Advertisement
ನಗರದ ಯಾದವಗಿರಿ 8ನೇ ಮುಖ್ಯರಸ್ತೆಯ ದಿನೇಶ್, ಕ್ಲಾಸಿಯಾ ದಂಪತಿ ಪುತ್ರಿ ರಿಯಾ (3) ಮರಳಿ ಮನೆಗೆ ಬಂದಿದ್ದು, ಕುಟುಂಬದಲ್ಲಿ ನೆಮ್ಮದಿ ತಂದಿದೆ. ಬುಧವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಮನೆಯ ಮುಂದೆ ದಿಯಾ ಆಟವಾಡುತ್ತಿದ್ದಳೆನ್ನಲಾಗಿದೆ.
ಆತಂಕಗೊಂಡ ತಾಯಿ ಕ್ಲಾಸಿಯಾ, ಅವರು ಹುಡುಕಾಟ ನಡೆಸಿ ನಗರದ ವಿ.ವಿ.ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಪೊಲೀಸರು ವಿವಿಧೆಡೆ ಸಂಚಾರ ನಡೆಸಿ ಮಗುವಿನ ಹುಡುಕಾಟದಲ್ಲಿ ನಿರತರಾಗಿದ್ದರು. ಬಳಿಕ ಮಗುವಿನ ಚಿಕ್ಕಪ್ಪನ ಸ್ನೇಹಿತರ ಮೊಬೈಲ್ ನಂಬರ್ ಪಡೆದು ಕರೆ ಮಾಡಿದಾಗ ಮಗು ಹೆಬ್ಟಾಳಿನಲ್ಲಿರುವುದು ತಿಳಿದು ಬಂದಿತು. ಬಳಿಕ ಅಲ್ಲಿಗೆ ತೆರಳಿ ಮಗುವನ್ನು ಮನೆಗೆ ಕರೆತರಲಾಯಿತು.