Advertisement
ಬೆಂಗಳೂರು ಪ್ರಸ್‌ಕ್ಲಬ್ ಶುಕ್ರವಾರ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, “ಜನ ಕೆಲವರನ್ನು ತವರೂರಿನಿಂದ ಹೀನಾಯಮಾನವಾಗಿ ಓಡಿಸಿದ್ದಾರೆ. ಹಾಗಾಗಿ ಅವರು ಇನ್ನೊಬ್ಬರನ್ನು ಊರಿನಿಂದ ಓಡಿಸುವ ಬಗ್ಗೆ ಯೋಚಿಸುತ್ತಿರುತ್ತಾರೆ. ಬಹಳ ವರ್ಷಗಳಿಂದ ನನ್ನನ್ನು ಚಿಕ್ಕಮಗಳೂರಿನಿಂದ ಸುಳ್ಯಕ್ಕೆ, ಬೆಂಗಳೂರಿನಿಂದ ಸುಳ್ಯಕ್ಕೆ ಓಡಿಸುವ ಪ್ರಯತ್ನ ನಡೆದಿದೆ. ನಾನು ಮುಖ್ಯಮಂತ್ರಿಯಾಗಿದ್ದವನು. ರಾಜ್ಯದಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸಲು ಅರ್ಹ ಎಂಬುದನ್ನು ಅವರು ಅರಿಯಬೇಕು’ ಎಂದು ತಿಳಿಸಿದರು.
Related Articles
Advertisement
ಅಧಿಕಾರ ದುರುಪಯೋಗ, ಹಣ- ಹೆಂಡ ವಿತರಣೆ, ತೋಳ್ಬಲ ಪ್ರಭಾವ ಬೀರುವ ಸಂದರ್ಭದಲ್ಲಿ ಜನರ ಭಾವನೆ, ನೋವು, ನಲಿವು ಸೇರಿದಂತೆ ಎಲ್ಲ ರೀತಿಯಲ್ಲೂ ಸ್ಪಂದಿಸಿದ್ದರ ಮೌಲ್ಯಮಾಪನವಾಗಬೇಕು. ಸದ್ಯ ಕ್ಷೇತ್ರದಲ್ಲಿ ಎರಡನೇ ಸುತ್ತಿನ ಪ್ರಚಾರ ಆರಂಭಿಸಿದ್ದು, ಮತದಾರರು ಸ್ಪಂದಿಸುವ ವಿಶ್ವಾಸವಿದೆ ಎಂದು ಹೇಳಿದರು.
ನಾನು ರಾಜಕೀಯಕ್ಕೆ ಸೂಕ್ತವಲ್ಲವೇನೋ ಎಂದು ನನಗೆ ಈಗ ಅನ್ನಿಸುತ್ತಿದೆ. ನನ್ನದು ಒಂದು ದೌರ್ಬಲ್ಯವಿದೆ. ನಾನು ಮಾಡಿದ ಕೆಲಸಗಳ ಪ್ರಚಾರಕ್ಕೆ ಆದ್ಯತೆಯನ್ನೇ ನೀಡಿಲ್ಲ. ಇದರಿಂದ ಹಿನ್ನಡೆಯಾಗಬಹುದು ಎಂದುಕೊಂಡಿರಬಹುದು. ಆದರೆ ಜವಾಬ್ದಾರಿಯಿಂದ ಮತದಾರರಿಗೆ ಅಗತ್ಯವಿರುವ ಕೆಲಸ ಮಾಡಿದ ತೃಪ್ತಿ ಇದೆ. ಈ ಬಾರಿ ದೊಡ್ಡ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ.-ಡಿ.ವಿ.ಸದಾನಂದಗೌಡ, ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಹೇಳಿದ್ದು…
* ಪ್ರಧಾನಿ ಮೋದಿಯವರ ಹೆಸರಿನಲ್ಲೇ ಚುನಾವಣೆ ಎದುರಿಸುತ್ತೇವೆ. ಏಕೆಂದರೆ ಅವರು ನಮ್ಮ ಸಮರ್ಥ ನಾಯಕ. ಜನತೆಗೆ ನೀಡಿದ ಶೇ.99ರಷ್ಟು ಭರವಸೆ ಈಡೇರಿಸಲಾಗಿದೆ. ಅಭಿವೃದ್ಧಿಗೆ ಹೊಸ ಭಾಷ್ಯ ನೀಡಿದವರು ಮೋದಿ * ರಾಜ್ಯಾಧ್ಯಕ್ಷರ ಅವಧಿ ಮೂರು ವರ್ಷ. ಆದರೆ ಪಕ್ಷದ ಸಂವಿಧಾನದಲ್ಲಿ ಬದಲಾವಣೆಯಾಗಿದ್ದು, ಎರಡನೇ ಅವಧಿಗೂ ಮುಂದುವರಿಯಬಹುದು. ಇದನ್ನು ವರಿಷ್ಠರು ಗಮನಿಸಲಿದ್ದಾರೆ. ಹಾಗಾಗಿ ಈ ಹಂತದಲ್ಲಿ ಏನೂ ಹೇಳುವುದಿಲ್ಲ. ಜಿಲ್ಲಾಧ್ಯಕ್ಷರು ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಈಚಿನ ವರ್ಷಗಳಲ್ಲಿ ವರಿಷ್ಠರು ಯುವಜನತೆಗೆ ಆದ್ಯತೆ ನೀಡಿದ್ದು, ಮುಂದೆಯೂ ಒತ್ತು ನೀಡಬಹುದು. * ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಹೇಳಿಕೆಯನ್ನು ಮಾಧ್ಯಮದಲ್ಲಿ ಗಮನಿಸಿದ್ದು, ಹೆಚ್ಚಿನ ಮಾಹಿತಿ ಇಲ್ಲ. ಸಂಭಾವ್ಯ ಅಭ್ಯರ್ಥಿಗಳನ್ನು ರಾಜ್ಯ ಕೋರ್ ಕಮಿಟಿಯಿಂದ ಶಿಫಾರಸು ಮಾಡಲಾಗಿತ್ತು. ಅಂತಿಮವಾಗಿ ವರಿಷ್ಠರು ದೇಶಾದ್ಯಂತ ಯುವಜನತೆ, ಮಹಿಳೆಯರಿಗೆ ನೀಡಿರುವ ಆದ್ಯತೆಯನ್ನು ಪರಿಶೀಲಿಸಿ ತೀರ್ಮಾನಿಸಿರುತ್ತಾರೆ. ಬಿ.ಎಲ್.ಸಂತೋಷ್ ಅವರು ಯಾವ ಹಿನ್ನೆಲೆಯಲ್ಲಿ ಮಾತನಾಡಿದ್ದಾರೋ ಗೊತ್ತಿಲ್ಲ. ಹಾಗಾಗಿ ಉತ್ತರ ಕೊಡುವ ಪರಿಸ್ಥಿತಿಯಲ್ಲಿ ಇಲ್ಲ. * ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕವಲ್ಲ, ರಾಜ್ಯದಲ್ಲಿ ಎರಡನೇ ಹಂತದ ಮತದಾನ ಮುಗಿಯುತ್ತಿದ್ದಂತೆ ರಾಜ್ಯ ಸರ್ಕಾರದ ವಿಚಾರದಲ್ಲಿ ಏನು ಬೇಕಾದರೂ ಆಗಬಹುದು. * ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ನೀಡಿರುವುದು ವರವಾಗಲಿದೆಯೇ ಹೊರತು ಶಾಪವಾಗದು.