ಹೊಸದಿಲ್ಲಿ: ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್ ಅವರ ಪ್ರಮಾಣ ವಚನ ಸಮಾರಂಭಕ್ಕೆ ಪಾಕಿಸ್ಥಾನಕ್ಕೆ ತೆರಳಿ ಅಲ್ಲಿನ ಸೇನಾ ಮುಖ್ಯಸ್ಥರನ್ನು ಆಲಂಗಿಸಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್ ನಾಯಕ,ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಮತ್ತೆ ಪಾಕಿಸ್ಥಾನಕ್ಕೆ ತೆರಳುವುದಾಗಿ ಹೇಳಿಕೊಂಡಿದ್ದಾರೆ.
ಕರ್ತಾಪುರ್ ಬಾರ್ಡರ್ ಕಾರಿಡಾರ್ ಶಿಲಾನ್ಯಾಸ ಕಾರ್ಯಕ್ರಮಕ್ಕೆ ನನ್ನ ಮಿತ್ರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಆಹ್ವಾನ ನೀಡಿದ್ದು, ತೆರಳುತ್ತಿರುವುದಾಗಿ ಸಿಧು ಹೇಳಿದ್ದಾರೆ.
ಬಾಬಾ ನಾನಕ್ ಅವರು ಎರಡು ದೇಶಗಳು ಹತ್ತಿರಕ್ಕೆ ಬರುವಂತೆ ಸಹಕರಿಸುತ್ತಿದ್ದಾರೆ. ಕೋಟ್ಯಂತರ ಜನರ ಪ್ರಾರ್ಥನೆಗಳು ಇಂದು ಫಲಿಸುತ್ತಿವೆ. ನನ್ನ ಮಿತ್ರ (ಇಮ್ರಾನ್ ಖಾನ್) ಕರೆದಿದ್ದು, ನಾನು ಖಂಡಿತವಾಗಿಯೂ ತೆರಳುತ್ತಿದ್ದೆನೆ ಎಂದರು.
ಎರಡು ದೇಶಗಳ ಸಂಬಂಧ ಸುಧಾರಿಸಲು ಇದು ನೆರವಾಗಬಹುದು ಎಂದು ಸಿಧು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ನವೆಂಬರ್ 28 ರಂದು ಇಮ್ರಾನ್ ಖಾನ್ ಅವರು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.
ಪಾಕ್‌ನ ಕರ್ತಾಪುರ್‌ನಲ್ಲಿರುವ ಗುರುದ್ವಾರ ದರ್ಬಾರ್ ಸಾಹೀಬ್‌ಗ ತೆರಳಲು ಯಾತ್ರಿಗಳಿಗೆ ಅನುಕೂಲವಾಗು ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪಂಜಾಬ್‌ನ ಗುರುದಾಸ್‌ಪುರ್‌ನಿಂದ ಅಂತರಾಷ್ಟ್ರೀಯ ಗಡಿ ರೇಖೆಯ ವರೆಗೆ ಕಾರಿಡಾರ್ ಅಭಿವೃದ್ಧಿ ಪಡಿಸುತ್ತಿದೆ.