Advertisement
ಕೋರ್ಟ್ನಿ ವಾಲ್ಶ್ 80-90ರ ದಶಕದಲ್ಲಿ ವೆಸ್ಟ್ ಇಂಡೀಸಿನ ಪೇಸ್ ಬೌಲಿಂಗ್ ಗ್ರೇಟ್ ಎನಿಸಿದ್ದರು. ಆದರೆ ಭಾರತ ಪ್ರವಾಸದಲ್ಲಿರುವ ಹೇಡನ್ ವಾಲ್ಶ್ ಲೆಗ್‌ಸ್ಪಿನ್ನರ್ ಆಗಿದ್ದಾರೆ. ವಯಸ್ಸು 27 ವರ್ಷ.“ಎಲ್ಲರೂ ನಾನು ಕೋರ್ಟ್ನಿ ವಾಲ್ಶ್ ಅವರ ಮಗನೆಂದೇ ತಿಳಿದಿದ್ದಾರೆ. ನಾನು ಕೆನಡಾ ಟಿ20 ಲೀಗ್‌ನಲ್ಲಿ ಆಡುತ್ತಿದ್ದಾಗ ಕೆಲವರು ನನ್ನನ್ನು ಜೂನಿ ಯರ್ ಕೋರ್ಟ್ನಿ ವಾಲ್ಶ್ ಎಂದೇ ಕರೆಯುತ್ತಿದ್ದರು. ಆಗ, ನಾನವನಲ್ಲ ಎಂದು ಸ್ಪಷ್ಟಪಡಿಸಬೇಕಾಯಿತು. ಈಗಲೂ ಜನರಲ್ಲಿ ಈ ಗೊಂದಲ ಉಳಿದುಕೊಂಡಿದೆ. ಹೀಗಾಗಿ ನಾನು ಯಾರು ಎಂಬುದನ್ನು ಇನ್ನೂ ಸ್ಪಷ್ಟಪಡಿ ಸಬೇಕಾದ ಅಗತ್ಯವಿದೆ…’ ಎಂದು ತಿರುವನಂತಪುರ ಟಿ20 ಪಂದ್ಯದಲ್ಲಿ 2 ವಿಕೆಟ್ ಉರುಳಿಸಿದ ವಾಲ್ಶ್ ಹೇಳಿದರು.
“ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ಕಾಯ್ದುಕೊಂಡು ಬಂದ ಕಾರಣ ನಾನು ರಾಷ್ಟ್ರೀಯ ಆಯ್ಕೆಗಾರರ ಕಣ್ಣಿಗೆ ಬಿದ್ದೆ. ಹೀಗಾಗಿ ವೆಸ್ಟ್ ಇಂಡೀಸ್ ತಂಡವನ್ನು ಸೇರಿಕೊಂಡೆ. ಭಾರತದ ಎದುರಿನ ಟಿ20 ಸರಣಿಯನ್ನು ಗೆಲ್ಲುವುದೇ ನನ್ನ ಹಾಗೂ ತಂಡದ ಪ್ರಮುಖ ಗುರಿ’ ಎಂಬುದಾಗಿ ವಾಲ್ಶ್ ಹೇಳಿದರು.