Advertisement

ಮೈಸೂರು ದಸರಾ ನಾಡಿನ ಸಂಸ್ಕೃತಿಯ ಪ್ರತೀಕ

05:03 PM Oct 16, 2018 | Team Udayavani |

ನಂಜನಗೂಡು: ನಾಡ ಸಂಸ್ಕೃತಿ ಹಾಗೂ ಪರಂಪರೆ ಉಳಿಸಿ ಬೆಳೆಸಬೇಕಾದುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದು ಶಾಸಕ ಹರ್ಷವರ್ಧನ್‌ ಹೇಳಿದರು. ಇಲ್ಲಿನ ತಾಲೂಕು ಆಡಳಿತ ಏರ್ಪಡಿಸಿದ್ದ ಗ್ರಾಮೀಣ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರದ ಪಾಲುದಾರ ಕಾಂಗ್ರೆಸ್‌ ಪಕ್ಷ ನಾಡಹಬ್ಬ ದಿಂದ ದೂರ ಉಳಿದಿರುವುದು ತರವಲ್ಲ. ಇದು ಕೇವಲ ಒಂದು ಸರ್ಕಾರ ಅಥವಾ ಪಕ್ಷದ ಸಮಾರಂಭವಲ್ಲ ಆಗಲೂಬಾರದು. ಹೀಗಾಗಿಯೇ ನಾವು ಬಿಜೆಪಿ ಮುಕ್ತ ಮನಸ್ಸಿನಿಂದ ದಸರಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೇವೆ ಎಂದರು.

Advertisement

ಕನ್ನಡ ನಾಡಿನ ಸಂಸ್ಕೃತಿ ಸೊಬಗನ್ನು ಉಳಿಸಲು ಅಂದು ಮಹಾರಾಜರು ಆರಂಭಿಸಿದ್ದ ನವರಾತ್ರಿ ವೈಭವ (ಹಬ್ಬ) ಇಂದು ಸರ್ಕಾರಿ ಕೃಪಾಪೋಷಿತವಾಗಿ ತನ್ನ ಪರಂಪರೆಯ ಗತ ವೈಭವದಿಂದ ದೂರವಾಗುವುದು ಸರಿಯಲ್ಲ. ನಮ್ಮ ಪರಂಪರೆ ಸಂಸ್ಕೃತಿಯನ್ನು ನಾವೇ ಉಳಿಸಿ ಬೆಳೆಸದಿದ್ದರೆ, ನಮ್ಮ ಸಂಸ್ಕೃತಿ ಮೇಲೆ ಓಪನ್‌ ಸ್ಟ್ರೀಟ್‌ನಂತಹ ಪಾಶ್ಚಾತ್ಯ ಸಂಸ್ಕೃತಿ ನಿಧಾನವಾಗಿ ಆವರಿಸಿಕೊಳ್ಳತೊಡಗಿದೆ ಎಂದು ಎಚ್ಚರಿಸಿದರು. 

ಶ್ರೀಕಂಠೇಶ್ವರ ಕಲಾ ಮಂದಿರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಮಕ್ಕಳ ಸಾಂಸ್ಕೃತಿಕ ಕಾರ್ಯಕೃಮಗಳು ಹಾಗೂ ಗುರುಸ್ವಾಮಿಯವರ ಜಾದು ಪ್ರೇಕ್ಷಕರನ್ನು ಆಕರ್ಷಿಸಿತು. ತಹಶೀಲ್ದಾರ್‌ ದಯಾನಂದ, ಜಿಪಂ ಸದಸ್ಯರಾದ ಮಂಗಳಾ, ಸದಾನಂದ, ತಾಪಂ ಉಪಾಧ್ಯಕ್ಷ ಗೊವಿಂದ ರಾಜು, ಸದಸ್ಯರಾದ ಶಿವಣ್ಣ, ಬದನವಾಳು ರಾಮು, ಬಸವರಾಜು ಮಹದೇವಯ್ಯ, ನಗರಸಭಾ ಅಧ್ಯಕ್ಷೆ ಪುಷ್ಪಲತಾ, ಸದಸ್ಯರಾದ ರಾಮಕೃಷ್ಣ, ಬಾಬು ದೇವಾ ಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪುಟ್ಟಲಿಂಗ ಶೆಟ್ಟಿ ಇನ್ನಿತರರು ಭಾಗವಹಿಸಿದ್ದರು.

ದಸರಾ ಮರವಣಿಗೆಗೆ ಚಾಲನೆ ನೀಡಿದ ತಹಶೀಲ್ದಾರ್‌ ದಯಾನಂದ ಸೋಮವಾರ ಬೆಳಗ್ಗೆ 11 ಗಂಟೆಗೆ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಿಂದ ಹೊರಟ ಗ್ರಾಮೀಣ ದಸರಾ ಮೆರವಣೆಗೆಗೆ ಕನ್ನಡಾಂಬೆಯ ಭಾ‌ವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಚಾಲನೆ ನೀಡಿದರು.

ಮೆರವಣೆಗೆಯಲ್ಲಿ ತಾಯಿ ಭುವನೇಶ್ವರಿಯ ಭಾವ ಚಿತ್ರದೊಂದಿಗೆ ನಂದಿಧ್ವಜ, ವೀರಗಾಸೆ, ಮರಗಾಲು ಕುಣಿತ, ಕಂಸಾಳೆ, ಕೀಲುಗೊಂಬೆ ಸೇರಿ ದಂತೆ 13ಕ್ಕೂ ಹೆಚ್ಚು ಕಲಾತಂಡಗಳು ಭಾಗವಸಿದ್ದವು. ಕಾಲೇಜಿನ ಆವರಣದಿಂದ ಹೊರಬಂದ ಮೆರವಣಿಗೆ ಮಹಾತ್ಮ ಗಾಂಧಿ ರಸ್ತೆಯಲ್ಲಿ ಹಾದು ಶ್ರೀಕಂಠೇಶ್ವರ ಕಲಾಮಂದಿರದಲ್ಲಿ ಸಮಾರೋಪಗೊಂಡಿತು.  ಜಿಪಂ ಸದಸ್ಯರಾದ ಮಂಗಳಾ, ಮಧು, ತಾಪಂ ಉಪಾದ್ಯಕ್ಷ ಗೊವಿಂದರಾಜು, ಸದಸ್ಯರಾದ ಶಿವಣ್ಣ, ಬದನವಾಳು ರಾಮು, ಬಸವರಾಜು ಮಹದೇವಯ್ಯ, ಕುಂಬರಳ್ಳಿ ಸುಬ್ಬಣ್ಣ ಸೇರಿದಂತೆ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next