Advertisement
ನಂಜನಗೂಡು ಉಪಚುನಾವಣೆಯಲ್ಲಿ 44 ಸಾವಿರ ಮತ ಪಡೆಯಲು 44 ಕೋಟಿ ರೂ.ಖರ್ಚು ಮಾಡಿದ್ದಾರೆ. ಅಲ್ಲದೆ, ಉಪ ಚುನಾವಣೆ ಗೆಲ್ಲಲು ಅವರ ಮನೆಯ ಕೆಲಸಗಾರ ಮಹದೇವಪ್ಪ ಸಹಾಯ ಮಾಡಿದ್ದು, ಅವರಿಬ್ಬರೂ ಸೇರಿ ಜೆಡಿಎಸ್ ಸಹಾಯದಿಂದ ನನ್ನನ್ನು ಮುಗಿಸಿದರು. ಸಿದ್ದರಾಮಯ್ಯ ಅವರು ಇದೀಗ ಚಾಮುಂಡೇಶ್ವರಿಗೆ ಬರುವುದಾಗಿ ನಾಟಕವಾಡುತ್ತಿದ್ದು, ಅವರನ್ನು ಸೋಲಿಸುವುದೇ ನನ್ನ ಗುರಿ. ಇದೇ ವಿಚಾರವನ್ನು ಶಾಸಕ ಜಿ.ಟಿ.ದೇವೆಗೌಡ, ಮಾಜಿ ಸಚಿವ ಎಚ್.ವಿಶ್ವನಾಥ್ ಅವರೊಂದಿಗೆ ಚರ್ಚಿಸಿದ್ದೇನೆ’ ಎಂದರು. “ಸಿದ್ದರಾಮಯ್ಯ ಒಬ್ಬ ಅನ್ಗೆಟ್ಫುಲ್ ಸಿಎಂ ಆಗಿದ್ದು, ಚಾಮುಂಡೇಶ್ವರಿ ಒಂದು ಕಣ್ಣು, ವರುಣಾ ಮತ್ತೂಂದು ಕಣ್ಣು ಎನ್ನುತ್ತಿದ್ದಾರೆ.ಅವರು ಮೂರನೇ ಕಣ್ಣನ್ನು ಎಲ್ಲಿ ಬಿಡುತ್ತಾರೆ ಗೊತ್ತಿಲ್ಲ’ ಎಂದು ಲೇವಡಿ ಮಾಡಿದರು.