Advertisement

ಕರ್ನಾಟಕದ ಪ್ರತಿಯೊಬ್ಬನ ಕನಸೇ ನನ್ನ ಕನಸು: ಪ್ರಧಾನಿ ಮೋದಿ

11:26 PM May 09, 2023 | Team Udayavani |

ಹೊಸದಿಲ್ಲಿ: ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರಕಾರವೇ ಅಧಿಕಾರಕ್ಕೆ ಬರಬೇಕು ಎಂದು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ, “ರಾಜ್ಯದ ಪ್ರತಿಯೊಬ್ಬ ಪ್ರಜೆಯ ಕನಸೇ ನನ್ನ ಕನಸು’ ಎಂದು ಹೇಳಿದ್ದಾರೆ. ಪ್ರತೀ ಬಾರಿ ಕರ್ನಾಟಕಕ್ಕೆ ಪ್ರಚಾರಕ್ಕೆ ತೆರಳಿದ್ದಾಗ ಜನರು ವ್ಯಕ್ತಪಡಿ ಸಿದ ಪ್ರೀತಿ ಮತ್ತು ವಿಶ್ವಾಸಕ್ಕೆ ಯಾವತ್ತೂ ಋಣಿ ಯಾಗಿ ಇರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ವೀಡಿಯೋ ಸಂದೇಶವನ್ನು ಮತ್ತು ರಾಜ್ಯದ ಮತದಾರರಿಗೆ ಬಹಿರಂಗ ಪತ್ರವನ್ನೂ ಬರೆದಿದ್ದಾರೆ.

Advertisement

ಮೇ 10ರಂದು ರಾಜ್ಯ ವಿಧಾನಸಭೆಗೆ ಮತದಾನ ನಡೆಯಲಿರುವಂತೆಯೇ ಪ್ರಧಾನಿ ಮೋದಿಯವರ ವೀಡಿಯೋ ಸಂದೇಶ ಮತ್ತು ಬಹಿರಂಗ ಪತ್ರ ಮಹತ್ವ ಪಡೆದಿದೆ.

“ಕರ್ನಾಟಕದ ಪ್ರತಿಯೊಬ್ಬ ಪ್ರಜೆ ಹೊಂದಿರುವ ಕನಸು ನನ್ನದೂ ಆಗಿದೆ. ನಿಮ್ಮ ಸಮಸ್ಯೆಯ ಪರಿಹಾರವೇ ನನಗೆ ಪರಿಹಾರ. ನಾವು ಒಂದು ಗುರಿ ತಲುಪಬೇಕು ಎಂದು ನಿರ್ಧರಿಸಿ ಮುನ್ನಡೆ ದೆವು ಎಂದಾದರೆ, ಜಗತ್ತಿನ ಯಾವುದೇ ಶಕ್ತಿ ಅದನ್ನು ತಡೆಯಲು ಸಾಧ್ಯವೇ ಇಲ್ಲ’ ಎಂದು ಬರೆದು ಕೊಂಡಿದ್ದಾರೆ. ಕರ್ನಾಟಕವನ್ನು ದೇಶದಲ್ಲಿಯೇ ನಂ.1 ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ರಾಜ್ಯದ ಸಹೋ ದರ ಸಹೋದರಿಯರು ಆಶೀರ್ವಾದ ಮಾಡ ಬೇಕು. ರಾಜ್ಯದ ಉತ್ತಮ ಭವಿಷ್ಯಕ್ಕಾಗಿ, ಜನರ ಕುಟುಂಬ ಉತ್ತಮ ದಿನಗಳಿಗಾಗಿ ವಿಶೇಷವಾಗಿ ಮುಂದಿನ ತಲೆಮಾರಿಗಾಗಿ ಹಾರೈಕೆ ಅಗತ್ಯ ಎಂದು ಬರೆದುಕೊಂಡಿದ್ದಾರೆ.

ಕರ್ನಾಟಕದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಸರಕಾರವೇ ಅಧಿಕಾರಕ್ಕೆ ಬರಬೇಕು ಎಂದು ಪ್ರತಿಪಾದಿಸಿರುವ ಪ್ರಧಾನಿ ಮೋದಿ, ಪಕ್ಷದ ಸರಕಾರ ರಾಜ್ಯದ ಮುಂದಿನ ತಲೆಮಾರಿಗೆ ಅಗತ್ಯ ಇರುವ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲಿದೆ ಎಂದರು.

ಸ್ವಾತಂತ್ರ್ಯ ಲಭಿಸಿ 75ನೇ ವರ್ಷಾಚರಣೆಯ ಅವಧಿ ಯಲ್ಲಿ ನಾವೆಲ್ಲರೂ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಸಂಕಲ್ಪ ವನ್ನು ಹೊಂದಿದ್ದೇವೆ. ಅದರ ನೇತೃತ್ವವನ್ನು ಕರ್ನಾಟಕವೇ ವಹಿಸಿಕೊಳ್ಳಬೇಕು ಎಂದು ಪ್ರಧಾನಿ ಬರೆದು ಕೊಂಡಿದ್ದಾರೆ. ಕೊರೊನಾ ಅವಧಿಯಲ್ಲಿ ಮತ್ತು ಬಿಜೆಪಿ ಸರಕಾರದ ಅವಧಿಯಲ್ಲಿ ಕರ್ನಾಟಕಕ್ಕೆ 90 ಸಾವಿರ ಕೋಟಿ ರೂ. ವಿದೇಶಿ ಬಂಡವಾಳ ಹೂಡಿಕೆ ಬಂದಿತ್ತು. ಅದಕ್ಕಿಂತ ಹಿಂದಿನ ಸರಕಾರದ ಅವಧಿಯಲ್ಲಿ 30 ಸಾವಿರ ಕೋಟಿ ರೂ. ಹೂಡಿಕೆ ಬಂದಿತ್ತು ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next