Advertisement

ದಂಗೆ: ಆ್ಯಂಗ್ ಸಾನ್ ಸೂ ಕಿಗೆ 4 ವರ್ಷ ಜೈಲುಶಿಕ್ಷೆ ವಿಧಿಸಿದ ಮ್ಯಾನ್ಮಾರ್ ಕೋರ್ಟ್

12:45 PM Dec 06, 2021 | Team Udayavani |

ನವದೆಹಲಿ: ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಪದಚ್ಯುತ ನಾಯಕಿ ಆ್ಯಂಗ್ ಸಾನ್ ಸೂ ಕಿ ಗೆ ಮ್ಯಾನ್ಮಾರ್ ಕೋರ್ಟ್ ಸೋಮವಾರ(ಡಿಸೆಂಬರ್ 06) ನಾಲ್ಕು ವರ್ಷಗಳ ಜೈಲುಶಿಕ್ಷೆ ವಿಧಿಸಿದೆ.

Advertisement

ಇದನ್ನೂ ಓದಿ:ಅಗತ್ಯ ಬಿದ್ದರೆ ಶಾಲೆಗಳನ್ನು ಬಂದ್ ಮಾಡಲಾಗುತ್ತದೆ : ಸಚಿವ ನಾಗೇಶ್

ಮ್ಯಾನ್ಮಾರ್ ಸೇನೆಯ ವಿರುದ್ಧ ಭಿನ್ನಾಭಿಪ್ರಾಯ ಹೊಂದಿದ್ದ ಹಾಗೂ ಕೋವಿಡ 19 ನಿಯಮ ಉಲ್ಲಂಘಿಸಿದ ಆರೋಪದಡಿ ಪದಚ್ಯುತಿಗೊಂಡಿದ್ದ ಸೂ ಕಿಗೆ ನಾಲ್ಕು ವರ್ಷ ಜೈಲುಶಿಕ್ಷೆ ವಿಧಿಸಿರುವುದಾಗಿ ವರದಿ ತಿಳಿಸಿದೆ.

76 ವರ್ಷದ ಆ್ಯಂಗ್ ಸಾನ್ ಸೂ ಕಿ ವಿರುದ್ಧ ಹಲವಾರು ಭ್ರಷ್ಟಾಚಾರ ಆರೋಪ ದಾಖಲಾಗಿದ್ದವು. ಅಲ್ಲದೇ ದೇಶದ ರಹಸ್ಯ ಕಾಯ್ದೆಯ ಉಲ್ಲಂಘನೆ ಮತ್ತು ಟೆಲಿಕಾಂ ಕಾಯ್ದೆ ಉಲ್ಲಂಘಿಸಿರುವ ಆರೋಪ ಎದುರಿಸುತ್ತಿದ್ದಾರೆ.

ಸೂ ಕಿ ವಿರುದ್ಧ ದಾಖಲಾಗಿರುವ ಆರೋಪಗಳೆಲ್ಲವೂ ಆಧಾರ ರಹಿತವಾದದ್ದು ಹಾಗೂ ಇದು ಸೂ ಕಿ ರಾಜಕೀಯ ಜೀವನವನ್ನು ಕೊನೆಗೊಳಿಸುವ ಪ್ರಯತ್ನವಾಗಿದೆ ಎಂದು ಸೂ ಕಿ ಬೆಂಬಲಿಗರು ಆರೋಪಿಸಿದ್ದಾರೆ.

Advertisement

ಫೆಬ್ರವರಿ 1ರಂದು ಸೂ ಕಿಯನ್ನು ಪದಚ್ಯುತಗೊಳಿಸಿ, ಮ್ಯಾನ್ಮಾರ್ ಸೇನೆ ಅಧಿಕಾರವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ ನಂತರ ದೇಶದಲ್ಲಿ ಬಿಗುವಿನ ವಾತಾವರಣ ಆರಂಭಗೊಂಡಿತ್ತು. ಅಲ್ಲದೇ ಸೂ ಕಿ ಬೆಂಬಲಿಗರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾಗ ಜುಂಟಾ ಮಿಲಿಟರಿ ಪ್ರತಿಭಟನಾಕಾರರನ್ನು ಹತ್ತಿಕ್ಕಿದ್ದು, ಅವರನ್ನು ಉಗ್ರರು ಎಂಬುದಾಗಿ ಹಣೆಪಟ್ಟಿ ಕಟ್ಟಿತ್ತು ಎಂದು ವರದಿ ತಿಳಿಸಿದೆ.

ಮ್ಯಾನ್ಮಾರ್ ನಲ್ಲಿನ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿದ್ದ ಅಂತಾರಾಷ್ಟ್ರೀಯ ಸಮುದಾಯ, ಕೂಡಲೇ ಸೂ ಕಿಯನ್ನು ಬಂಧನದಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next