Advertisement
ಇಂಥ ಸಂದರ್ಭದಲ್ಲಿ ಮ್ಯಾನ್ಮಾರ್ ದೇಶವಂತೂ ತಣ್ಣಗೆ ಕುಳಿತಿದೆ.ಅಲ್ಲೀಗ ನೈರ್ಮಲ್ಯಕ್ಕೂ ಮಹತ್ವ ಕಡಿಮೆ ನೀಡುತ್ತಿದ್ದಾರೆ. ಸ್ಥಳಾಂತರ ಮಾಡಿದ ಕಾರ್ಮಿಕರ ಕುಟುಂಬಗಳು ವಾಸ ಮಾಡುತ್ತಿರುವ ಪ್ರದೇಶದಲ್ಲಿ ಜನಸಂದಣಿ ಹೆಚ್ಚಿದೆ. ಲಾಕ್‌ಡೌನ್ ಆಗಲಿ ಸಾಮಾಜಿಕ ಅಂತರ ನಿಯಮವಾಗಲಿ ಪಾಲನೆ ಆಗುತ್ತಿಲ್ಲ, ಇದಾವುದನ್ನೂ ಸರಕಾರ ಅಷ್ಟೇನೂ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ಸ್ಥಳೀಯ ಮಾನವ ಹಕ್ಕು ಸಂಘಟನೆ ಆತಂಕ ವ್ಯಕ್ತಪಡಿಸಿದೆ.
ಸುಮಾರು 5.4 ಕೋಟಿ ಜನಸಂಖ್ಯೆಯ ಮ್ಯಾನ್ಮಾರ್ ಸುಸಜ್ಜಿತ ಆರೋಗ್ಯ ವ್ಯವಸ್ಥೆಯನ್ನು ಹೊಂದಿಲ್ಲ. ಇಲ್ಲಿನ ಜನಸಂಖ್ಯೆಯ ಶೇ.80ರಷ್ಟು ಜನರು ಶುದ್ಧ ನೀರಿನ ಸೌಲಭ್ಯ, ಅಗತ್ಯ ಸೇವೆಗಳಿಂದ ವಂಚಿತರಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಾಕಷ್ಟು ಸಂಖ್ಯೆಯಲ್ಲಿಲ್ಲ ಎಂದು ಅಂತಾರಾಷ್ಟ್ರೀಯ ಸಂಬಂಧಗಳ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ನೆಹಗಿನ್‌ಪಾವೊ ಕಿಪೆjನ್ ಅಲ್ಲಿನ ಆರೋಗ್ಯ ಸ್ಥಿತಿಗಳನ್ನು ತೆರೆದಿಟ್ಟಿದ್ದಾರೆ. 40 ಜನರಿಗೆ ಒಂದೇ ಶೌಚಾಲಯ
ಈ ಹಿಂದೆ ಮ್ಯಾನ್ಮಾರ್‌ನಲ್ಲಿ ನಡೆದ ಕೋಮು ಗಲಭೆಯಿಂದ ಸಾವಿರಾರು ಜನರನ್ನು ಸ್ಥಳಾಂತರ ಗೊಳಿಸಿದ್ದು, ನರಕ ಯಾತನೆ ಅನುಭ ವಿಸುವಂತಾಗಿದೆ. ಇಲ್ಲಿನ ಸಮುದಾಯಗಳಲ್ಲಿ ವಾಸಿಸುತ್ತಿರುವ ವರು ಒಂದು ಶೌಚಾಲಯವನ್ನು 40 ಜನರು ಹಂಚಿಕೊಳ್ಳುತ್ತಿದ್ದು, ದಿನೇ ದಿನೆ ರೋಗ ಹರಡುವ ಭೀತಿ ಹೆಚ್ಚುತ್ತಲೇ ಇದೆ.
Related Articles
ಮ್ಯಾನ್ಮಾರ್ ಚೀನದೊಂದಿಗೆ ಗಡಿಯನ್ನು ಹಂಚಿಕೊಂಡಿದ್ದು, ಪ್ರತಿನಿತ್ಯ ಕೆಲಸದ ನಿಮಿತ್ತ ಕಾನೂನು ಬಾಹಿರವಾಗಿ ಜನರು ಗಡಿ ದಾಟಿ ಹೋಗುತ್ತಲೇ ಇದ್ದಾರೆ.
Advertisement
ಚೀನ ಕೋವಿಡ್ 19 ಸಂಕಷ್ಟದಿಂದ ಇದೀಗ ಚೇತರಿಸಿಕೊಳ್ಳುತ್ತಿದೆ. ಇದರ ಮಧ್ಯೆಯೂ ನೂರಾರು ಕಾರ್ಮಿಕರು ಅತ್ತ ಪ್ರಯಾಣಿಸಿ ಬಂದರೂ ಯಾವುದೇ ತಪಾಸಣೆಗೆ ಒಳಗಾಗದಿರುವುದು ಆತಂಕವನ್ನು ಹೆಚ್ಚು ಮಾಡಿಸಿದೆ.
300 ಪ್ರಕರಣಗಳು ಹೆಚ್ಚಳಕಳೆದ ವಾರವಷ್ಟೇ ಕೋವಿಡ್ 19 ಮೊದಲ ಪಾಸಿಟವ್ ಪತ್ತೆಯಾಗಿದ್ದ ಮ್ಯಾನ್ಮಾರ್‌ನಲ್ಲಿ ಇದೀಗ 300 ಪ್ರಕರಣಗಳಾಗಿದ್ದು, ಒಂದು ಸಾವು ಘಟಿಸಿದೆ. ಇಲ್ಲಿನ ಮಾಧ್ಯಮಗಳಲ್ಲಿ ಮ್ಯಾನ್ಮಾರ ಸರಕಾರದ ಮಂದಗತಿ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಅಲ್ಲದೇ, ಈ ಧೋರಣೆಯು ಮುಂಬರುವ ದಿನಗಳಲ್ಲಿ ಸಾಕಷ್ಟು ಸಾವು ನೋವಿಗೆ ಕಾರಣವಾದೀತು ಎಂದೂ ಎಚ್ಚರಿಸಿವೆ. ಆದರೂ ಸರಕಾರದ ಕ್ರಿಯಾಶೀಲತೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎನ್ನಲಾಗಿದೆ. ಪ್ರಾಥಮಿಕ ಹಂತದಲ್ಲಿದೇವೆ ಎಂದು ನಿರ್ಲಕ್ಷé ತೋರಿದ ರಾಷ್ಟ್ರಗಳಿಂದು ಅಸಹಾಯಕ ಸ್ಥಿತಿಯಲ್ಲಿದ್ದು, ಮುಂದೆ ಮ್ಯಾನ್ಮಾರ್ ಕೂಡ ಇದೇ ಸರದಿಯಲ್ಲಿ ನಿಲ್ಲಲಿದೆ ಎಂಬ ಆತಂಕ ತಜ್ಞರದ್ದು.