Advertisement

ಇನ್ನಾದರೂ ನರ ಹತ್ಯೆ ನಿಲ್ಲಿಸಿ ; ಮ್ಯಾನ್ಮಾರ್‌ಗೆ ವಿಶ್ವಸಂಸ್ಥೆ ಕೋರ್ಟ್‌ನಲ್ಲಿ ತಾಕೀತು

10:00 AM Dec 11, 2019 | Hari Prasad |

ದ ಹೇಗ್‌: ಮ್ಯಾನ್ಮಾರ್‌ ಸರಕಾರ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ದಮನಕಾರಿ ನೀತಿ ಅನುಸರಿಸುತ್ತಿರುವುದಕ್ಕೆ ವಿಶ್ವಸಂಸ್ಥೆಯ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ನರ ಹತ್ಯೆಯನ್ನು ನಿಲ್ಲಿಸುವಂತೆ ನ್ಯಾಯಾಲಯ ನೊಬೆಲ್‌ ಪುರಸ್ಕೃತೆ ಆ್ಯಂಗ್‌ ಸ್ಯಾನ್‌ ಸೂಕಿ ಅವರಿಗೆ ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಇದರಿಂದಾಗಿ ಸೂಕಿ ಅವರಿಗೆ ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಮುಜುಗರ ಉಂಟಾಗಿದೆ. ಮಂಗಳವಾರ ನಡೆದಿದ್ದ ವಿಚಾರಣೆ ವೇಳೆ ಸೂಕಿ ಸಮ್ಮುಖದಲ್ಲಿಯೇ 2017ರಲ್ಲಿ ನಡೆದಿದ್ದ ಕಾರ್ಯಾಚರಣೆಯ ಫೋಟೋ, ದೌರ್ಜನ್ಯ ಆರೋಪಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.

Advertisement

2017ರಲ್ಲಿ ಮ್ಯಾನ್ಮಾರ್‌ ಸರಕಾರ ಅನುಸರಿಸಿದ್ದ ದಮನಕಾರಿ ನೀತಿಯ ಅನ್ವಯ 7.40 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದರು. ಅದರ ವಿರುದ್ಧ ಆಫ್ರಿಕಾ ಖಂಡದ ರಾಷ್ಟ್ರ ಗಾಂಬಿಯಾ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆದು, ವಿಶ್ವಸಂಸ್ಥೆಯ ಕೋರ್ಟ್‌ಗೆ ದೂರು ನೀಡಿತ್ತು.

ಅಲ್ಲಿನ ನ್ಯಾಯ ಖಾತೆ ಸಚಿವ ಅಬೂಬಕರ್‌ ತಂಬಾದೌ, ಮ್ಯಾನ್ಮಾರ್‌ ಸರಕಾರ 1948ರ ನರಹತ್ಯೆ ನಿಷೇಧ ಸಮ್ಮೇಳನದ ಒಪ್ಪಂದ ಉಲ್ಲಂ ಸಿದೆ. ಅದೇ ರೀತಿಯ ಮತ್ತೂಂದು ಘಟನೆ ಶೀಘ್ರದಲ್ಲಿಯೇ ನಡೆಯಲಿದೆ. ಅದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕಿದೆ ಎಂದು ಪ್ರಬಲವಾಗಿ ವಾದಿಸಿದರು. ಮ್ಯಾನ್ಮಾರ್‌ ಸರಕಾರದ ವಿರುದ್ಧ ಇರುವ ಆರೋಪಗಳ ಬಗ್ಗೆ ನೊಬೆಲ್‌ ಪುರಸ್ಕೃತೆ ಬುಧವಾರ ಸಮಗ್ರ ಉತ್ತರ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next