Advertisement

ಮೈಸೂರು: ಬಹುರೂಪಿ ಉತ್ಸವಕ್ಕೆ ಸಂಭ್ರಮದ ತೆರೆ

06:16 PM Dec 16, 2022 | Team Udayavani |

ಮೈಸೂರು: ಕಳೆದೆಂಟು ದಿನಗಳಿಂದ ರಂಗಾಸಕ್ತರು, ಸಿನಿಪ್ರಿಯರು ಸೇರಿದಂತೆ ಮೈಸೂರಿಗರಿಗೆ ಜಗತ್ತಿನ ವಿವಿಧ ಭಾಗಗಳ ಚಲನ ಚಿತ್ರಗಳು, ನಾನಾ ಬಗೆಯ ನಾಟಕ, ಜಾನ ಪದ ಕಾರ್ಯ ಕ್ರಮಗಳನ್ನು ಉಣ ಬಡಿಸಿದ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಗುರುವಾರ ಸಂಭ್ರಮದ ತೆರೆ ಕಂಡಿತು.

Advertisement

ಭಾರತೀಯತೆ ಆಶಯದೊಂದಿಗೆ ರಂಗಾಯಣ ಮೈಸೂರು ಆಯೋಜಿಸಿದ್ದ ಬಹುರೂಪಿ ರಂಗೋತ್ಸವ ದಲ್ಲಿ ಭಾರತದ ಸಾಂಸ್ಕೃತಿಕ ವೈವಿಧ್ಯತೆ ಅನಾವರಣಗೊಂಡಿತು. ರಂಗಾಯಣದ ಆವರಣದಲ್ಲಿರುವ ಬಿ.ವಿ. ಕಾರಂತರ ಪುತ್ಥಳಿ ಎದುರು ಕಲಾವಿದರು ತಾಯಿ ಭಾರತೀಯ ಪಾದ ಪದ್ಮಗಳಿಗೆ ನಮಿಸೋಣ ಬನ್ನಿ… ಗೀತೆ ಯನ್ನು ಹಾಡುವುದರೊಂದಿಗೆ ಬಹುರೂಪಿಗೆ ತೆರೆ ಎಳೆದರು.

ಬಳಿಕ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ಕೊಡವ ನೃತ್ಯಗಾರರೊಂದಿಗೆ ಹೆಜ್ಜೆ ಹಾಕಿದರು. ನೆರೆದಿದ್ದವರು ಭಾರತ್‌ ಮಾತಾ ಕೀ ಘೋಷಣೆ ಕೂಗಿದರು. 3 ನಾಟಕಗಳ ಪ್ರದರ್ಶನ ಗೊಂದಿಗೆ ಬಹುರೂಪಿ ಮುಕ್ತಾಯಗೊಂಡಿತು. ಇದಕ್ಕೂ ಮುನ್ನ ಬಿ.ವಿ.ಕಾರಂತ ರಂಗಚಾವಟಿಯಲ್ಲಿ ನಿತ್ಯ ನಿರಂತರ ಟ್ರಸ್ಟ್‌ – ವಿಶೇಷ ಚೇತನ ಮಕ್ಕಳು ನಡೆಸಿಕೊಟ್ಟ ಜಾನ ಪದ ನೃತ್ಯ ಕಾರ್ಯಕ್ರಮ ನೋಡುಗರನ್ನು ಸಂಭ್ರಮದಲ್ಲಿ ತೇಲಿಸಿತು.

ಬಳಿಕ ದಿವಾಕರ ಹೆಗಡೆ ತಂಡದವರು ತಾಳಮದ್ದಳೆಯಲ್ಲಿ ಸ್ವಾಮಿ ವಿವೇಕಾನಂದರು ಚಿಗಾಗೋ ಸರ್ವಧರ್ಮ ಸಮ್ಮೇಳನಕ್ಕೆ ಹೋಗುವ ಮುನ್ನ ಕನ್ಯಾಕುಮಾರಿ ಭೂಶಿರದಲ್ಲಿ ನಿಂತು ಸಂಕಲ್ಪ ಮಾಡಿದ ಸಂದರ್ಭವನ್ನು ಪ್ರಸ್ತುತಪಡಿಸಿದರು. ನಂತರ ವನರಂಗದಲ್ಲಿ ಮೈಸೂರಿನ ಕೆ.ಎನ್‌. ಮಹೇಶ್‌ ತಂಡದವರು ನಡೆಸಿದ ವೀರಗಾಸೆ ನೃತ್ಯ ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿ ಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ತಮಟೆಯ ಸದ್ದಿಗೆ ಸುತ್ತಾಕಾರದಲ್ಲಿ ಕತ್ತಿ ಹಿಡಿದು ಬೀಸುತ್ತ ನರ್ತಿಸುತ್ತ ಸಭಿಕರಿಂದ ಪ್ರಶಂಸೆ ಪಡೆದರು. ಇದಾದ ನಂತರ ಕೊಡಗಿನ ಸೂರಜ್‌ ತಂಡದವರು ಬೊಳಕಾಟ್‌ ನೃತ್ಯವನ್ನು ಪ್ರದರ್ಶಿಸಿದರು. ಕೊಡಗಿನಲ್ಲಿ ಆಚರಿಸುವ ಪುತ್ತರಿ ಹಬ್ಬದ ಸಂದರ್ಭದಲ್ಲಿ ನರ್ತಿಸುವ ಪುತ್ತರಿ ಕೋಲಾಟಕ್ಕೆ ರಂಗಾಸ್ತಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

ಕಳೆದ ಏಳು ದಿನಗಳಲ್ಲಿ ರಂಗಾಯಣದ ಮೂರು ರಂಗಮಂದಿರಗಳಲ್ಲಿ 7 ರಾಜ್ಯಗಳ 7 ವಿವಿಧ ಭಾಷೆಗಳ ನಾಟಕಗಳು, ಕನ್ನಡದ 12 ನಾಟಕಗಳು ಮತ್ತು ತುಳು ನಾಟಕವು ಸೇರಿ ಒಟ್ಟು 20 ನಾಟಕಗಳು ಪ್ರದರ್ಶನಗೊಂಡವು. ಹಾಗೆಯೇ  ಗುರುವಾರ ಕೋರಲ್‌ ವುಮೆನ್‌, ಟಿಂಬುಕು ಇಂಗ್ಲೀಷ್‌ ಚಿತ್ರ ಹಾಗೂ ಮಲಯಾಳಂ ಭಾಷೆಯ ಸೌಹೃದ, ಕನ್ನಡದ ಗಂಧದ ಗುಡಿ ಚಲನಚಿತ್ರ ಗಳು ಪ್ರದರ್ಶನವಾದವು. ಈ ಮೂಲಕ ಕಳೆದ ಏಳು ದಿನಗಳಲ್ಲಿ 28 ಕಿರುಚಿತ್ರ ಹಾಗೂ ಚಲನ ಚಿತ್ರಗಳು ಪ್ರದರ್ಶನ ಕಂಡವು.

Advertisement

ಗಮನ ಸೆಳೆದ ಮಾಯಾಬಜಾರ್‌
ರಂಗೋತ್ಸವದ ಕೊನೆಯ ದಿನವಾದ ಗುರುವಾರ ಕಲಾಮಂದಿರದಲ್ಲಿ ಮಾಯಾ ಬಜಾರ್‌, ಅವನಿ ಹಾಗೂ ಛಾಯಾ ಚಿತ್ರಂ -ಮಾಯಾ ಚಿತ್ರಂ ನಾಟಕಗಳು ಪ್ರದರ್ಶನ ಗೊಂಡವರು. ಕಲಾಮಂದಿರ ವೇದಿಕೆಯಲ್ಲಿ ಸಂಜೆ 7.30ಕ್ಕೆ ಪ್ರದರ್ಶನ ವಾದ ತೆಲಂಗಾಣದ ಶ್ರೀ ವೆಂಕಟೇಶ್ವರ ಸುರಭಿ ಥಿಯೇಟರ್‌ ತಂಡದಿಂದ ಪ್ರದರ್ಶನವಾದ ತೆಲುಗು ಭಾಷೆಯ ಮಾಯಾ ಬಜಾರ್‌ ನಾಟಕದಲ್ಲಿ ಮಹಾಭಾರತದ ಶ್ರೀಕೃಷ್ಣನ ಅಣ್ಣನಾದ ಬಲರಾಮನ ಮಗಳು ಮತ್ತು ಅಭಿಮನ್ಯುವಿನ ಪ್ರೇಮಕತೆಯನ್ನು ಅಮೋಘವಾಗಿ ಕಟ್ಟಿಕೊಡುವ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಕಲಾ ವಿ ದರು ಪಾತ್ರರಾದರು.

ಸಂಪತ್‌ ರಂಗ ಮಂದಿರದಲ್ಲಿ ಅವನಿ ನಾಟಕ ಪ್ರದರ್ಶನಗೊಂಡರೆ, ಭೂಮಿ ಗೀತಾದಲ್ಲಿ ಕೊಚ್ಚಿಯ ಎರ್ನಾಕುಲಂನ ಲೋಕಧರ್ಮಿ ತಂಡದಿಂದ ಛಾಯಾ ಚಿತ್ರಂ – ಮಾಯಾ ಚಿತ್ರಂ ಮಲಯಾಳಂ ನಾಟಕ ಪ್ರದರ್ಶನಗೊಂಡಿತು. ಜೀವಂತ ಪುರುಷ ಮತ್ತು ಸತ್ತ ಮಹಿಳೆಯ ಆತ್ಮದ ನಡುವೆ ನಡೆಯುವ ಸಂವಾದದ ಕುರಿತು ಕಲಾವಿದರು ಅತ್ಯುತ್ತಮವಾಗಿ ಅಭಿನಯಿಸಿ ರಂಗಾಸ ಕ್ತರ ಮನಗೆದ್ದರು.

Advertisement

Udayavani is now on Telegram. Click here to join our channel and stay updated with the latest news.

Next