ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇನ್ನು ಕೆಲವೇ ವಾರಗಳು ಬಾಕಿಯಿದೆ. ದಸರಾದ ಮೊದಲ ಕಾರ್ಯಕ್ರಮ ಗಜ ಪಯಣಕ್ಕೆ ಸಿದ್ದತೆ ಮಾಡಲಾಗುತ್ತಿದೆ.
ಇಂದು ದಸರಾ ಗಜಪಡೆಗೆ ನಾಗರಹೊಳೆ ವ್ಯಾಪ್ತಿಯ ಹುಣಸೂರಿನ ವೀರನಹೊಸಹಳ್ಳಿ ಅರಣ್ಯ ಪ್ರದೇಶದಲ್ಲಿ ಪೂಜೆ ನಡೆಸಲಾಗುತ್ತದೆ. ಸಚಿವ ಎಸ್.ಟಿ ಸೋಮಶೇಖರ್ ಅವರು ಗಜಪಯಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ವಿವಿಧ ಶಿಬಿರಗಳಿಂದ ಆನೆಗಳು ವೀರನಹೊಸಹಳ್ಳಿಗೆ ಆಗಮಿಸಲಿದೆ. ಮಾವುತ, ಕಾವಾಡಿಗಳ ಕುಟುಂಬವು ಆಗಮಿಸಲಿದೆ. ಆನೆಗಳ ಸ್ವಾಗತಕ್ಕೆ ಅರಣ್ಯಾಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದು, ದಸರಾಗೆ ಆಯ್ಕೆಯಾಗಿರುವ ಆನೆಗಳಿಗೆ ಜಿಲ್ಲಾಡಳಿತ ವಿಶೇಷ ಪೂಜೆ ಸಲ್ಲಿಸಲಿದೆ.
ಇದನ್ನೂ ಓದಿ:ತೆರವು: 93 ದೇಗುಲಗಳ ಪಟ್ಟಿ ಸಿದ್ಧ: ಮೈಸೂರಿನಲ್ಲಿ ಕಾರ್ಯಾಚರಣೆಗೆ ಜನರ ತೀವ್ರ ವಿರೋಧ
ಅಂಬಾರಿ ಹೊರುವ ಅಭಿಮನ್ಯು ನೇತೃತ್ವದಲ್ಲಿ ಇಂದು ಸಂಜೆ ವೇಳೆಗೆ ಗಜಪಡೆ ಕಾಡಿನಿಂದ ನಾಡಿಗೆ ಬರಲಿದೆ. ಮೈಸೂರಿನ ಅರಣ್ಯ ಭವನದ ಆವರಣದಲ್ಲಿ ಅಭಿಮನ್ಯು ತಂಡ ಬೀಡುಬಿಡಲಿವೆ. ನಗರದ ವಾತಾವರಣಕ್ಕೆ ಮುರ್ನಾಲ್ಕು ದಿನ ಹೊಂದಿಕೊಂಡ ನಂತರ ಅರಮನೆ ಪ್ರವೇಶವಾಗಲಿದೆ.