Advertisement
ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಶರಿಯಾ ಬಗ್ಗೆ ನನ್ನ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಿದ್ದರ ಬಗ್ಗೆ ನನಗೆ ಆಶ್ಚರ್ಯವಿಲ್ಲ. ಶರಿಯಾವನ್ನು ಎತ್ತಿಹಿಡಿಯುವುದಾಗಿ ಹೇಳಿಕೊಳ್ಳುವ ಹೆಚ್ಚಿನ ದೇಶಗಳು ಅದರ ನೈಜ ಮೌಲ್ಯಗಳನ್ನು ಗ್ರಹಿಸುವಲ್ಲಿ ವಿಫಲವಾಗಿವೆ. ಮಹಿಳೆಯರ ಮೇಲೆ ನಿರ್ಬಂಧ ಹೇರಲಷ್ಟೇ ಅದನ್ನು ಅಡ್ಡ ತರಲಾಗುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ.
Related Articles
Advertisement
ನಿನ್ನೆ(ಬುಧವಾರ, ಸಪ್ಟೆಂಬರ್ 8) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಅವರು, ತಾಲಿಬಾನಿಗಳು ಸರಿಯಾದ ರೀತಿಯಲ್ಲಿ ಶರಿಯಾ ನೀತಿ ಅನುಸರಿಸಿದರೆ ಅವರು ಪೂರ್ತಿ ವಿಶ್ವಕ್ಕೇ ಉದಾಹರಣೆಯಾಗಬಲ್ಲರು ಎಂದು ಹೇಳಿದ್ದರು.
ತಾಲಿಬಾನಿಗಳು ಈ ಹಿಂದಿನಂತೆ ಮಾನವ ಹಕ್ಕು ಉಲ್ಲಂಘನೆ ಮಾಡಬಾರದು. ಅವರು ಹೆಣ್ಣು ಮಕ್ಕಳಿಗೆ ಗೌರವ ನೀಡಿ ನಿಜವಾದ ಶರಿಯಾ ನಿಯಮ ಪಾಲಿಸಬೇಕು. 1990ರಲ್ಲಿ ಮಾಡಿ ದಂತೆಯೇ ಮಾಡಿದರೆ ಅದು ಇಡೀ ವಿಶ್ವಕ್ಕೇ ಅಪಾಯ ಎಂದು ಹೇಳಿದ್ದರು.
ಇದನ್ನೂ ಓದಿ : ಪರವಾನಿಗೆ ಪಡೆದರೂ ಗಣಪತಿ ಪೆಂಡಾಲ್ ಕಿತ್ತ ವ್ಯವಸ್ಥೆ ವಿರುದ್ಧ ಹಿಂದೂಪರ ಸಂಘಟನೆಗಳ ಪ್ರತಿಭಟನೆ