Advertisement

ಹೆದ್ದಾರಿಯಲ್ಲಿ ಅಪಘಾತವಾಗುತ್ತಿದ್ದರೂ ಕ್ರಮವಿಲ್ಲ

04:08 PM Jun 21, 2023 | Team Udayavani |

ಮದ್ದೂರು: ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ಅಪಘಾತಗಳು ನಡೆದು ಸಾವು- ನೋವುಗಳು ಸಂಭವಿಸುತ್ತಿದ್ದರೂ, ಇದುವರೆಗೂ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮವಹಿ ಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಕಳೆದ ಆರು ತಿಂಗಳ ಹಿಂದ ನೂತನ ಹೆದ್ದಾರಿಯನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿ ದ್ದರೂ, ಹೆದ್ದಾರಿ ರಸ್ತೆಯ ಅವೈಜ್ಞಾನಿಕ ಕಾಮಗಾರಿ, ಅವ್ಯವಸ್ಥೆಯಿಂದ ಪ್ರತಿನಿತ್ಯ ಅಪಘಾತಗಳು ಸಂಭವಿಸಿ ಅಮಾಯಕ ಜೀವಗಳು ಬಲಿಯಾಗುತ್ತಿವೆ.

ಕಳೆದ ಆರು ತಿಂಗಳಿಂದಲೂ ಮೈಸೂರು-  ಬೆಂಗಳೂರು ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸಿ ನೂರಾರು ಮಂದಿ ಪ್ರಾಣ ಕಳೆದುಕೊಂಡ ಉದಾಹರಣೆಗಳಿದೆ. ಅತಿವೇಗದಲ್ಲಿ ಬರುವ ವಾಹನಗಳಿಂದಾಗಿ ಅಪಘಾತಗಳು ಸಂಭವಿಸಿ, ಅಮಾಯಕ ಜೀವಗಳು ಬಲಿ ಯಾಗು ತ್ತಿದೆ. ಸಂಬಂಧಿಸಿದ ಅಧಿಕಾರಿಗಳು ರಸ್ತೆ ಪರಿಶೀಲನೆ ಮಾಡಿ, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದಿರುವುದು ಹಲವು ಅದ್ವಾನ ಗಳಿಗೆ ಕಾರಣವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ನಾಮಫ‌ಲಕ ಅಳವಡಿಸಿಲ್ಲ: ಹೆದ್ದಾರಿಯಲ್ಲಿ ವಾಹನಗಳು ಎಷ್ಟು ಕಿ.ಮೀ ವೇಗದಲ್ಲಿ ಚಲಿಸಬೇಕೆಂಬ ನಿಯಮವಿಲ್ಲ. ಹಾಗೇಯೇ ಆರ್‌ಟಿಒ ಅಧಿಕಾರಿಗಳು ಮತ್ತು ಪೊಲೀಸರು ವಾಹನದ ಗುಣಮಟ್ಟ ತಪಾಸಣೆ ನಡೆಸದ ಹಿನ್ನೆಲೆಯಲ್ಲಿ ಅಪಘಾತಗಳಿಗೆ ಕಾರಣ ವಾಗಿದೆ. ಹೆದ್ದಾರಿಯ ಸರ್ವಿಸ್‌ ರಸ್ತೆ ಬದಿಗಳಲ್ಲಿರುವ ಗ್ರಾಮಗಳಿಗೆ ಸೂಚನಾ ಫ‌ಲಕ ಹಾಗೂ ಯಾವುದೇ ಮುಂಜಾಗ್ರತಾ ನಾಮಫ‌ಲಕಗಳನ್ನು ಅಳವಡಿಸದಿರುವ ಜತೆಗೆ ರಾತ್ರಿ ವೇಳೆ ವಿದ್ಯುತ್‌ ದೀಪಗಳು, ರೆಡಿಯಂ ದೀಪಗಳು ಸಮರ್ಪಕವಾಗಿ ಇಲ್ಲದ ಪರಿಣಾಮವಾಗಿ ಕೊಲ್ಲಿ ವೃತ್ತದಿಂದ ಎಚ್‌.ಕೆ.ವಿ ನಗರದ ವರೆವಿಗೂ ಕತ್ತಲಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಉಂಟಾಗಿದೆ.

ರಸ್ತೆಯಲ್ಲೇ ಮಳೆ ನೀರು ಹರಿವು: ರಸ್ತೆಯ ಮೇಲ್ಸೇತುವೆ ಕೆಳಭಾಗದಲ್ಲಿ ಮಳೆ ಬಂತೆಂದರೆ ಜೋಗ್‌ ಜಲಪಾತದ ಅನುಭವ ಉಂಟಾಗಲಿದೆ. ರಭಸವಾಗಿ ಸುರಿಯುವ ನೀರು ರಸ್ತೆಯಲ್ಲಿ ಹರಿಯುವುದರಿಂದ ಸಂಚಾರಕ್ಕೂ ತೊಡಕ್ಕುಂಟಾಗಿ ಅಪಘಾತಕ್ಕೂ ಕಾರಣವಾಗಿದೆ. ಕೊಲ್ಲಿ ವೃತ್ತದಿಂದ ಎಚ್‌.ಕೆ.ವಿ ನಗರದವರೆವಿಗೂ ಅದ್ವಾನಗೊಂಡಿರುವ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ರಸ್ತೆ ಗುಂಡಿಗಳಿಗೆ ಬಿದ್ದು ಪ್ರಾಣ ಕಳೆದುಕೊಳ್ಳುವ ಜತೆಗೆ ಗಾಯಗೊಂಡು ದಿವ್ಯಾಂಗರಾಗುತ್ತಿರುವ ಪ್ರಸಂಗಗಳು ನಮ್ಮ ಕಣ್ಮುಂದೆ ಇದೆ. ಕೂಡಲೇ ದುರಸ್ತಿ ಕಾರ್ಯಕ್ಕೆ ಆದ್ಯತೆ ನೀಡಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕಿದೆ ಎಂದು ಜನರು ಆಗ್ರಹಿಸಿದ್ದಾರೆ.

Advertisement

ಕಡ್ಡಾಯವಾಗಿ ನಿಯಮ ಅಳವಡಿಸಿ: ಸಾವಿರಾರು ಕೋಟಿ ರೂ. ಖರ್ಚು ಮಾಡಿ, ರಸ್ತೆ ನಿರ್ಮಾಣ ಮಾಡಿದ್ದರೂ ಪ್ರಯಾಣಿಕರು, ವಾಹನ ಸವಾರರು ಜೀವ ಹಿಡಿದು ಸಂಚರಿಸಬೇಕಾದ ಅನಿವಾರ್ಯವಿದೆ. ರಸ್ತೆಯಿಂದ ಪ್ರಯೋಜನ ವಾದರೂ ಏನೆಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ರಸ್ತೆಯನ್ನು ಪರಿಶೀಲನೆ ನಡೆಸಿ, ಅಗತ್ಯವಿರುವೆಡೆ ಸೂಚನಾಫ‌ಲಕಗಳು ಮತ್ತು ಸಾರಿಗೆ ನಿಯಮಗಳನ್ನು ಕಡ್ಡಾಯವಾಗಿ ಅಳವಡಿಸಿ, ನಡೆಯು ತ್ತಿರುವ ಅಪಘಾತಗಳನ್ನು ತಪ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸಾರ್ವಜನಿಕರ ತೆರಿಗೆ ಹಣದಿಂದ ರಸ್ತೆ ಅಭಿವೃದ್ಧಿಪಡಿಸಿ, ಟೋಲ್‌ ನಿಂದ ಹಣ ಸಂಗ್ರಹ ಮಾಡಿದರೂ ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಹೆದ್ದಾರಿ ರಸ್ತೆ ಪರಿಶೀಲನೆ ನಡೆಸಿ, ಅಗತ್ಯ ಕ್ರಮವಹಿಸಬೇಕಿದೆ. ತಪ್ಪಿದಲ್ಲಿ ಸಂಘಟನೆಯಿಂದ ಸಾರ್ವಜನಿಕರೊಂದಿಗೆ ಪ್ರತಿಭಟನೆ ಮಾಡಬೇಕಾಗುತ್ತದೆ. ವಿ.ಸಿ.ಉಮಾಶಂಕರ್‌, ಜಿಲ್ಲಾಧ್ಯಕ್ಷ, ಕಸ್ತೂರಿ ಕರ್ನಾಟಕ ಜನಪರ ವೇದಿಕ

ಮೈಸೂರು- ಬೆಂಗಳೂರು ಹೆದ್ದಾರಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡಿದ್ದಾರೆ. ಅತಿ ವೇಗವಾಗಿ ಚಲಿಸುವ ವಾಹನಗಳಿಂದ ಅಪಘಾತಗಳು ನಡೆಯುತ್ತಿವೆ. ಈ ಸಂಬಂಧ ಪ್ರತಿ ಕಿ. ಮೀ ವ್ಯಾಪ್ತಿಗೆ ಕ್ಯಾಮರಗಳನ್ನು ಅಳವಡಿಸಿ, ವೇಗ ನಿಯಂತ್ರಣ ಮತ್ತು ದಂಡ ವಸೂಲಾತಿಗೆ ಕ್ರಮವಹಿಸಿ ಅಪಘಾತಗಳನ್ನು ತಪ್ಪಿಸಲಾಗುವುದು. ಸಂತೋಷ್‌, ವೃತ್ತ ನಿರೀಕ್ಷಕ, ಪೊಲೀಸ್‌ ಠಾಣೆ, ಮದ್ದೂರು

ಎಸ್‌.ಪುಟ್ಟಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next