Advertisement

ನಾನು‌ ಒರಿಜಿನಲ್ ಜನಸಂಘದವನು, ಹಾಫ್ ಚಡ್ಡಿ ಹಾಕುತ್ತಿದ್ದೆ: ರಮೇಶ‌ ಜಾರಕಿಹೊಳಿ

03:41 PM Jan 10, 2021 | Team Udayavani |

ಬೆಳಗಾವಿ: ನಾನು ಓರಿಜನಲ್ ಜನಸಂಘದವನು. ನಮ್ಮ‌ತಂದೆ ಗೋವಾ ವಿಮೋಚನಾ ಚಳವಳಿ ವೇಳೆ ಮೂರು ತಿಂಗಳು ಜೈಲಿನಲ್ಲಿ‌ ಇದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂದ ರಮೇಶ್ ಜಾರಕಿಹೊಳಿ ಹೇಳಿದರು.

Advertisement

ಇಲ್ಲಿನ ನಾವಗೆಯ ಗಣೇಶ ಬಾಗ್‌ನಲ್ಲಿ ಧನಂಜಯ ಮಿತ್ರ ಪರಿವಾರ ವತಿಯಿಂದ ರವಿವಾರ ನಡೆದ ಹಿಂದೂ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ನಾವು ಮೊದಲು ಜನಸಂಘದಲ್ಲಿ ದೀಪದ ಚಿತ್ರ ಇದ್ದ ಕರಿ ಟೋಪಿ ಹಾಕುತ್ತಿದ್ದೆವು. ಸಂಘಟನೆಗಾಗಿ ನಮ್ಮ ತಂದೆ ಮೂರು ತಿಂಗಳು ಜೈಲಿನಲ್ಲಿದ್ದರು. ನಾವು ಉದಯ ಆಗಿದ್ದು ಜನಸಂಘದಿಂದ, ಹಾಫ್ ಚಡ್ಡಿ ಹಾಕುತ್ತಿದ್ದೆವು. ಅನಿವಾರ್ಯವಾಗಿ ಕಾಂಗ್ರೆಸ್ ಗೆ ಹೋಗಬೇಕಾಯಿತು. ಜನಸಂಘದಿಂದ ಬಂದಂತಹ ಕುಟುಂಬ ಜಾರಕಿಹೊಳಿ‌ ಕುಟುಂಬ‌ ಎಂದರು.

ನಮ್ಮ ತಂದೆಯವರು ಜಗನ್ನಾಥ ಜೋಶಿಯವರ ಅನುಯಾಯಿ. ಗೋವಾ ವಿಮೋಚನೆಗಾಗಿ ಹೋರಾಟ ಮಾಡಿ ಜೈಲಿನಲ್ಲಿದ್ದರು. ಒಮ್ಮೆ ಸುರೇಶ್ ಅಂಗಡಿಯವರಿಗೆ ಜನಸಂಘದ ಚಿಹ್ನೆ ಬಗ್ಗೆ ಕೇಳಿದ್ದೆ. ಜನಸಂಘದ ಚಿತ್ರ ಸುರೇಶ ಅಂಗಡಿಯವರಿಗೆ ಗೊತ್ತಿರಲಿಲ್ಲ ಎಂದರು.

ಇದನ್ನೂ ಓದಿ:‘ದಾರಿ ತಪ್ಪಿದ್ದ’: ಭಾರತೀಯ ಸೇನೆಯಿಂದ ಬಂಧಿಸಲ್ಪಟ್ಟ ಸೈನಿಕನ ಬಿಡುಗಡೆಗೆ ಚೀನಾ ಮನವಿ

Advertisement

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಹಳ ಆಕಾಂಕ್ಷಿಗಳಿದ್ದಾರೆ. ಯಾರಿಗೆ ಟಿಕೆಟ್ ಸಿಕ್ಕರೂ ಬಿಜೆಪಿ ಪರವಾಗಿಯೇ ಕೆಲಸ ಮಾಡಬೇಕು. ಅವರೆಲ್ಲರೂ ದ್ರೋಹ ಮಾಡುವುದಿಲ್ಲ ಎಂದು ಮಹಾರಾಷ್ಟ್ರದ ಜ್ಯೋತಿಬಾ ದೇವರ ಪಾದ ಮುಟ್ಟಿ ಆಣೆ ಮಾಡಬೇಕು ಎಂದರು.

ಜನವರಿ 17ರಂದು ಬೆಳಗಾವಿಯಲ್ಲಿ ಅಮಿತ್ ಶಾ ಕಾರ್ಯಕ್ರಮ ಇದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಒಂದು ಲಕ್ಷ ಜನ ಬರಬೇಕು. ನಿಮಗೇನು ಸಹಾಯ ಬೇಕು, ಎಲ್ಲಾ ವ್ಯವಸ್ಥೆ ಮಾಡುತ್ತೇನೆ. ಮೂರರಿಂದ ನಾಲ್ಕು ಲಕ್ಷ ಜನ ಸೇರಿಸುವ ಸಂಕಲ್ಪ ಮಾಡಿದ್ದೇವೆ. 2023ರಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಧ್ವಜ ಹಾರಿಸುತ್ತೇನೆ ಎಂಬ ಸಂಕಲ್ಪ ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next