Advertisement

ನನ್ನ ನಿಲುವು ಮತ್ತೂಬ್ಬರ ಮೇಲೆ ಹೇರಲ್ಲ

03:50 AM Jan 31, 2017 | Harsha Rao |

ಕಾಂಗ್ರೆಸ್‌ ಹಿರಿಯ ನಾಯಕ ಎಸ್‌.ಎಂ.ಕೃಷ್ಣ ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಕಂಪನ ಸೃಷ್ಟಿಯಾಗಿದೆ. ಜೆಡಿಎಸ್‌- ಬಿಜೆಪಿಯಲ್ಲಿ “ರಾಜಕೀಯದ ಲಾಭ’ದ ಲೆಕ್ಕಾಚಾರವೂ ಬಿರುಸುಗೊಂಡಿದೆ. “ಯಾವುದೇ ಪಕ್ಷದಿಂದ ನನಗೆ ಆಹ್ವಾನ ಬಂದಿಲ್ಲ’ ಅಂತ ಕೃಷ್ಣ ಅವರು ಸ್ಪಷ್ಟಪಡಿಸಿದ್ದಾರೆ, ಕಾಂಗ್ರೆಸ್‌ನ ಮತ್ತೂಬ್ಬ ಹಿರಿಯ ನಾಯಕ ಜನಾರ್ದನ ಪೂಜಾರಿ ಸಿದ್ದರಾಮಯ್ಯ ಅವರನ್ನು “ಶನಿ’ ಎಂದು ಹೀಗಳೆಯುವ ಮೂಲಕ ಒಡಲಾಳದ ಆಕ್ರೋಶ ಮತ್ತೆ ಹೊರಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ “ರಾಜೀನಾಮೆ ಹಿಂಪಡೆಯಿರಿ’ ಎಂಬ ಮನವಿಗೂ ಕ್ಯಾರೆ ಎನ್ನದಿರುವುದು “ಕೃಷ್ಣ ನಡೆ’ಯ ಕೌತುಕಕ್ಕೆ ಕಾರಣವಾಗಿದೆ…

Advertisement

ಮಂಡ್ಯ/ಮದ್ದೂರು: ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಸ್ವಂತ ತೀರ್ಮಾನ. ನನ್ನ ನಿಲುವನ್ನು ಇನ್ನೊಬ್ಬರ
ಮೇಲೆ ಬಲವಂತವಾಗಿ ಹೇರುವ ಪ್ರಯತ್ನವನ್ನು ಎಂದಿಗೂ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಸ್‌. ಎಂ.ಕೃಷ್ಣ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್‌ಗೆ ರಾಜೀನಾಮೆ ಏಕೆ ಕೊಟ್ಟೆ ಎಂಬ ಪ್ರಶ್ನೆಗೆ ಈಗಾಗಲೇ
ಉತ್ತರ ನೀಡಿದ್ದೇನೆ. ಈಗ ತಮ್ಮೊಂದಿಗೆ ಬನ್ನಿ ಎಂದು ಯಾರನ್ನೂ ಕರೆದಿಲ್ಲ, ಕರೆಯುವುದೂ ಇಲ್ಲ. ಏಕೆಂದರೆ ಅವರವರ ಅನುಕೂಲತೆಗಳು, ಸಂದಿಗ್ಧತೆಗಳು ಏನೇನಿವೆಯೋ ಗೊತ್ತಿಲ್ಲ. ಅವರವರ ನಡೆಯನ್ನು ಅವರವರೇ ತೀರ್ಮಾನ ಮಾಡಬೇಕು. ಎಲ್ಲರೂ ತೀರ್ಮಾನ ತೆಗೆದುಕೊಳ್ಳಲು ಸ್ವತಂತ್ರರು. ಆ ಕಾರಣಕ್ಕೆ ಯಾರೊಂದಿಗೂ ಪೂರ್ವಭಾವಿ ಸಮಾಲೋಚನೆ ಮಾಡಿಲ್ಲ. ಇನ್ನು ಮುಂದೆ ಸಮಾಲೋಚಿಸಲು ಪ್ರಾರಂಭಿಸುತ್ತೇನೆ. ಅವರ ಮನೋ ಇಂಗಿತ ತಿಳಿದು ಮುಂದಿನ ಹೆಜ್ಜೆ ಇಡುತ್ತೇನೆ’ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಜತೆ ಮಾತನಾಡಿದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದೆಲ್ಲ
ಊಹಾಪೋಹ. ಸದಾನಂದಗೌಡರ ಅಭಿನಂದನಾ ಗ್ರಂಥ ಬಿಡುಗಡೆ ವೇಳೆ ಅಲ್ಲಿ ಉಭಯ ಕುಶಲೋಪರಿಗಷ್ಟೇ
ನಮ್ಮಿಬ್ಬರ ಮಾತುಕತೆ ಸೀಮಿತವಾಗಿತ್ತು. ಪಕ್ಷ ಸೇರುವಂತೆ ಯಾರಿಂದಲೂ ತಮಗೆ ಆಹ್ವಾನ ಬಂದಿಲ್ಲ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next