Advertisement

ಅಪ್ಪನೂ ಶತಕ ಬಾರಿಸಬೇಕು; ವಾರ್ನರ್‌ ಮಕ್ಕಳ ಬಯಕೆ

10:25 PM Apr 21, 2022 | Team Udayavani |

ಮುಂಬಯಿ: ಈ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಪ್ರತಿನಿಧಿ ಸುತ್ತಿರುವ ಕಾಂಗರೂ ನಾಡಿನ ಎಡಗೈ ಆರಂಭಕಾರ ಡೇವಿಡ್‌ ವಾರ್ನರ್‌ ಉತ್ತಮ ಪ್ರದರ್ಶನ ನೀಡುತ್ತ ಬಂದಿದ್ದಾರೆ. 3 ಅರ್ಧ ಶತಕ ಬಾರಿಸಿ ಡೆಲ್ಲಿಯ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಪಂಜಾಬ್‌ ವಿರುದ್ಧವಂತೂ ಸಿಡಿದು ನಿಂತು ಅಜೇಯ 60 ರನ್‌ ಬಾರಿಸಿದ್ದರು.

Advertisement

ಆದರೂ ಡೇವಿಡ್‌ ವಾರ್ನರ್‌ ಮಕ್ಕಳಿಗೆ ಸಮಾಧಾನವಿಲ್ಲ. ಅಪ್ಪ ಕೂಡ ಜಾಸ್‌ ಬಟ್ಲರ್‌ ಅವರಂತೆ ಶತಕ ಬಾರಿಸಬೇಕು ಎಂದು ಹೇಳುತ್ತಿದ್ದಾರಂತೆ. ಸ್ವತಃ ವಾರ್ನರ್‌ ಈ ವಿಷಯವನ್ನು ಮಾಧ್ಯಮದವರ ಮುಂದೆ ಹೇಳಿಕೊಂಡಿದ್ದಾರೆ.

“ನಾನು ಈ ಐಪಿಎಲ್‌ನಲ್ಲಿ ಈಗಾಗಲೇ 3 ಅರ್ಧ ಶತಕ ಹೊಡೆದರೂ ಜಾಸ್‌ ಬಟ್ಲರ್‌ ಅವರಂತೆ ಸೆಂಚುರಿ ಹೊಡೆದಿಲ್ಲವೇಕೆ ಎಂದು ಮಕ್ಕಳು ಕೇಳುತ್ತಿದ್ದಾರೆ. ಹೀಗಾಗಿ ನಾನು ಇನ್ನೂ ಉತ್ತಮ ಮಟ್ಟದ ಬ್ಯಾಟಿಂಗ್‌ ಪ್ರದರ್ಶಿಸ ಬೇಕಿದೆ. ಸಾಧ್ಯವಾದಷ್ಟು ಬೇಗ ಮಕ್ಕಳ ಅಭಿಲಾಷೆಯನ್ನು ಪೂರ್ತಿಗೊಳಿಸಬೇಕಿದೆ’ ಎಂದು ವಾರ್ನರ್‌ ಹೇಳಿದರು.

“ಮಕ್ಕಳು ಕೂಡ ಐಪಿಎಲ್‌ ಪಂದ್ಯಾವಳಿ ಯನ್ನು ಬಹಳ ಕುತೂಹಲದಿಂದ ಗಮನಿಸುತ್ತಿ ರುವುದು ಖುಷಿಯ ಸಂಗತಿ. ಈ ಬಾರಿ ಬಟ್ಲರ್‌ ಆಕರ್ಷಣೆಯ ಕೇಂದ್ರವಾಗಿದ್ದಾರೆ. ಅವರ ಶತಕವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ’ ಎಂದು ವಾರ್ನರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next