Advertisement

ಕಿರಿಯರಿಗೆ ಮ್ಯೂಚುವಲ್‌ ಫ‌ಂಡ್‌ ಸಲಹೆಗಳು

07:52 PM Nov 17, 2019 | Sriram |

ಕಿರಿಯರು ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಹೂಡಿಕೆ ಮಾಡುವುದರ ಲಾಭ ಹಲವಿವೆ. ವಯಸ್ಸು ಚಿಕ್ಕದಾಗಿರುವುದರಿಂದ ಮ್ಯೂಚುವಲ್‌ ಫ‌ಂಡ್‌ನ‌ ಪೂರ್ಣ ಲಾಭವನ್ನು ಪಡೆದು, ಆಗತ್ಯವನ್ನು ಪೂರೈಸಿಕೊಳ್ಳಬಹುದು.

Advertisement

1. ಮಾರುಕಟ್ಟೆಯಲ್ಲಿ ಹೊಸದಾಗಿ ಬಂದಿರುವ ಮ್ಯೂಚುವಲ್‌ ಫ‌ಂಡ್‌ಗಳಲ್ಲಿ ಹಣ ಹೂಡುವುದಕ್ಕಿಂತ, ಕೆಲ ವರ್ಷಗಳಷ್ಟು ಹಳತಾಗಿರುವ ಮ್ಯೂಚುವಲ್‌ ಫ‌ಂಡ್‌ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ. ಹಳೆಯ ಯೋಜನೆಯಾದರೆ ಅದರ ಪೂರ್ವಾಪರ ವಿಚಾರಗಳು ತಿಳಿದುಬರುವುದರಿಂದ ಹೂಡಿಕೆದಾರರಿಗೆ ಸರಿಯಾದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ.
2. ಗುರಿ ಹಾಕಿಕೊಳ್ಳಿ- ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಹೂಡಿಕೆ ಮಾಡುವಾಗ ಉದ್ದೇಶ ಬಹಳ ಮುಖ್ಯ. ಮದುವೆ, ಮಕ್ಕಳ ವಿದ್ಯಾಭ್ಯಾಸ, ನಿವೃತ್ತಿ ಯೋಜನೆ ಹೀಗೆ ಇತ್ಯಾದಿ…
3. ಸಮಯ ಕೊಡಿ- ಯಾವುದೇ ಸಂಸ್ಥೆಯ ಷೇರುಗಳಾದರೂ ತುಂಬಾ ದೀರ್ಘ‌ ಕಾಲ ಇಟ್ಟರೆ ಮಾತ್ರ ಹೆಚ್ಚಿನ ಲಾಭ ಪಡೆಯಲು ಸಾಧ್ಯ. ಎಲ್ಲಾ ವಿಭಾಗಗಳಲ್ಲಿಯೂ ಅದರದ್ದೇ ಆದ ರಿಸ್ಕಾಗಳಿರುತ್ತವೆ. ಹಾಗಾಗಿ ನಿಗದಿತ ಸಮಯದವರೆಗೆ ಪ್ರೀಮಿಯಂ ಕಟ್ಟಿದರೆ ಮಾತ್ರ ಮ್ಯೂಚುವಲ್‌ ಫ‌ಂಡ್‌ನ‌ ಸಂಪೂರ್ಣ ಲಾಭವನ್ನು ಪಡೆಯಬಹುದು. ಕನಿಷ್ಠ 5- 7 ವರ್ಷಗಳಷ್ಟಾದರೂ ಅವಧಿಯದ್ದಾಗಿದ್ದರೆ ಒಳ್ಳೆಯದು.
4. ಹೂಡಿಕೆದಾರರು ಪ್ರೀಮಿಯಂ ಪಾವತಿಸಲು ಎರಡು ವಿಧಾನಗಳನ್ನು ಅನುಸರಿಸಬಹುದಾಗಿದೆ. ಒಮ್ಮಿಂದೊಮ್ಮೆಲೇ ಒಟ್ಟಾಗಿ ದೊಡ್ಡ ಮೊತ್ತವನ್ನು ಕಟ್ಟಿಬಿಡುವುದು. ಎರಡನೆಯದು ವಾರ, ತಿಂಗಳು ಇಲ್ಲವೇ ಆರು ತಿಂಗಳಿಗೊಮ್ಮೆ ಕಟ್ಟುವುದು. ಪರಿಣತರ ಅಭಿಪ್ರಾಯದ ಪ್ರಕಾರ ಎರಡನೆಯ ವಿಧಾನವೇ ಅತ್ಯುತ್ತಮವಾದುದು.
5. ಮ್ಯೂಚುವಲ್‌ ಫ‌ಂಡ್‌ಗಳಲ್ಲಿ ಹೂಡುವ ಹಣವನ್ನು ಆಯಾ ಸಂಸ್ಥೆಗಳು ಹಲವು ಕ್ಷೇತ್ರಗಳಲ್ಲಿ ಹೂಡುತ್ತವೆ. ಹೂಡಿಕೆದಾರ ತನ್ನ ಹಣ ಎಲ್ಲೆಲ್ಲಿ ಹೂಡಿಕೆಯಾಗುವುದೆಂಬ ಮಾಹಿತಿಯನ್ನು ತಿಳಿದಿರಬೇಕು.
6. ಹೂಡುತ್ತಿರುವ ಮ್ಯೂಚುವಲ್‌ ಫ‌ಂಡ್‌ ಬೇರೆ ಬೇರೆ ಅವಧಿಗಳಲ್ಲಿ ಎಷ್ಟು ರಿಟರ್ನ್ಸ್ ತಂದುಕೊಡುತ್ತದೆ ಎನ್ನುವುದರ ಮಾಹಿತಿಯನ್ನು ಹೂಡಿಕೆದಾರ ತಿಳಿದುಕೊಳ್ಳಬೇಕು. ಇದರಿಂದ ಆಯಾ ಮ್ಯೂಚುವಲ್‌ ಫ‌ಂಡ್‌ಅನ್ನು ಇತರೆ ಮ್ಯೂಚುವಲ್‌ ಫ‌ಂಡ್‌ಗಳ ಜತೆ ಹೋಲಿಕೆ ಮಾಡಿಕೊಳ್ಳಲು ಸಹಾಯವಾಗುತ್ತದೆ.
7. ಹೂಡಿಕೆ ಮಾಡುತ್ತಿರುವ ಮ್ಯೂಚುವಲ್‌ ಫ‌ಂಡ್‌ ತೆರಿಗೆ ಮುಕ್ತವೋ ಇಲ್ಲವೇ ತೆರಿಗೆ ಕಟ್ಟಬೇಕಾಗಿ ಬರುವುದೋ ಎಂಬ ಮಾಹಿತಿಯನ್ನು ಹೂಡಿಕೆದಾರ ಮುಂಚಿತವಾಗಿ ತಿಳಿದಿರಬೇಕು. ಅದರಿಂದ ರಿಟರ್ನ್ಸ್ ಮೇಲೆ ಏನಾದರೂ ಪ್ರಭಾವ ಉಂಟಾಗುತ್ತದೆಯೋ ಎಂಬುದನ್ನೂ ತಿಳಿದಿರಬೇಕು.

– ಹವನ

Advertisement

Udayavani is now on Telegram. Click here to join our channel and stay updated with the latest news.

Next