Advertisement
ಕಳೆದ ಫೆಬ್ರವರಿಯಲ್ಲಿ ಪಾಲಿಕೆ ಮೇಯರ್ -ಉಪ ಮೇಯರ್ ಸ್ಥಾನಕ್ಕೆ 3ನೇ ಅವಧಿಗೆ ನಡೆದ ಚುನಾವಣೆಯಲ್ಲಿ ಭಾರಿ ಕಸರತ್ತಿನ ನಡುವೆಯೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿದಿತ್ತು. ಪಾಲಿಕೆ ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಜೆಡಿಎಸ್ ಸಫಲವಾಗಿತ್ತು. ಆದರೆ, ಆಸ್ತಿ ವಿವರ ಸರಿಯಾಗಿ ನೀಡದ ಕಾರಣ ಹೈಕೋರ್ಟ್ ತೀರ್ಪಿನಿಂದ ಮೇಯರ್ ಆಗಿದ್ದ ರುಕ್ಮಿಣಿ ಸದಸ್ಯತ್ವ ರದ್ದಾಗಿತ್ತು. ಅವರಿಂದ ತೆರವಾಗಿರುವ ಮೇಯರ್ ಸ್ಥಾನಕ್ಕೆ ಇದೇ ಜೂನ್ 11ಕ್ಕೆ ಚುನಾವಣೆ ನಡೆಯಲಿದ್ದು, ಕಳೆದ ಚುನಾವಣೆಯಲ್ಲಿದ್ದ ಮೀಸಲಾತಿಯೇ ಮುಂದುವರಿಯಲಿದೆ.
Related Articles
Advertisement
ಜೆಡಿಎಸ್ ಷರತ್ತು ಏನು? “: ಈ ಬಾರಿಗೆ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಗೆ ಬಿಟ್ಟುಕೊಟ್ಟು, ನಂತರದ ಅವಧಿಗೆ ಮೇಯರ್, ಉಪಮೇಯರ್, ವರ್ಕ್ ಕಮಿಟಿ ಎಲ್ಲವನ್ನೂ ಜೆಡಿಎಸ್‌ಗೆ ಬಿಟ್ಟುಕೊಡಬೇಕು. ಕೊನೆಯ ಅವಧಿಗೂ ಜೆಡಿಎಸ್‌ಗೆ ಮೇಯರ್ ಸ್ಥಾನ ಬಿಟ್ಟುಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಬೇಡಿಕೆಗೆ ಕಾಂಗ್ರೆಸ್ ಒಪ್ಪಿದರೆ ಮಾತ್ರಮೇಯರ್ ಸ್ಥಾನ ಬಿಟ್ಟುಕೊಡುತ್ತೇವೆ ಎಂದು ಜೆಡಿಎಸ್ ಹೇಳಿದೆ.
ಮೇಯರ್ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಜೆಡಿಎಸ್ ಒಪ್ಪಿದೆ. ಕಾಂಗ್ರೆಸ್‌ಗೆ ಉಳಿದ 8 ತಿಂಗಳ ಅವಧಿಗೆ ಮೇಯರ್ ಸ್ಥಾನ ಬಿಟ್ಟುಕೊಡುವುದು. ಇಲ್ಲವೇ ಜೆಡಿಎಸ್ ಮೇಯರ್ ಸ್ಥಾನ ಉಳಿಸಿಕೊಳ್ಳುವುದು ಎಂಬ 2 ಆಯ್ಕೆಯನ್ನು ಸಾ. ರಾ.ಮಹೇಶ್ ನೀಡಿದ್ದರು. ಈ ಬಗ್ಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜತೆ ಚರ್ಚಿಸಿದಾಗ, ಮೇಯರ್ ಸ್ಥಾನ ಕಾಂಗ್ರೆಸ್‌ಗೆ ಬೇಕು ಎಂದಿದ್ದಾರೆ. ಅದರಂತೆ ನಡೆದುಕೊಳ್ಳಲಾಗುವುದು. -ಆರ್.ಮೂರ್ತಿ, ನಗರ ಕಾಂಗ್ರೆಸ್ ಅಧ್ಯಕ್ಷ
ಕಳೆದ ಬಾರಿಯೇ ಮೇಯರ್ ಸ್ಥಾನ ಬಿಟ್ಟುಕೊಡಲು ನಿರ್ಧರಿಸಿದ್ದೆವು. ಆದರೆ, ಜೆಡಿಎಸ್ ಎಲ್ಲಿದೆ ಎಂದು ಸಿದ್ದರಾಮಯ್ಯ ಟೀಕಿಸಿದ ಕಾರಣ ನಾವು ಪಟ್ಟು ಬಿಡಲಿಲ್ಲ. ಈಗಲೂ ಮೇಯರ್ ಸ್ಥಾನಬಿಟ್ಟುಕೊಡಲು ತಕರಾರೇನಿಲ್ಲ. ಆದರೆ, ಮುಂದಿನ ಬಾರಿಗೆ ಮೇಯರ್, ಉಪಮೇಯರ್, ವರ್ಕ್ ಕಮಿಟಿ ಎಲ್ಲವನ್ನೂ ಜೆಡಿಎಸ್‌ಗೆ ಬಿಟ್ಟುಕೊಡಬೇಕು. ನಂತರದ ಅವಧಿಗೂ ಮೇಯರ್ ಸ್ಥಾನ ಬೇಕು. – ಸಾ.ರಾ. ಮಹೇಶ್, ಶಾಸಕ