ಪಣಜಿ:ಕಾರ್ಪೋರೇಟ್ ವ್ಯಕ್ತಿಗಳು ತಮ್ಮ ಶೇ.99ರಷ್ಟು ಸಮಯವನ್ನು ಸ್ವಹಿತಾಸಕ್ತಿಗಾಗಿ ಬಳಸುತ್ತಾರೆ.ಆದರೆ ಸಮಯವನ್ನು ಎಲ್ಲ ಒಳಿತಿಗಾಗಿ ಬಳಸಬೇಕು ಎಂದು ಯೋಗ ಗುರು ಬಾಬಾರಾಮ್ ದೇವ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಎಸ್.ಕೆ.ಭಗವಾನ್ ನಿಧನ: ಸಿದ್ದರಾಮಯ್ಯ, ಸಿಎಂ ಬೊಮ್ಮಾಯಿ ಸೇರಿ ಹಲವರಿಂದ ಸಂತಾಪ
ಹರಿದ್ವಾರದಿಂದ ನಾನು ಮೂರು ದಿನಗಳಿಗಾಗಿ ಗೋವಾಕ್ಕೆ ಬಂದಿದ್ದು, ನನ್ನ ಮೂರು ದಿನಗಳ ಸಮಯದ ಮೌಲ್ಯ ಕೈಗಾರಿಕೋದ್ಯಮಿಗಳಾದ ಅದಾನಿ, ಅಂಬಾನಿ, ಟಾಟಾಗಿಂತಲೂ ಹೆಚ್ಚು ಮೌಲ್ಯಯುತವಾದದ್ದು ಎಂದು ತಿಳಿಸಿದ್ದಾರೆ.
ಕಾರ್ಪೋರೇಟ್ ವ್ಯಕ್ತಿಗಳು ಸ್ವಹಿತಸಕ್ತಿಗಾಗಿ ಸಮಯವನ್ನು ಬಳಸಿಕೊಳ್ಳುತ್ತಾರೆ. ಆದರೆ ಸಾಧು, ಸಂತರು ತಮ್ಮ ಸಮಯವನ್ನು ಜನಸಾಮಾನ್ಯರ ಓಳಿತಿಗಾಗಿ ಬಳಸುತ್ತಾರೆ ಎಂದು ಬಾಬಾ ರಾಮ್ ದೇವ್ ಹೇಳಿದರು.
ಗೋವಾದ ಪಣಜಿಯಲ್ಲಿ ರಾಮ್ ದೇವ್ ಆಪ್ತ ಆಚಾರ್ಯ ಬಾಲಕೃಷ್ಣ ಆಯೋಜಿಸಿದ್ದ ಸಮಾರಂಭವನ್ನು ಉದ್ದೇಶಿಸಿ ಬಾಬಾ ಮಾತನಾಡಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಕೇಂದ್ರ ಸಚಿವ ಶ್ರೀಪಾದ್ ನಾಯ್ಕ್ ಉಪಸ್ಥಿತರಿದ್ದರು.
ವೃತ್ತಿಪರ ಆಡಳಿತ, ಪಾರದರ್ಶಕ ಮತ್ತು ಹೊಣೆಗಾರಿಕೆಯ ಜವಾಬ್ದಾರಿ ನಿರ್ವಹಣೆಯ ಮೂಲಕ ನಷ್ಟದಲ್ಲಿದ್ದ ಪತಂಜಲಿ ಕಂಪನಿಯು ಈ ಸಾಲಿನಲ್ಲಿ 40,000 ಕೋಟಿ ರೂ. ವಹಿವಾಟು ನಡೆಸಿದ್ದು, ಇದಕ್ಕಾಗಿ ಬಾಲಕೃಷ್ಣ ಅವರನ್ನು ಅಭಿನಂದಿಸುವುದಾಗಿ ಯೋಗ ಗುರು ಬಾಬಾ ರಾಮ್ ದೇವ್ ಹೇಳಿದರು.