 3 ಗಂಟೆ ಸಮಯದಲ್ಲಿ ಕೊಠಡಿಯೊಂದರಲ್ಲಿ ಇರಿಸಲಾಗಿದ್ದ ಕ್ಲೋರಿನ್ ಸಿಲೆಂಡರ್ ಲೀಕ್ ಆಗಿದೆ. ಅನಿಲ ಸೋರಿಕೆಯಿಂದ ಅಕ್ಕಪಕ್ಕದ ಮನೆಯಲ್ಲಿದ್ದ 25ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಕೂಡಲೆ ರೈಲ್ವೆ ಆಸ್ಪತ್ರೆಗೆ ಎಲ್ಲರನ್ನು ದಾಖಲಿಸಿ ಆಕ್ಸಿಜನ್ ನೀಡಲಾಗಿದೆ.

ಸಧ್ಯಕ್ಕೆ ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅನಿಲ ಸೋರಿಕೆ ತಡೆಯಲು ಅಗ್ನಿಶಾಮಕ ಮತ್ತು ರೈಲ್ವೆ ರಕ್ಷಣ ಸಿಬ್ಬಂದಿ ಪ್ರಯತ್ನ ನಡೆಸಿದ್ದಾರೆ. ಘಟನಾ ಸ್ಥಳವನ್ನು ಸೀಲ್ ಮಾಡಲಾಗಿದೆ. ಜತೆಗೆ ಮೈಸೂರು-ಕೆ ಆರ್ ಎಸ್ ರಸ್ತೆ ಬಂದ್ ಮಾಡಲಾಗಿದ್ದು ರೈಲ್ವೆ ಕ್ವಾಟ್ರಸ್ ಗೆ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಕೆಲ ಕಾಲ ರೈಲ್ವೆ ಕ್ವಾಟ್ರಸ್ ನಿವಾಸಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next