Advertisement

ಪ್ಲಾಸ್ಟಿಕ್‌ ಮುಕ್ತ ದಸರಾಗೆ ಮೈಸೂರು ನಗರ ಸಜ್ಜು

11:13 PM Sep 15, 2019 | Lakshmi GovindaRaju |

ಮೈಸೂರು: ಈ ಬಾರಿ ಪ್ಲಾಸ್ಟಿಕ್‌ ಮುಕ್ತ ದಸರಾ ಆಚರಣೆಗೆ ನಗರ ಪಾಲಿಕೆ ಸಿದ್ಧವಾಗಿದೆ. ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಪಾಲಿಕೆ ಆಯುಕ್ತ ಗುರುದತ್‌ ಹೆಗಡೆ, ಈ ಬಗ್ಗೆ ಮಾಹಿತಿ ನೀಡಿದರು. ಪ್ರವಾಸಿಗರಿಗೂ ಪ್ಲಾಸ್ಟಿಕ್‌ ಬಗ್ಗೆ ಜಾಗೃತಿ ಮೂಡಿಸಿ, ಈ ಬಾರಿ ಪ್ಲಾಸ್ಟಿಕ್‌ ಮುಕ್ತ ದಸರಾ ಆಚರಣೆಗೆ ಪಾಲಿಕೆ ಸಿದ್ಧವಾಗಿದೆ ಎಂದು ತಿಳಿಸಿದರು.

Advertisement

ಅಲ್ಲದೆ, ದಸರಾ ವೇಳೆ ಮೈಸೂರನ್ನು ಸ್ವಚ್ಛತೆಯಿಂದ ಕಂಗೊಳಿಸುವಂತೆ ಮಾಡಲು ನಗರಪಾಲಿಕೆ ಸಜ್ಜಾಗಿದ್ದು, ನಗರದ ಎಲ್ಲೆಡೆ ಸ್ವಚ್ಛತಾ ಕಾರ್ಯವನ್ನು ಬಿರುಸಿನಿಂದ ಆರಂಭಿಸಿದೆ. 5.7 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಹಮ್ಮಿಕೊಂಡಿದೆ. ಪುಟ್‌ಪಾತ್‌, ರಸ್ತೆ ವಿಭಜಕ ಸ್ವಚ್ಛತೆ ಹಾಗೂ ಬಣ್ಣ ಬಳಿಯುವುದು, ಗಿಡ ನೆಡುವುದು ಸೇರಿ ಹಲವು ಸ್ವಚ್ಛತಾ ಕೆಲಸಗಳನ್ನು ಆರಂಭಿಸಿದೆ.

ಸೆ.29ರಿಂದ ಅ.8ರ ವರೆಗೆ ಸ್ವಚ್ಛತಾ ಕಾರ್ಯಕ್ಕಾಗಿ ಪೌರಕಾರ್ಮಿಕರನ್ನು ಹೊರತುಪಡಿಸಿ, ವಾರ್ಡ್‌ ವಾರು ಐದು ಮಂದಿಯ ತಂಡ ರಚಿಸಲಾಗಿದೆ. ಅಲ್ಲದೇ, ಕೋರ್‌ ವಿಭಾಗದ ಸ್ವಚ್ಛತೆಗಾಗಿ 330 ಜನರ ಸುಸಜ್ಜಿತ ತಂಡವೊಂದನ್ನು ಆಯ್ಕೆ ಮಾಡಿಕೊಂಡು ಅವರನ್ನು 60ರಿಂದ 80 ಜನರಂತೆ ನಾಲ್ಕು ವಿಭಾಗವಾಗಿ ರಚಸಿ ಸ್ವಚ್ಛತೆಗೆ ಅಣಿಗೊಳಿಸಲಿದ್ದೇವೆ. ಮುಂದಿನ ವಾರ ಶಾಲಾ ಮಕ್ಕಳಿಂದ ಸ್ವಚ್ಛತಾ ಅಭಿಯಾನ ನಡೆಸಿ, ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಜಾಗೃತಿ ಮೂಡಿಸಲಾಗುತ್ತದೆ ಎಂದು ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next