Advertisement

ಮೊದಲ ಸಂಬಳದಲ್ಲಿ ಅಮ್ಮನಿಗೆ ಸೀರೆ…

02:34 PM Jan 23, 2018 | |

ನಾನೇನು ತುಂಬಾ ಜಾಣನಲ್ಲ. ವåಹಾದಡ್ಡನೂ ಅಲ್ಲ. ಆದರೆ, ಆ ದೇವರು ನನ್ನಂಥವನಿಗೂ ಸರ್ಕಾರಿ ಕೆಲಸವನ್ನು ಮೀಸಲಿಟ್ಟಿರುತ್ತಾನೆ ಎಂದು ಊರಿನಲ್ಲಿ ಯಾರೋ ಯಾಕೆ, ನಾನೇ ಕನಸು ಕಂಡವನಲ್ಲ. ಆದರೆ, ಆ ದಿನವೂ ಬಂದುಬಿಟ್ಟಿತು. ತಾಲೂಕು ಆಫೀಸಿನಲ್ಲಿ ನನಗೆ ಶಾನುಭೋಗನ ಕೆಲಸ ದೊರಕಿತು. 

Advertisement

ಮೊದಮೊದಲು ಹೊಸ ಕೆಲಸದ ಹುರುಪಿನಲ್ಲಿದ್ದುದರಿಂದ ಹಳ್ಳಿ ಜನರ ಕೆಲಸವನ್ನು ಫ‌ಟಾಫ‌ಟ್‌ ಬಹಳ ಬೇಗ ಮುಗಿಸಿಬಿಡುತ್ತಿದ್ದೆ. ಕಷ್ಟಪಟ್ಟು ಸುರಿಸಿದ ಬೆವರಿಗೆ ಪ್ರತಿಫಲ ಸಿಗುತ್ತೆ ಅನ್ನೋದು ನನ್ನ ನಂಬಿಕೆ. ತಿಂಗಳ ಸಂಬಳ ಪಡೆಯುವ ದಿನ ಬಂದೇಬಿಟ್ಟಿತು. ಅಂದು ನನಗೆ ಸಿಕ್ಕ ಮೊದಲ ಸಂಬಳ 8,500 ರೂ. ಆ ಹಣವನ್ನು ಹೆಚ್ಚು ಕಡಿಮೆ 100 ರಿಂದ 150 ಬಾರಿ ಎಣಿಸಿರಬಹುದೇನೋ. 

ಆ ದುಡ್ಡಿನಲ್ಲಿ ನಾನು ಕೊಂಡುಕೊಂಡ ಮೊದಲ ವಸ್ತು ಸೀರೆ. ಅದು ಅಮ್ಮನಿಗಾಗಿ. ಇದರಿಂದ ನನಗೆ ಸಿಕ್ಕ ಸಂತಸ, ಹೆಮ್ಮೆ ಅಪಾರ. ಅಮ್ಮನ ಸಂತಸವೂ ಹೇಳತೀರದು. ಮಗ ತಂದುಕೊಟ್ಟ ಸೀರೆಯೆಂದು ಹೇಳಿಕೊಂಡು ಓಡಾಡಿದ್ದೇ ಓಡಾಡಿದ್ದು!

ಲೋಕೇಶ ಡಿ. ಶಿಕಾರಿಪುರ

Advertisement

Udayavani is now on Telegram. Click here to join our channel and stay updated with the latest news.

Next