Advertisement

“ನನ್ನ ಪತಿ ಯಾವ ತಪ್ಪನ್ನೂ ಮಾಡಿಲ್ಲ..” ವಂಚಕ ಕಿರಣ್‌ ಪಟೇಲ್‌ ಪತ್ನಿ ಮೊದಲ ಪ್ರತಿಕ್ರಿಯೆ

09:35 AM Mar 18, 2023 | Team Udayavani |

ನವದೆಹಲಿ: ಪ್ರಧಾನ ಮಂತ್ರಿ ಸಚಿವಾಲಯದ ಹಿರಿಯ ಅಧಿಕಾರಿ ಎಂದು ಸುಳ್ಳು ಹೇಳಿ ಜಮ್ಮು-ಕಾಶ್ಮೀರದ ಆಡಳಿತಾಧಿಕಾರಿಗಳನ್ನೇ ವಂಚಿಸಿ ಬಂಧನಕ್ಕೆ ಒಳಗಾಗಿರುವ ಗುಜರಾತ್ ನ ಕಿರಣ್ ಪಟೇಲ್ ಅವರ ಪತ್ನಿ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಝಡ್ ಪ್ಲಸ್ ಭದ್ರತೆ, ಬುಲೆಟ್ ಪ್ರೂಫ್ ಮಹೀಂದ್ರಾ ಸ್ಕಾರ್ಪಿಯೋ ಎಸ್ ಯುವಿ, ಪಂಚತಾರಾ ಹೋಟೆಲ್ ನಲ್ಲಿ ಆತಿಥ್ಯ ವಹಿಸಿ ಗುಜರಾತ್ ನ ಕಿರಣ್ ಪಟೇಲ್ ಎಂಬಾತ ತಾನು ಪ್ರಧಾನ ಮಂತ್ರಿ ಸಚಿವಾಲಯದ ಹಿರಿಯ ಅಧಿಕಾರಿ ಎಂದು ಕಾಶ್ಮೀರದ ಆಡಳಿತಾಧಿಕಾರಿಗಳನ್ನು ವಂಚಿಸಿ ಹೈಫೈ ಲೈಫ್‌ ನಡೆಸುತ್ತಿದ್ದರು.

ಮೂರನೇ ಬಾರಿ ಕಾಶ್ಮೀರಕ್ಕೆ ಭೇಟಿ ನೀಡುವ ವೇಳೆ ( ಮಾ. 3 ರಂದು) ಪೊಲೀಸರು ಈತನನ್ನು ಬಂಧಿಸಿದ್ದಾರೆ. ಈತನ ಬಂಧನದ ವಿಷಯವನ್ನು ಪೊಲೀಸರು ರಹಸ್ಯವಾಗಿಟ್ಟಿದ್ದು, ಕೋರ್ಟ್ ಗೆ ಹಾಜರುಪಡಿಸಿದ ವೇಳೆ ನ್ಯಾಯಾಧೀಶರು ಪಟೇಲ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ ಬಳಿಕವಷ್ಟೇ ಪ್ರಕರಣ ಬಹಿರಂಗವಾಗಿರುವುದಾಗಿ ವರದಿ ವಿವರಿಸಿದೆ.

ಇದೀಗ ಪ್ರಕರಣದ ಬಗ್ಗೆ ಕಿರಣ್‌ ಪಟೇಲ್‌ ಅವರ ಪತ್ನಿ ʼಇಂಡಿಯಾ ಟುಡೇʼ ಜೊತೆ ಮಾತನಾಡಿದ್ದಾರೆ. “ನನ್ನ ಪತಿ ಎಂಜಿನಿಯರ್ ಮತ್ತು ನಾನು ವೈದ್ಯ. ನನ್ನ ಪತಿ ಇಂಜಿನಿಯರ್ ಆಗಿರುವ ಕಾರಣಕ್ಕೆ ಅಭಿವೃದ್ಧಿ ಕಾರ್ಯದ ಹಿನ್ನೆಲೆಯಲ್ಲಿ ಹೋಗಿದ್ದರು ವಿನಃ ಬೇರೇನೂ ಕಾರಣದಿಂದಲ್ಲ. ನನ್ನ ಪತಿ ಯಾವ ತಪ್ಪನ್ನು ಮಾಡಿಲ್ಲ. ಅವರು ತಪ್ಪು ಮಾಡಲು ಸಾಧ್ಯವೇ ಇಲ್ಲ. ಈ ವಿಷಯವನ್ನು ನಮ್ಮ ವಕೀಲರು ನೋಡಿಕೊಳ್ಳುತ್ತಾರೆ. ಇದಕ್ಕಿಂತ ಹೆಚ್ಚು ಬೇರೇನನ್ನು ನಾನು ಹೇಳುವುದಿಲ್ಲ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಅಹಮದಾಬಾದ್ ಕ್ರೈಂ ಬ್ರಾಂಚ್ ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಕೂಡ ಈ ಬಗ್ಗೆ ತನಿಖೆ ಆರಂಭಿಸಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next