Advertisement
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ನಾನು ಉಪ ಮುಖ್ಯಮಂತ್ರಿ ಆಗಿದ್ದಾಗ 100 ಕೋಟಿ ನೀಡಿ, ಮಹದಾಯಿ ನದಿಯನ್ನು ಕಳಸಾ-ಬಂಡೂರಿ ನಾಲೆಗೆ ಜೋಡಿಸುವ ಕಾಮಗಾರಿಗೆ ಚಾಲನೆ ನೀಡಿದ್ದೆ. ಆದರೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ಗೋವಾದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕಕ್ಕೆ ಒಂದು ಹನಿ ನೀರನ್ನೂ ಕೊಡುವುದಿಲ್ಲ ಎಂದು ಹೇಳಿದ್ದರು. ಈ ವಿವಾದ ನ್ಯಾಯಾಧಿಕರಣದ ಮೆಟ್ಟಿಲು ಹತ್ತಲು ಇದೇ ಕಾಂಗ್ರೆಸ್‌ನವರು ಕಾರಣ’ ಎಂದು ಆರೋಪಿಸಿದರು.
ಮಹದಾಯಿ ವಿಷಯದಲ್ಲಿ ಬಿಜೆಪಿಯವರು ಉತ್ತರ ಕುಮಾರನ ಪೌರುಷದಂತೆ ವರ್ತಿಸುತ್ತಿದ್ದಾರೆ ಎಂಬ ಸಿದ್ದರಾಮಯ್ಯನವರ ಟೀಕೆಗೆ ಖಾರವಾಗಿ ಉತ್ತರಿಸಿದ ಬಿಎಸ್‌ವೈ, “ತಲೆ ತಿರುಕ ಮುಖ್ಯಮಂತ್ರಿಯಿಂದ ನಮಗೆ ಪ್ರಮಾಣಪತ್ರ ಬೇಕಿಲ್ಲ. ಮಹದಾಯಿ ವಿಷಯದಲ್ಲಿ ಮುಖ್ಯಮಂತ್ರಿಯಾಗಿ ತಮ್ಮ ಜವಾಬ್ದಾರಿ- ಪಾತ್ರ ಏನೆಂಬುದನ್ನು ಅವರು ಮೊದಲು ಸ್ಪಷ್ಟಪಡಿಸಲಿ’ ಎಂದು ಸವಾಲು ಹಾಕಿದರು.