Advertisement

Mysuru: ಕ್ಷುಲ್ಲಕ ಕಾರಣಕ್ಕೆ ಜೋಡಿ ಕೊ*ಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ

01:57 AM Dec 15, 2024 | Team Udayavani |

ಮೈಸೂರು: ಕ್ಷುಲ್ಲಕ ಕಾರಣಕ್ಕೆ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಅಪರಾಧಿಗೆ ಮೈಸೂರಿನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

Advertisement

2024ರ ಮೇ 24ರಂದು ಎಚ್‌.ಡಿ.ಕೋಟೆ ರಸ್ತೆಯ ಕೋಟೆ ಹುಂಡಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಆಟೋ ರಿಕ್ಷಾ ಹಾಗೂ
ಗೂಡ್ಸ್ ವಾಹನದ ನಡುವೆ ಸಣ್ಣ ಪ್ರಮಾಣದ ಅಪಘಾತ ವಾಗಿತ್ತು. ಚಾಲಕರಿಬ್ಬರ ನಡುವೆ ಜಗಳ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಅಷ್ಟರಲ್ಲಿ ಆಟೋ ಚಾಲಕ ಯೋಗೇಶ್‌, ಗೂಡ್ಸ್ ವಾಹನದಲ್ಲಿದ್ದ ಟಿ. ಮಂಜುನಾಥ ಮತ್ತು ಆರ್‌. ಮಂಜುನಾಥ ಅವರ ಮೇಲೆ ತನ್ನ ಬಳಿ ಇದ್ದ ಚಾಕುವಿನಿಂದ ಮನಸೋ ಇಚ್ಛೆ ಚುಚ್ಚಿ ಕೊಲೆ ಮಾಡಿದ್ದ. ಜಯಪುರ ಠಾಣೆ ನಿರೀಕ್ಷಕ ಕೆ. ಜೀವನ್‌ ತನಿಖೆ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.