Advertisement

ಕಳೆದ‌ ಮೂರು ದಿನಗಳಿಂದ ನನ್ನನ್ನು ಖಳನಾಯಕನ್ನಾಗಿ ಬಿಂಬಿಸುತ್ತಿದ್ದಾರೆ : ಸಿ. ಪಿ ಯೋಗೇಶ್ವರ್

07:45 PM Jun 01, 2021 | Team Udayavani |

ಮೈಸೂರು :  ಸಚಿವ ಸಿ ಪಿ ಯೋಗೇಶ್ವರ್ ಇಂದು(ಮಂಗಳವಾರ, ಜೂನ್ 1) ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಸುತ್ತೂರು ಮಠಕ್ಕೆ ದಿಢೀರ್ ಬೇಟಿ ನೀಡಿದ್ದಾರೆ. ಎಸ್ಕಾರ್ಟ್ ಬಿಟ್ಟು ಖಾಸಗಿ ವಾಹನದಲ್ಲಿ ಮಠಕ್ಕೆ ಆಗಮಿಸಿದ ಸಚಿವ ಯೋಗೇಶ್ವರ್, ಸುತ್ತೂರು ಮಠದ ಶ್ರೀ ಗಳೊಂದಿಗೆ ಕೆಲ ಕಾಲ ಮಾತನಾಡಿದ್ದಾರೆ.

Advertisement

ಶ್ರೀಗಳ ಭೇಟಿ ನಂತರ ಮಾಧ್ಯದಮರಿಗೆ ಪ್ರತಿಕ್ರಿಯಿಸಿದ ಯೋಗೇಶ್ವರ್,  ಕಳೆದ‌ ಮೂರು ದಿನಗಳಿಂದ ಮಾಧ್ಯಮಗಳು ಹಾಗೂ ನನ್ನ ಸ್ನೇಹಿತರು ನನ್ನನ್ನು ಖಳನಾಯಕನ್ನಾಗಿ ಬಿಂಬಿಸುತ್ತಿದ್ದಾರೆ. ಇದು ಮನಸ್ಸಿಗೆ ಬಹಳ ನೋವಾಗಿದೆ. ಸ್ವಾಮೀಜಿಗಳ ಮುಂದೆ ಆ ನೋವಾನ್ನು ಹೇಳಿಕೊಂಡರೆ‌‌ ಹಗುರವಾಗುತ್ತದೆ ಎಂದು ಇಲ್ಲಿಗೆ ಬಂದಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ : ಕೋವಿಡ್ : ರಾಜ್ಯದಲ್ಲಿಂದು 29271 ಜನ ಗುಣಮುಖ; 14304 ಹೊಸ ಪ್ರಕರಣ ಪತ್ತೆ

ಸಿನಿಮಾದಲ್ಲೂ ನಾಯಕ, ರಾಜಕೀಯದ‌ಲ್ಲೂ ನಾನು‌ ನಾಯಕನಾಗಿದ್ದೇನೆ. ಆದರೇ, ನನ್ನನ್ನು ಖಳನಾಯನನ್ನಾಗಿ ಮಾಡಲು ಯತ್ನ ನಡೆದಿದೆ. ಇದರ ಹಿಂದೆ ಯಾರದ್ದೋ ಪ್ರಚೋದನೆ ಇರಬಹುದು. ವೈಯುಕ್ತಿಕವಾಗಿ ನಾನು‌ ನೀಡಿದ ಒಂದು ಹೇಳಿಕೆಯಿಂದ ಇಷ್ಟೆಲ್ಲಾ ಚರ್ಚೆ ನಡೆದಿದೆ. ಇದರಿಂದ ನಾನು ಬಹಳ ನೊಂದಿದ್ದೇನೆ ಎಂದು ನೋವನ್ನು ವ್ಯಕ್ತ ಪಡಿಸಿಕೊಂಡಿದ್ದಾರೆ.

ಇನ್ನು, ಎಸ್ಕಾರ್ಟ್ ಇಲ್ಲದೇ ಬಂದಿದ್ದೀರಿ ಯಾಕೆ ಎಂದು ಮವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಸ್ಕಾರ್ಟ್ ಇಲ್ಲದೆ‌‌ ಮಠಕ್ಕೆ ಬಂದಿರೋದು‌ ವಿಶೇಷವಿಲ್ಲ. ಕೋವಿಡ್ ‌ ಹಿನ್ನೆಲೆಯಲ್ಲಿ ನಾನು ಎಸ್ಕಾರ್ಟ್ ಬಳಸುತ್ತಿಲ್ಲ. ಎಸ್ಕಾರ್ಟ್ ಇಲ್ಲದೆ ಓಡಾಡಿದರು ನಾನು ಸಚಿವನೆ. ಪೊಲೀಸರಿಗೆ ತೊಂದರೆಯಾಗಬಾರದು ಎಂಬುದು ನನ್ನ ಉದ್ದೇಶ ಎಂದು ಹೇಳಿದ್ದಾರೆ.

Advertisement

ಸಚಿವ ಸಿ ಪಿ ಯೋಗೆಶ್ವರ್ ಭೇಟಿಗೂ ಮುಂಚೆಯಷ್ಟೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಸಿ.ಟಿ. ರವಿಯಿಂದಲೂ ಸುತ್ತೂರು ಶ್ರೀಗಳ ಭೇಟಿ ಮಾಡಿದ್ದರು.

ಇದನ್ನೂ ಓದಿ : ಸುಧಾಕರಣ್ಣಾ.. ನೀನು ಮೊದಲು ಔಷಧಿ ಕೊಡಿಸುವ ಕೆಲಸ ಮಾಡು: ಡಿ.ಕೆ. ಶಿವಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next