Advertisement
ಇಂದು(ಶುಕ್ರವಾರ, ಜೂನ್ 4) ನಡೆದ ಕೆಲ ವಿದ್ಯಾಮಾನಗಳಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಆಯುಕ್ತರ ಆರೋಪಕ್ಕೆ ಸಿಡಿಮಿಡಿಗೊಂಡು ಕೊರೊನಾ ನಿರ್ವಹಣೆ ಸಂಬಂಧ‘ ಜಿಲ್ಲಾಡಳಿತಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದರು.
Related Articles
Advertisement
ಡಿ.ಸಿಗೆ ಸ್ವಿಮಿಂಗ್‌ಪೂಲ್ ತೂಗುಗತ್ತಿ : ಇತ್ತೀಚೆಗೆ ಜಿಲ್ಲಾಧಿಕಾರಿಗಳ ಅಧಿಕೃತ ಅತಿಥಿಗೃಹವಾದ ಪಾರಂಪರಿಕ ಕಟ್ಟದಲ್ಲಿ ಡಿ.ಸಿ ನಿಯಮ ಬಾಹಿರವಾಗಿ ಸರ್ಕಾರದ ಹಣದಲ್ಲಿ ಸ್ವಿಮಿಂಗ್ ಪೂಲ್ ಹಾಗೂ ವ್ಯಾಯಾಮ ಶಾಲೆಯನ್ನು ಮಾಡಿಸಿದ್ದಾಾರೆ ಎಂದು ಶಾಸಕ ಸಾ.ರಾ. ಮಹೇಶ್ ಆರೋಪಿಸಿ ತನಿಖೆಗೆ ಆಗ್ರಹಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಈ ನಡುವೆ ಡಿ.ಸಿ-ಆಯುಕ್ತರ ಒಳ ಜಗಳ ಜಗಜ್ಜಾಹೀರಾಗಿರುವ ಬೆನ್ನಲ್ಲೆ ರಾಜ್ಯ ಸರ್ಕಾರ ಪಾರಂಪರಿಕ ಕಟ್ಟಡವಾದ ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಇನ್ ಡೋರ್ ಸ್ವಿಮಿಂಗ್ ಪೂಲ್ ಮತ್ತು ವ್ಯಾಯಾಮ ಶಾಲೆ ನಿರ್ಮಾಣ ಮಾಡಿರುವ ಸಂಬಂಧ ತನಿಖೆ ನಡೆಸಿ, ಏಳು ದಿನಗಳಲ್ಲಿ ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತರಿಗೆ ಆದೇಶಿಸಿದೆ.
ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳ ತಪ್ಪು ಮೇಲ್ನೋಟಕ್ಕೆ ಕಂಡುಬಂದರೂ ಅದು ಸಾಬೀತಾದರೆ ಡಿ.ಸಿ ತಲೆದಂಡ ನಿಶ್ಚಿತ ಎಂದು ಕೆಲ ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಜಾಲತಾಣದಲ್ಲಿ ಪರವಿರೋಧ ಅಭಿಯಾನ : ಡಿ.ಸಿ-ಆಯುಕ್ತರ ಜಗಳ ಬೀದಿಗೆ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಡಿ.ಸಿ ಮತ್ತು ಆಯುಕ್ತರನ್ನು ಬೆಂಬಲಿಸಿ ಸಾವಿರಾರು ಮಂದಿ ಪೋಸ್ಟ್, ಪ್ರತಿಕ್ರಿಯೆ ನೀಡುವ ಮೂಲಕ ತಮ್ಮ ನೆಚ್ಚಿನ ಅಧಿಕಾರಿಗಳನ್ನು ಸಮರ್ಥಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಈ ನಡುವೆ ಇನ್ನೂ ಕೆಲವರು ಡಿ.ಸಿ ವರ್ಗಾವಣೆಗೆ ಆಗ್ರಹಿಸಿದ್ದರೆ, ಆಯುಕ್ತರು ರಾಜೀನಾಮೆ ವಾಪಾಸ್ ಪಡೆಯುವಂತೆ ಆಗ್ರಹಿಸಿದ್ದಾಾರೆ.
ಒಟ್ಟಾರೆ ಮೈಸೂರಿನ ಇಬ್ಬರೂ ಮಹಿಳಾ ಐಎಎಸ್ ಅಧಿಕಾರಿಗಳ ತಿಕ್ಕಾಟ ರಾಜ್ಯದ ಗಮನ ಸೆಳೆದಿದೆ. ಮೈಸೂರು ಡಿ.ಸಿ, ಪಾಲಿಕೆ ಆಯುಕ್ತೆ ನಡುವಿನ ಗುದ್ದಾಟಕ್ಕೆ ಸರ್ಕಾರ ಯಾವಾಗ ಪೂರ್ಣವಿರಾಮ ಹಾಕಲಿದೆ ಎಂಬುದನ್ನು ಕಾದುನೋಡಬೇಕಿದೆ.
ರಾಜೀನಾಮೆ ನಿರ್ಧಾರವನ್ನು ನಾನು ದುಡುಕಿ ತೆಗೆದುಕೊಂಡಿದ್ದಲ್ಲ, ಬಹಳ ಯೋಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. ಜಿಲ್ಲಾಧಿಕಾರಿ ಇಂತಹ ಸಮಯದಲ್ಲಿ ಜನರ ಜೀವ ಉಳಿಸಲು ಶ್ರಮಿಸುವ ಬದಲು, ಸ್ವಹಿತಾಸಕ್ತಿ ಹಾಗೂ ಅಹಂಕಾರದಿಂದ ಜಿಲ್ಲೆಯ ಪರಿಸ್ಥಿತಿಯನ್ನು ಹಾಳು ಮಾಡುತ್ತಿದ್ದಾಾರೆ.
– ಶಿಲ್ಪಾನಾಗ್, ಪಾಲಿಕೆ ಆಯುಕ್ತೆ.
ಅಧಿಕಾರಿಗಳಿಗೆ ಒಂದು ವ್ಯವಸ್ಥೆ ಮತ್ತು ನಿಯಮವಿದೆ. ಅದನ್ನು ಪಾಲಿಸಬೇಕು. ಗುರುವಾರವೇ ಪಾಲಿಕೆ ಆಯುಕ್ತರ ಆರೋಪಗಳಿಗೆ ಸ್ಪಷ್ಟವಾಗಿ ಉತ್ತರ ಕೊಟ್ಟಿದ್ದೇನೆ. ಈ ಸಂಬಂಧ‘ಸರ್ಕಾರಕ್ಕೆ ಮಾಹಿತಿ ಸಲ್ಲಿಸಲಾಗಿದೆ ಮತ್ತು ಮುಖ್ಯ ಕಾರ್ಯದರ್ಶಿಗೆ ವರದಿ ಮಾಡಲಾಗಿದೆ.
– ರೋಹಿಣಿ ಸಿಂಧೂರಿ, ಜಿಲ್ಲಾಧಿಕಾರಿ.