Advertisement
ಕಳೆದ ಶನಿವಾರ ಬೆಂಗಳೂರಿನಿಂದ ಆರಂಭಗೊಂಡ ಪಾದಯಾತ್ರೆ ಚನ್ನಪಟ್ಟಣ, ರಾಮನಗರ, ಮಂಡ್ಯ ಜಿಲ್ಲೆಗಳಲ್ಲಿ ಸಂಚರಿಸಿತು. ಬಿಜೆಪಿ ರಾಜ್ಯಾಧ್ಯಕ್ಷ ವಿಜ ಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಚಿವ ಅಶ್ವತ್ಥ ನಾರಾಯಣ, ಸಿ.ಟಿ. ರವಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖೀಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಮೈಸೂರಿಗೆ ಶುಕ್ರವಾರ ರಾತ್ರಿ ಆಗಮಿಸಿತ್ತು. ಪಾದಯಾತ್ರೆಯ ಅಂತಿಮ ದಿನ ಸಮಾವೇಶಕ್ಕೂ ಮುನ್ನವೂ ಮುಖ್ಯಮಂತ್ರಿ ತವರಿನಲ್ಲಿ ಪಾದಯಾತ್ರೆ ನಡೆಸಿದ ದೋಸ್ತಿ ನಾಯಕರು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.
“ಮೈಸೂರು ಚಲೋ’ ಸಮಾರೋಪ ಸಮಾರಂಭದಲ್ಲಿ ಮಾತು ಆರಂಭಿ ಸಿದ ಕೇಂದ್ರ ಸಚಿವ ಎಚ್.ಡಿ. ಕುಮಾ ರ ಸ್ವಾಮಿ, ಕೆಲವು ವೀಡಿಯೋ ತುಣು ಕು ಗ ಳನ್ನು ಎಲ್‌ಇಡಿ ಪರ ದೆ ಯಲ್ಲಿ ಬಿತ್ತರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ತಿರುಗೇಟು ನೀಡಿದರು. ಬಿ.ಕೆ. ಹರಿಪ್ರಸಾದ್, ಸಿದ್ದ ರಾ ಮಯ್ಯ ವಿರುದ್ಧ ಮಾತನಾಡಿರುವುದು, ಯತೀಂದ್ರ ಸಿದ್ದ ರಾ ಮಯ್ಯ ತಮ್ಮ ತಂ ದೆ ಯೊಂದಿಗೆ ಹಲೋ ಡ್ಯಾಡಿ’ ಎಂಬ ಸಂಭಾಷಣೆ, ಜನಾ ರ್ದನ ಪೂಜಾರಿ, ಡಿಕೆಶಿ ತಾಯಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಪತ್ರಿಕಾಗೋಷ್ಠಿ ಯಲ್ಲಿ ಉಗ್ರಪ್ಪ ಮತ್ತು ಸಲೀಂ ನಡು ವೆ ನಡೆದ ಗುಸು ಗುಸು ಸಂಭಾ ಷಣೆ, ಖಾಸಗಿ ವಾಹಿ ನಿ ಗ ಳಲ್ಲಿ ಡಿಕೆಶಿ ವಿಷ ಯ ವಾಗಿ ಕ್ರೈಂ ಸ್ಟೋರಿ ಗ ಳಲ್ಲಿ ಪ್ರಕ ಟ ವಾದ ವೀಡಿಯೋ ತುಣು ಕು ಗ ಳನ್ನು ಪ್ರದ ರ್ಶಿ ಸಿ ದ ರು. ಈ ಮೂಲಕ ಕಾಂಗ್ರೆಸ್ ಸಮಾ ವೇ ಶ ದಲ್ಲಿ ಎಲ್ ಇಡಿ ಪರ ದೆಯಲ್ಲಿ ಈ ಹಿಂದೆ ಜೆಡಿ ಎ ಸ್-ಬಿಜೆಪಿಯ ನಾಯ ಕರು ಪರ ಸ್ಪರ ಬೈದಾ ಡಿ ಕೊಂಡಿ ರುವ ವೀಡಿಯೋ ತುಣು ಕು ಗ ಳ ಪ್ರದ ರ್ಶನಕ್ಕೆ ಡಿಕೆಶಿ ದಾರಿ ಯಲ್ಲೇ ತಿರು ಗೇಟು ನೀಡಿ ದರು.
Related Articles
ಮುಡಾ ಹಗ ರಣ ಸಂಬಂಧ ಸಿಎಂ ಸಿದ್ದ ರಾ ಮಯ್ಯ ವಿರುದ್ಧ ವಾಗ್ಧಾಳಿ ನಡೆ ಸಿದ ಮೈತ್ರಿ ನಾಯ ಕರು “5,000 ನಿವೇ ಶ ನ ಗ ಳನ್ನು ನುಂಗಿದ ಆ 14 ನಿವೇ ಶ ನ ಗಳು’ ಎಂಬ ಪುಸ್ತಕ ಬಿಡುಗಡೆ ಮಾಡಿದರು. ಇದೇ ವೇದಿ ಕೆ ಯಲ್ಲಿ ಶುಕ್ರ ವಾರ ಕಾಂಗ್ರೆಸ್ ಸಮಾವೇಶ ದಲ್ಲಿ “ಸಿಎಂ ಸಿದ್ದರಾಮಯ್ಯ ನೂರಕ್ಕೆ ನೂರು ಸ್ವತ್ಛ, ಕಳಂಕ ರಹಿತ’ ಎಂಬ ಪುಸ್ತಕ ಬಿಡುಗಡೆ ಮಾಡಿ , ಮುಡಾ ಹಗರಣ ದಲ್ಲಿ ತಮ್ಮ ಪಾತ್ರ ವಿಲ್ಲ ಎಂದು ವಿಪಕ್ಷಗಳ ಆರೋಪಕ್ಕೆ ಸಿಎಂ, ಡಿಸಿಎಂ ಕೌಂಟರ್ ನೀಡಿದ್ದರು.
Advertisement