Advertisement
ಕೋವಿಡ್-19 ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಮೈಸೂರು ದಸರಾ ಮಹೋತ್ಸವ ಈ ಬಾರಿ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.
Related Articles
Advertisement
ಪಾವಗಡ ಸೋಲಾರ್ ಪಾರ್ಕ್ ವಿಶ್ವದ ಮೊದಲ ಬೃಹತ್ ಸೋಲಾರ್ ವಿದ್ಯುತ್ ತಯಾರಿಕಾ ಘಟಕವಾಗಿದೆ. ಸುಮಾರು 12 ಸಾವಿರ ಕೋಟಿ ವೆಚ್ಚದಲ್ಲಿ 13 ಸಾವಿರ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದ್ದು 2050 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ.
ವಿಶೇಷ:
ಸುಮಾರು 27 ಅಡಿ ಉದ್ದ 12 ಅಡಿ ಅಗಲ ಹಾಗೂ 13 ಅಡಿ ಎತ್ತರದಲ್ಲಿ ಎರಡು ವಿಷಯಗಳ ಸ್ತಬ್ಧಚಿತ್ರ ನಿರ್ಮಾಣವಾಗುತ್ತಿದೆ. ಮುಂಭಾಗದಲ್ಲಿ ಹೆಲಿಕ್ಯಾಪ್ಟರ್ ಮತ್ತು ಘಟಕ, ಹಿಂಭಾಗದಲ್ಲಿ ಸೋಲಾರ್ ಪಾರ್ಕ್ ವಿನ್ಯಾಸಗೊಳಿಸಲಾಗಿದೆ.
ಸೆಪ್ಟೆಂಬರ್ 19 ರಿಂದ ಕಲಾವಿದ, ಪತ್ರಕರ್ತ ತಿಪಟೂರು ಕೃಷ್ಷನೇತೃತ್ವದಲ್ಲಿ ಸುಮಾರು 18 ಜನ ಕಲಾವಿದರು ಸೇರಿ ಕಲಾಕೃತಿ ತಂಡ ಸ್ತಬ್ಧಚಿತ್ರ ನಿರ್ಮಾಣದಲ್ಲಿ ತೊಡಗಿದ್ದಾರೆ.
2015 ರಿಂದ ತುಮಕೂರು ಜಿಲ್ಲೆ ಸ್ತಬ್ಧಚಿತ್ರ ನಿರ್ಮಾಣದಲ್ಲಿ ತೊಡಗಿರುವ ಕಲಾಕೃತಿ ತಂಡ ಮೂರು ಬಾರಿ ವಿಭಾಗ ಮಟ್ಟದ ಪ್ರಶಸ್ತಿ ಪಡೆದು, ಜಿಲ್ಲೆಗೆ ಕೀರ್ತಿ ತಂದಿರುವುದು ವಿಶೇಷ.
ಅರಳುಗುಪ್ಪೆ ಚನ್ನಕೇಶವ ದೇವಾಲಯ, ಎಡೆಯೂರು ಸಿದ್ದಲಿಂಗೇಶ್ವರ, ಸಿದ್ದಗಂಗ ಶ್ರೀ ಶಿವಕುಮಾರ ಸ್ವಾಮಿಗಳ ಸ್ತಬ್ಧಚಿತ್ರ ಜನಮನ್ನಣೆ ಗಳಿಸಿದ್ದವು.