Advertisement

ಮೈಸೂರು ಅಸೋಸಿಯೇಶನ್‌  ಚಿತ್ರಕಲಾ ಪ್ರದರ್ಶನ

04:15 PM Feb 24, 2019 | |

ಮುಂಬಯಿ: ಮುಂಬಯಿ ಸಾಕಷ್ಟು ಒಳ್ಳೆಯ ಕಲಾವಿದರನ್ನು ಬೆಳೆಸಿ ಪ್ರೋತ್ಸಾಹಿಸಿದೆ.  ಈ ಸಾಲಿಗೆ ಯುವ ಕಲಾವಿದ ಜಯ ಸಾಲ್ಯಾನ್‌ ಅವರು ಸೇರ್ಪಡೆಗೊಳ್ಳುತ್ತಿರುವುದು ಸಂತೋಷದ ಸಂಗತಿ. ಅವರಲ್ಲಿ ಒಳ್ಳೆಯ ಪ್ರತಿಭೆ, ಕಲಾ ನೈಪುಣ್ಯತೆ ಇದೆ ಎಂಬುವುದಕ್ಕೆ ಇವತ್ತಿನ ಚಿತ್ರಕಲೆಯ ಪ್ರದರ್ಶನವೇ ಸಾಕ್ಷಿ. ಕಲಾವಿದ ಲೋಕವನ್ನು ಬಹಳ ಸೂಕ್ಷ¾ವಾಗಿ ನೋಡಿದಷ್ಟು ಅವನ ಕಲೆಗೆ ಹೊಸತನ ಸಿಗುತ್ತದೆ. ಪಿಕಾಸೊನಂತಹ ಜಗದ್ವಿಖ್ಯಾತ ಕಲಾವಿದನ ಒಂದು ಚಿತ್ರ ಹತ್ತಾರು ರೀತಿಯಲ್ಲಿ ನಮಗೆ ಕಾಣುತ್ತದೆ. ಲೋಕಾನುಭವ, ಸೂಕ್ಷ¾ ದೃಷ್ಟಿಕೋನ ಕಲೆಯಲ್ಲಿಯೂ ಪಡಿಮೂಡಿದರೆ ಅಂಥ ಚಿತ್ರಕಲೆಗೆ ಒಂದು ಮನ್ನಣೆ ಬರುತ್ತದೆ ಎಂಬುದಾಗಿ ಹಿರಿಯ ಸಂಘಟಕ, ಕಲಾವಿದ ಮಂಜುನಾಥಯ್ಯ ಅವರು ಅಭಿಪ್ರಾಯ ಪಟ್ಟರು.

Advertisement

ಅವರು ಇತ್ತೀಚೆಗೆ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಹಾಗೂ ಮೈಸೂರು ಅಸೋಸಿಯೇಶನ್‌ ಇದರ ಸಂಯುಕ್ತ ಆಶ್ರಯದಲ್ಲಿ ಮೈಸೂರು ಅಸೋಸಿಯೇಶನ್‌ನ ನಡೆದ ಜಯ ಸಾಲ್ಯಾನ್‌ ಅವರ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಯುವ ಕಲಾವಿದ ಜಯ ಸಾಲ್ಯಾನ್‌ ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಖ್ಯಾತ ಸಿನೆಮಾ ನಿರ್ದೇಶಕ, ಸಾಹಿತಿ ಡಾ| ನಾಗತಿಹಳ್ಳಿ ಚಂದ್ರಶೇಖರ್‌  ಅವರು ಮಾತನಾಡಿ,  ಜಯ ಸಾಲ್ಯಾನ್‌ ಅವರಿಗೆ ಚಿತ್ರಕಲೆ ಸಿದ್ಧಿಸಿದೆ. ಅವರ ರೇಖೆಗಳು ಮಾತನಾಡುತ್ತವೆ. ಇಂಥ ಯುವ ಕಲಾವಿದರನ್ನು ನಾವು ಪ್ರೋತ್ಸಾಹಿಸಬೇಕು.  ಬೆಂಗಳೂರಿನಲ್ಲಿ ಅವರ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಲು ತಾವು ಸಹಕರಿಸುವು ದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಜಿ. ಎನ್‌. ಉಪಾಧ್ಯ ಅವರು, ಜಯ ಸಾಲ್ಯಾನ್‌ ಮುಂಬಯಿಯಲ್ಲಿ ಅರಳಿದ ಪ್ರತಿಭೆ. ಅನೇಕ ಕಷ್ಟ ನಷ್ಟಗಳ ನಡುವೆ ಕಲಾ ಕ್ಷೇತ್ರದಲ್ಲಿ ಆವರು ಮೇಲೇರುತ್ತ ಬಂದಿ¨ªಾರೆ.  ಅವರ ವ್ಯಕ್ತಿಚಿತ್ರ, ವ್ಯಂಗ್ಯಚಿತ್ರ, ಭಿತ್ತಿಚಿತ್ರ ಮೊದಲಾದ ಚಿತ್ರಕಲೆಯ ಪ್ರಕಾರಗಳಲ್ಲಿ ಅವರು ಮೂರು ಸಾವಿರಕ್ಕೂ ಹೆಚ್ಚು ಚಿತ್ರಗಳನ್ನು ಬಿಡಿಸಿ ಸೈ ಎನ್ನಿಸಿಕೊಂಡಿ¨ªಾರೆ. ದೊಡ್ಡ ದೊಡ್ಡ ಆರ್ಟ್ಸ್  ಗ್ಯಾಲರಿಗಳಲ್ಲಿ ಇಂದು ಲಕ್ಷಗಟ್ಟಲೆ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ಬಂದಿದೆ. ಯುವ ಕಲಾವಿದರಿಗೆ ಇದು ಸಾಧ್ಯ ವಾಗದು. ಚಿತ್ರಕಲೆಯ ಕುರಿತು ಸಂಶೋಧನೆಯಲ್ಲಿ ನಿರತರಾಗಿ ರುವ ಜಯ ಸಾಲ್ಯಾನ್‌ ಅವರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದೆ ಎಂದು ನುಡಿದರು.

ಕಲಾವಿದ ಜಯ ಸಾಲ್ಯಾನ್‌ ಅವರು ಮಾತನಾಡಿ, ರವಿ ಪರಾಂಜಪೆ, ಜಾನ್‌ ಫೆರ್ನಾಂಡಿಸ್‌ ಹಾಗೂ ವಾಸುದೇವ ಕಾಮತ್‌ ನನ್ನ ಮಾರ್ಗದರ್ಶಿಗಳು. ಇವರುಗಳಲ್ಲಿ ರವಿ ಪರಾಂಜಪೆಯವರನ್ನು ಹೆಚ್ಚಾಗಿ ಅನುಸರಿಸಿದ್ದೇನೆ. ಇಂದು ಹೆಚ್ಚಿನ ಕಲಾವಿದರು ಕಲೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಅವರುಗಳಿಗೆ ಮಾರ್ಗದರ್ಶನ ಮಾಡುತ್ತ ನಾನು ಬೆಳೆದೆ. ಈ ದಿನದ ಚಿತ್ರಕಲಾ ಪ್ರದರ್ಶನ ನಾನು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ ಎಂದು ವಿನಯಪೂರ್ವಕವಾಗಿ ನುಡಿದರು.
ಆರಂಭದಲ್ಲಿ ವಿದುಷಿ ಡಾ|  ಶ್ಯಾಮಲಾ ಪ್ರಕಾಶ್‌ ಅವರು ಕುಮಾರವ್ಯಾಸ ಭಾರತದ ಕೆಲವು ಪದ್ಯಗಳನ್ನು ಗಮಕ ರೂಪದಲ್ಲಿ ಹಾಡಿದರು. ವೇದಿಕೆಯಲ್ಲಿ ಮೈಸೂರು ಅಸೋಸಿಯೇಶನ್‌ನ  ಅಧ್ಯಕ್ಷರಾದ ಕಮಲಾ ಕಾಂತರಾಜು, ಲೇಖಕಿ ಹಿರಿಯ ಸಂಶೋಧಕಿ ಡಾ| ಲೀಲಾ ಬಿ. ಅವರುಗಳು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ|  ಪೂರ್ಣಿಮಾ ಶೆಟ್ಟಿ  ಅವರು ಕಾರ್ಯಕ್ರಮ ನಿರೂಪಿಸಿದರು. ಅಸೋಸಿಯೇಶನ್‌ನ  ಕಾರ್ಯದರ್ಶಿ ಡಾ|  ಶಂಕರಲಿಂಗ ಅವರು ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next