Advertisement

ಸೂ ಕೀ ನಿಕಟ ವಿಶ್ವಾಸಿ,ಮ್ಯಾನ್‌ಮಾರ್‌ ಅಧ್ಯಕ್ಷ ಹಠಾತ್‌ ರಾಜೀನಾಮೆ

12:24 PM Mar 21, 2018 | Team Udayavani |

ಯಾಂಗೂನ್‌ : ಮ್ಯಾನ್‌ಮಾರ್‌ ಅಧ್ಯಕ್ಷ ಹಿನ್‌ ಕಾವ್‌ ಅವರಿಂದು ಹಠಾತ್ತನೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಎಲ್ಲರನ್ನೂ ಚಕಿತಗೊಳಿಸಿದ್ದಾರೆ.

Advertisement

ಹಿನ್‌ ಕಾವ್‌ ಅವರ ಅಛಾನಕ್‌ ರಾಜೀನಾಮೆಯೊಂದಿಗೆ ದೇಶದ ವಾಸ್ತವಿಕ ನಾಯಕಿ ಆಂಗ್‌ ಸಾನ್‌ ಸೂ ಕೀ ಅವರಿಗೀಗ ಬಲಗೈ ಬಂಟನಂತಿದ್ದ  ನಿಕಟ ವಿಶ್ವಾಸಾರ್ಹ ಸಲಹೆಗಾರ ಇಲ್ಲದಂತಾಗಿದೆ. 

ರೊಹಿಂಗ್ಯಾಗಳಿಗೆ ಸಂಬಂಧಿಸಿದ ರಖೈನ್‌ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ರೊಹಿಂಗ್ಯಾಗಳ ವಿಷಯದಲ್ಲಿ   ಸೂ ಕೀ ಅವರು ಈಚೆಗೆ ಕೆಲ ಕಾಲದಿಂದ ಅಂತಾರಾಷ್ಟ್ರೀಯ ರಾಜಕೀಯ ಒತ್ತಡವನ್ನು ಎದುರಿಸುತ್ತಿದ್ದಾರೆ. 

ಅಧ್ಯಕ್ಷ ಹಿನ್‌ ಕಾವ್‌ ಅವರು ಸೂ ಕೀ ಅವರ ಹಳೇ ಶಾಲಾ ಸ್ನೇಹಿತರಾಗಿದ್ದರು. ಮ್ಯಾನ್‌ಮಾರ್‌ ಮಿಲಿಟರಿ ಸಿದ್ಧಪಡಿಸಿರುವ ಕರಡು ಸಂವಿಧಾನದ ಪ್ರಕಾರ ದೇಶದ ಪರಮೋಚ್ಚ ಸ್ಥಾನಕ್ಕೇರಲಾಗದ ಸೂ ಕೀ ಅವರ ಪರವಾಗಿ ಅಧ್ಯಕ್ಷ ಹಿನ್‌ ಕಾವ್‌ ಬಹುತೇಕ ಉತ್ಸವ ಮೂರ್ತಿಯಂತಿದ್ದು ಸೂ ಕೀ  ಪರವಾಗಿ ಸರಕಾರದ ಎಲ್ಲ  ಕಾರ್ಯಭಾರಗಳನ್ನು  ನಿಭಾಯಿಸುತ್ತಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next