Advertisement

ಮೈಸೂರು: 2ನೇಹಂತದಲ್ಲಿ 6046 ನಾಮಪತ್ರ ಸಲ್ಲಿಕೆ

07:42 PM Dec 18, 2020 | Suhan S |

ಮೈಸೂರು: ಜಿಲ್ಲೆಯಲ್ಲಿ ಎರಡನೇ ಹಂತದ ಚುನಾವನೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಅಂತ್ಯವಾಗಿದ್ದು, ಮೂರು ತಾಲೂಕುಗಳಿಂದ ಒಟ್ಟು 6046 ನಾಮಪತ್ರಗಳು ಸಲ್ಲಿಕೆಯಾಗಿವೆ.

Advertisement

ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಅಖಾಡ ಸಿದ್ಧವಾಗುತ್ತಿದೆ. ಡಿ.22ರಂದು ಹುಣಸೂರು, ಕೆ.ಆರ್‌.ನಗರ, ಪಿರಿಯಾಪಟ್ಟಣ, ಎಚ್‌.ಡಿ.ಕೋಟೆ, ಸರಗೂರು ತಾಲೂಕಿನ ಗ್ರಾ.ಪಂಗಳಿಗೆ ಮತದಾನ ನಡೆದರೆ, ಡಿ.27ರಂದುಮೈಸೂರು, ನಂಜನಗೂಡು ಹಾಗೂ ತಿ.ನರಸೀಪುರತಾಲೂಕಿನ ಗ್ರಾಪಂಗಳಿಗೆ ಮತದಾನ ನಡೆಯಲಿದೆ.ಈಗಾಗಲೇ ಎರಡೂ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಮುಗಿದಿದ್ದು, ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ಜಿಲ್ಲೆಯ 3 ತಾಲೂಕುಗಳಿಗೆ ಡಿ.27ರಂದು ಎರಡನೇ ಹಂತದಲ್ಲಿ ನಡೆಯುವ ಚುನಾವಣೆಗೆ ಒಟ್ಟು 6046ನಾಮಪತ್ರಗಳು ಸಲ್ಲಿಕೆಯಾಗಿವೆ. ಮೈಸೂರು ತಾಲೂಕಿನ 23 ಗ್ರಾಮ ಪಂಚಾಯಿತಿತ 511 ಸ್ಥಾನಗ ‌ಳಿಗೆ1565, ನಂಜನಗೂಡು ತಾಲೂಕಿನ 43 ಗ್ರಾಪಂಗಳ 810 ಸ್ಥಾನಗಳಿಗೆ 2537 ಹಾಗೂ ತಿ.ನರಸೀಪುರ ತಾಲೂಕಿನ 36 ಗ್ರಾ.ಪಂಗಳ 608 ಸ್ಥಾನಗಳಿಗೆ 1944 ನಾಮಪತ್ರಗಳುಸಲ್ಲಿಕೆಯಾಗಿವೆ. ಮೂರು ತಾಲೂಕುಗಳ ಒಟ್ಟು 102 ಗ್ರಾಪಂಗಳ 1,929 ಸ್ಥಾನಗಳಿಗೆ 6046 ನಾಮಪತ್ರಗಳು ಸಲ್ಲಿಕೆಯಾಗಿವೆ. ಮೈಸೂರು ತಾಲೂಕಿನ 1, ನಂಜನಗೂಡಿನ 8, ತಿ.ನರಸೀಪುರ1ಗ್ರಾಪಂ ಸ್ಥಾನಕ್ಕೆ ನಾಮಪತ್ರಸಲ್ಲಿಕೆಯಾಗಿಲ್ಲ. ನಾಮಪತ್ರ ವಾಪಸ್‌ ಪಡೆಯಲು ಡಿ.19ರಂದು ಅಂತಿಮ ದಿನವಾಗಿದ್ದು, ಡಿ.30ರಂದು ಆಯಾಯ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next