Advertisement

ತಾಂಡಾಗಳ ಅಭಿವೃದ್ಧಿಯೇ ನನ್ನ ಗುರಿ

05:18 PM Mar 22, 2018 | |

ಹುಣಸಗಿ: ಮತಕ್ಷೇತ್ರದ ತಾಂಡಾ ಸೇರಿದಂತೆ ಹಳ್ಳಿಗಳ ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು, 2017-18ನೇ ಸಾಲಿನ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಕೋಳಿಹಾಳ ಗ್ರಾಮದ ಮೂರು ತಾಂಡಾಗಳನ್ನು ಆಯ್ಕೆ ಮಾಡಲಾಗಿದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು. ಸಮೀಪದ ಕೋಳಿಹಾಳ ತಾಂಡಾದಲ್ಲಿ ಬುಧವಾರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಈ ಯೋಜನೆಯಲ್ಲಿ ಸಿಸಿ ರಸ್ತೆ ನಿರ್ಮಾಣ, ಸಮುದಾಯ ಭವನಗಳ ನಿರ್ಮಿಸುವುದು, ಸೋಲಾರ್‌ ವಿದ್ಯುತ್‌ನ ಬೀದಿ ದೀಪಗಳ ಅಳವಡಿಕೆ, ಮೂರು ತಾಂಡಾಗಳಲ್ಲಿನ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಲಾಗುತ್ತಿದ್ದು, ಇದಕ್ಕಾಗಿ 1 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ ಸರಕಾರದ ಸಾಧನೆ ಹಾಗೂ ಮತಕ್ಷೇತ್ರದಲ್ಲಿನ ಅಭಿವೃದ್ಧಿ ಕಾಮಗಾರಿ ನೋಡಿ ಬಿಜೆಪಿ ಪಕ್ಷದವರಿಗೆ ಸಹಿಸಲಾಗುತ್ತಿಲ್ಲ ಎಂದು ಛೇಡಿಸಿದರು. ಮತದಾರರನ್ನು ಓಲೈಸಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಸಾರ್ವಜನಿಕರು ತಕ್ಕ
ಉತ್ತರ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ರಾಜಾ ವೇಣುಗೋಪಾಲ ನಾಯಕ, ನಾಗಣ್ಣ ದಂಡಿನ್‌, ವೆಂಕೋಬ ಯಾದವ್‌, ಆರ್‌.ಎಂ. ರೇವಡಿ, ಅಣ್ಣಪ್ಪಗೌಡ ಪಾಟೀಲ್‌, ಗೋಪಾಲ ದೊರೆ ಅಮಲ್ಯಾಳ್‌, ಜೆ.ಎಫ್‌. ಮುಜಾವರ್‌, ಬಾಸುನಾಯಕ ರಾಠೊಡ್‌, ಸಂತೋಷ ಜಾಧವ್‌, ಶೇಖಪ್ಪ ಇತರರು ಇದ್ದರು

ಸಿಸಿ ರಸ್ತೆ ಕಾಮಗಾರಿಗೆ ಚಾಲನೆ 
ಸುರಪುರ: ನಗರದ ಸಾರ್ವಜನಿಕರಿಗೆ ಮೂಲ ಸೌಕರ್ಯ ಒದಗಿಸುವುದರ ಜೊತೆಗೆ ನಗರದ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಿದ್ದೇನೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು. 

ನಗರದ ಮಹಾತ್ಮ ಗಾಂಧೀಜಿ ವೃತ್ತದಿಂದ ಕಬಾಡಗೇರಾವರೆಗೆ ನಿರ್ಮಿಸಲು ಉದ್ದೇಶಿಸಲಾಗಿರುವ 1.90 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಮತ್ತು ಒಳ ಚರಂಡಿ ಕಾಮಗಾರಿಗೆ ಬುಧವಾರ ಗಾಂಧಿ ವೃತ್ತದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ನಗರದ ಮುಖ್ಯ ರಸ್ತೆಯ ಮಾರ್ಗದುದ್ದಕ್ಕೂ ಒಳ ಚರಂಡಿ ಕಾಮಗಾರಿ ಸರಿಯಾಗಿ ನಿರ್ವಹಿಸದ ಕಾರಣ ಅಲ್ಲಲ್ಲಿ ತಗ್ಗುಗಳು ನಿರ್ಮಾಣ ಆಗಿದ್ದವು. ಇದರಿಂದ ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗಿತ್ತು. ಇದನ್ನು ಗಮನಿಸಿ ಸಿಸಿ ರಸ್ತೆ ನಿರ್ಮಾಣಕ್ಕೆ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದರು.

Advertisement

ಈ ಕಾಮಗಾರಿಯು ಲೋಕೊಪಯೋಗಿ ಇಲಾಖೆಗೆ ಸಂಬಂಧಿಸಿದ್ದು, ವಲ್ಲಭಭಾಯಿ ಪಟೇಲ್‌ ವೃತ್ತದ ರಸ್ತೆ ಮತ್ತು ಅರ್ಧ ದೇವರಬಾವಿ ರಸ್ತೆಯಲ್ಲಿ ಕೂಡ ಕಾಮಗಾರಿ ನಿರ್ವಹಿಸಲಾಗುವುದು. ಸಂಬಂಧಿಸಿದವರು ಕಾಮಗಾರಿ ಗುಣಮಟ್ಟದೊಂದಿಗೆ ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ತಾಕೀತು ಮಾಡಿದರು.

ನಗರಸಭೆ ಅಧ್ಯಕ್ಷೆ ಜಹೀರಾಬಿ ಹುಸ್ಮಾನ್‌, ಸದಸ್ಯ ವೆಂಕಟೇಶ ಹೊಸ್ಮನಿ, ಮನೋಹರ ಕುಂಟೋಜಿ, ವೆಂಕಟರಡ್ಡಿ ಬೋಯಿ, ಪಿಡಬ್ಲ್ಯೂಡಿ ಎಇಇ ಜಾವೀದ್‌, ಎಇ ಸುಭಾಶ್ಚಂದ್ರ, ಮುಖಂಡರಾದ ರಾಜಾ ವೇಣುಗೋಪಾಲ ನಾಯಕ, ರಾಜಾ ಮುಕುಂದ ನಾಯಕ, ಮಂಜುನಾಥ ಗುಳಗಿ, ವಿರೇಶ ದೇಶಮುಖ, ಮಾಳಪ್ಪ ಕಿರದಳ್ಳಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next