Advertisement

ಆಡಿಯೋ ಧ್ವನಿ ನನ್ನದೇ: ಕುಮಾರಸ್ವಾಮಿ ವಿರುದ್ಧ ಬಿಎಸ್‌ವೈ ಕೆಂಡ 

12:30 AM Feb 11, 2019 | |

ಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ “ಆಪರೇಷನ್‌ ಕಮಲ’ ಆಡಿಯೋ ರವಿವಾರ ಹೊಸ ತಿರುವು ಪಡೆದಿದೆ. ಗುರುಮಿಠಕಲ್‌ ಶಾಸಕ ನಾಗನ ಗೌಡ ಕಂದಕೂರ ಪುತ್ರ ಶರಣ ಗೌಡ ಜತೆಗೆ ಮಾತನಾಡಿದ್ದು ನಾನೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಒಪ್ಪಿಕೊಂಡಿದ್ದಾರಲ್ಲದೆ, ಸಿಎಂ ಕುಮಾರ ಸ್ವಾಮಿ “ಥರ್ಡ್‌ ಗ್ರೇಡ್‌ ಪಾಲಿಟಿಕ್ಸ್‌’ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

Advertisement

 ವಿಮಾನ ನಿಲ್ದಾಣದಲ್ಲಿ ರವಿವಾರ ಮಾತನಾಡಿದ ಅವರು, ಸಿಎಂ ಕುಮಾರ ಸ್ವಾಮಿ ಥರ್ಡ್‌ ಗ್ರೇಡ್‌ ಪಾಲಿಟಿಕ್ಸ್‌ ಮಾಡುತ್ತಿದ್ದಾರೆ. ಶಾಸಕರ ಪುತ್ರ ಶರಣಗೌಡನನ್ನು ತಾವೇ ಕಳಿಸಿಕೊಟ್ಟಿದ್ದಾಗಿ ಒಪ್ಪಿಕೊಂಡು, ಪಿತೂರಿ  ಮಾಡುತ್ತಿದ್ದಾರೆ. ಶಾಸಕರ ಪುತ್ರ ಶರಣ ಗೌಡ ನನ್ನು ರಾತ್ರಿ 12.30ಕ್ಕೆ ಕಳಿಸಿಕೊಟ್ಟು, ಗೆಸ್ಟ್‌ಹೌಸ್‌ನಲ್ಲಿದ್ದಾಗ ನನ್ನ ಜತೆ ಮಾತನಾಡಿಸುವ ಪ್ರಯತ್ನ ಮಾಡಿಸಿ ದರು. ಮಾತುಕತೆಯಲ್ಲಿ ತಮಗೆ ಬೇಕಾದ ದಾಖಲೆಯನ್ನಿಟ್ಟುಕೊಂಡು ಉಳಿದಿದ್ದನ್ನು ಕೈಬಿಟ್ಟು ಮಾಧ್ಯಮದ ಮುಂದೆ ಹೇಳಿದ್ದಾರೆ ಎಂದರು.

ಖಂಡಿಸುವೆ 
ವಿಧಾನಸಭೆ ಸ್ಪೀಕರ್‌ ರಮೇಶ್‌ ಕುಮಾರ್‌ ಪ್ರಾಮಾಣಿಕ, ಸರಳ ವ್ಯಕ್ತಿ. ಅವರಿಗೆ ನಾನು 50 ಕೋಟಿ ರೂ. ನೀಡಿ ದ್ದೇನೆ ಎಂದು ಮುಖ್ಯಮಂತ್ರಿ ಹೇಳಿದ್ದನ್ನು ಖಂಡಿಸುತ್ತೇನೆ. ಈ ಮಾತು ನಿಜವಾದರೆ ರಾಜಕೀಯವಾಗಿ ನಿವೃತ್ತಿ ಯಾಗುತ್ತೇನೆ ಎಂದು ಹೇಳಿದ ಮಾತಿಗೆ ಈಗಲೂ ಬದ್ಧನಾಗಿದ್ದೇನೆ. 

30 ಕೋ.ರೂ. ಆಮಿಷ : ಕೋಲಾರ ಜೆಡಿಎಸ್‌ ಶಾಸಕ ಕೆ. ಶ್ರೀನಿವಾಸ ಗೌಡ

ಕೋಲಾರ: “ಆಪರೇಷನ್‌ ಕಮಲ’ ಮೂಲಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸೂಚನೆ ಬಂದಿತ್ತು. ಅದಕ್ಕಾಗಿ 30 ಕೋಟಿ ರೂ. ಆಮಿಷ ಬಂದಿತ್ತು ಎಂದು ಕೋಲಾರದ ಜೆಡಿಎಸ್‌ ಶಾಸಕ ಕೆ. ಶ್ರೀನಿವಾಸ ಗೌಡ ಸ್ಫೋಟಕ ಮಾಹಿತಿ ನೀಡಿದ್ದಾರೆ. ಮೂರು ತಿಂಗಳ ಹಿಂದೆ ಬಿಜೆಪಿ ಶಾಸಕ ಡಾ| ಅಶ್ವತ್ಥನಾರಾಯಣ, ಯೋಗೀಶ್ವರ್‌, ವಿಶ್ವನಾಥ ಬೆಂಗ ಳೂರಿನ ತನ್ನ ನಿವಾಸಕ್ಕೆ ಬಂದು ವಿವರ ನೀಡಿದ್ದರು. ಮಾತುಕತೆ ಮುಗಿಸಿ ತೆರಳುವಾಗ 5 ಕೋಟಿ ರೂ. ಮುಂಗಡ ನೀಡಿದ್ದರು. ಕೆಲಸ ಪೂರ್ತಿಗೊಂಡ ಬಳಿಕ ಉಳಿದ 25 ಕೋಟಿ ರೂ. ತಲುಪಿಸುವುದಾಗಿ ಹೇಳಿದ್ದಾರೆಂದು ವಿವರಿಸಿದ್ದಾರೆ. ಮುಖ್ಯಮಂತ್ರಿ ಗಮನಕ್ಕೆ ತಂದಾಗ ಮುಂಗಡ ಮೊತ್ತವನ್ನು ಕೊಟ್ಟವರಿಗೇ ಹಿಂದಿರುಗಿಸಿ ಎಂದು ಹೇಳಿದ್ದರು ಎಂದಿದ್ದಾರೆ.

Advertisement

ಒಪ್ಪಿಕೊಳ್ಳುವುದಕ್ಕೆ ಧರ್ಮಸ್ಥಳ ಮಂಜುನಾಥ ಬುದ್ಧಿ ಕೊಟ್ಟಿರಬಹುದು. ನಾನು ಸಿ.ಡಿ. ಬಿಡುಗಡೆ ಮಾಡಿದಾಗ ಅದು ಮಿಮಿಕ್ರಿ ಎಂದಿದ್ದರು. ಧರ್ಮಸ್ಥಳದಲ್ಲಿ ನಾನು ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ.
-ಕುಮಾರಸ್ವಾಮಿ, ಮುಖ್ಯಮಂತ್ರಿ

ಆಪರೇಷನ್‌ ಕಮಲ ವಿಷಯವಾಗಿ ದೇವದುರ್ಗದಲ್ಲಿ  ಮಾತನಾಡಿದ್ದು ನಾನೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಒಪ್ಪಿಕೊಂಡಿದ್ದು, ತಾವೇ ಹೇಳಿದಂತೆ ಈಗ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು.
-ಸಿದ್ದರಾಮಯ್ಯ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next