Advertisement
ಕೊರೊನಾ ಸೋಂಕು ಕಾರಣಕ್ಕಾಗಿ ಕಳೆದ ಎರಡು ವರ್ಷಗಳಿಂದ ಅದ್ಧೂರಿಯಾಗಿ ಹೊಸ ವರ್ಷ ಆಚರಣೆ ಮಾಡಿರಲಿಲ್ಲ. ಈ ಬಾರಿ ಜ.1ರಂದು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಲಡ್ಡುಗಳನ್ನು ವಿತರಿಸಲಾಗುತ್ತಿದ್ದು, ಅದಕ್ಕಾಗಿ ತಿರುಪತಿ ಮಾದರಿಯ 2 ಲಕ್ಷ ಲಡ್ಡುಗಳು ಸಿದ್ಧವಾಗುತ್ತಿವೆ. ಅಂದು ಮುಂಜಾನೆ 4 ಗಂಟೆ ಯಿಂದ ರಾತ್ರಿ 12 ಗಂಟೆಯವರೆಗೆ ಭಕ್ತಾದಿಗಳಿಗೆ ಲಡ್ಡುಗಳನ್ನು ವಿತರಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಯೋಗಾ ನರಸಿಂಗಸ್ವಾಮಿ ದೇಗುಲದ ಸಂಸ್ಥಾಪಕ ಭಾಷ್ಯಂ ಸ್ವಾಮೀಜಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Related Articles
ಲಡ್ಡು ತಯಾರಿಕೆಗೆ 75 ಕ್ವಿಂಟಲ್ ಕಡ್ಲೆಹಿಟ್ಟು, 200 ಕಿಂಟಾಲ್ ಸಕ್ಕರೆ, 6000 ಲೀಟರ್ ಖಾದ್ಯ ತೈಲ, 200 ಕೆ.ಜಿ ಗೋಡಂಬಿ, 200 ಕೆ.ಜಿ ಒಣದ್ರಾಕ್ಷಿ, 100 ಕೆ.ಜಿ ಬಾದಾಮಿ, 500 ಕೆ.ಜಿ ಡೈಮಂಡ್ ಸಕ್ಕರೆ, 1000 ಕೆ.ಜಿ ಬೂರಾ ಸಕ್ಕರೆ, 20 ಕೆ.ಜಿ ಪಿಸ್ತಾ, 50 ಕೆ.ಜಿ ಏಲಕ್ಕಿ, 40 ಕೆ.ಜಿ ಜಾಕಾಯಿ ಮತ್ತು ಜಾಪತ್ರೆ, 10 ಕೆ.ಜಿ, ಪಚ್ಚೆ ಕರ್ಪೂರ, 100 ಕೆ.ಜಿ ಲವಂಗಗಳನ್ನು ಬಳಸಿ ತಯಾರಿಸಲಾಗಿದೆ ಎಂದು ತಿಳಿಸಿದರು. ದೇವಸ್ಥಾನದ ಆಡಳಿತಾಧಿಕಾರಿ ಎನ್. ಶ್ರೀನಿವಾಸನ್ ಸೇರಿದಂತೆ ಇತರರು ಇದ್ದರು.
Advertisement
ಕ್ರೈಸ್ತ ವರ್ಷಾರಂಭದ ಹಿನ್ನೆಲೆಯಲ್ಲಿ ವಿಶ್ವಶಾಂತಿ, ಭ್ರಾತೃತ್ವ ಮತ್ತು ಸರ್ವಧರ್ಮ ಸಮನ್ವಯತೆಗಾಗಿ ಮತ್ತು ನಾಡಿನ ಎಲ್ಲಾ ಜನರ ಒಳಿತಿಗಾಗಿ ಪ್ರಾರ್ಥಿಸಿ ಈ ಲಡ್ಡು ಪ್ರಸಾದ ನಿವೇದನೆ ಮತ್ತು ಭಕ್ತಾದಿಗಳಿಗೆ ವಿನಿಯೋಗ ಕಾರ್ಯಕ್ರಮವನ್ನು ಭಕ್ತರ ಸಹಕಾರದಿಂದ ನೆರವೇರಿಸಲಾಗುತ್ತಿದೆ.●ಭಾಷ್ಯಂ ಸ್ವಾಮೀಜಿ, ದೇವಸ್ಥಾನದ ಸಂಸ್ಥಾಪಕ ಹೊಸ ವರ್ಷದಂದು ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಗುವುದು. ಜ.2ರಂದು ವೈಕುಂಠ ಏಕಾದಶಿ ಇರುವುದರಿಂದ ಅಂದು ಮುಂಜಾನೆಯೇ ವೈಕುಂಠ ದ್ವಾರದ ಪ್ರವೇಶ ಕಲ್ಪಿಸಲಾಗುವುದು. ನಾಲ್ಕನೆ ಅಲೆ ಆತಂಕವಿರು ವುದರಿಂದ ಭಕ್ತರು ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
●ಎನ್. ಶ್ರೀನಿವಾಸನ್, ದೇವಸ್ಥಾನದ ಆಡಳಿತಾಧಿಕಾರಿ