Advertisement

“ಆರೋಗ್ಯಯುತ ಮೂತ್ರಪಿಂಡಗಳಿಗಾಗಿ  ಆರೋಗ್ಯಕರ ಜೀವನ’ಅಭಿಯಾನ

01:18 PM Mar 09, 2017 | |

ಮಂಗಳೂರು: ಮೂತ್ರಪಿಂಡ ಸಂಬಂಧಿತ ರೋಗ ಮತ್ತು ಆರೋಗ್ಯಕ್ಕೆ ಮೂತ್ರ ಪಿಂಡಗಳ ಪ್ರಾಮುಖ್ಯತೆ ಕುರಿತು ಜಾಗೃತಿ ಮೂಡಿ
ಸುವ ನಿಟ್ಟಿನಲ್ಲಿ ಕೆಎಂಸಿ ಆಸ್ಪತ್ರೆ ಅಭಿಯಾನ ಪ್ರಾರಂಭಿಸಿದೆ ಎಂದು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಆನಂದ್‌ ವೇಣುಗೋಪಾಲ್‌ ಹೇಳಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷದ ಜಾಗತಿಕ ತಿರುಳಾದ “ಮೂತ್ರಪಿಂಡ ರೋಗ ಮತ್ತು ಬೊಜ್ಜು ಮೈ’ ವಿಷಯಕ್ಕೆ ತಕ್ಕಂತೆ ಹಾಗೂ “ಆರೋಗ್ಯಯುತ ಮೂತ್ರಪಿಂಡಗಳಿಗಾಗಿ ಆರೋಗ್ಯಕರ ಜೀವನ’ ಧ್ಯೇಯ ಅನುಸರಿಸುವುದಕ್ಕೆ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು. 

ಅಭಿಯಾನದ ಅಂಗವಾಗಿ ಕೆಎಂಸಿ ಮೂತ್ರ ಪಿಂಡ ರೋಗಿಗಳ ಲಾಭಕ್ಕಾಗಿ ಹಲವು ಪ್ಯಾಕೇಜ್‌ ಆರಂಭಿಸಿದೆ. ಈ ಸಂದರ್ಭ ಆಸ್ಪತ್ರೆ ನಿಗದಿತ ಡಯಾಲಿಸಿಸ್‌ ರೋಗಿಗೆ 600 ರೂ. ದರದಲ್ಲಿ ಒಂದು ಡಯಾಲಿಸಿಸ್‌ ಮತ್ತು ಸಾಧಾರಣ ಪ್ರಯೋಗಾಲಯ ಪರೀಕ್ಷೆಗಳನ್ನು ಉಚಿತವಾಗಿ 40 ಡಯಾಲಿಸಿಸ್‌ ರೋಗಿಗಳಿಗೆ ನಡೆಸಿ ಕೊಡುತ್ತಿದೆ ಎಂದರು.

ಮೂತ್ರಪಿಂಡರೋಗ ಸಲಹಾ ತಜ್ಞ ಡಾ| ಸುಶಾಂತ್‌ಕುಮಾರ್‌ ಮಾತನಾಡಿ, ಬೊಜ್ಜು ಮೈ ಮೂತ್ರಪಿಂಡ ರೋಗ ಹೆಚ್ಚಾಗಲು ಪ್ರಮುಖ ಕಾರಣ ಎಂದರು. ಮೂತ್ರಪಿಂಡ ಸಲಹಾ ತಜ್ಞ ಡಾ| ಅಶೋಕ್‌ ಭಟ್‌ ಮಾತನಾಡಿ, ದೀರ್ಘ‌ಕಾಲದ ಮೂತ್ರ ಪಿಂಡ ರೋಗದ ಅಪಾಯದ ಅಂಶ ಹೊಂದಿ ರುವ ರೋಗಿಗಳು ಸೂಕ್ತ ತಪಾಸಣೆಗಳಿಗೆ ಒಳಗಾಗಬೇಕು ಎಂದರು.  ಮೂತ್ರರೋಗ ಸಲಹಾ ತಜ್ಞ ಡಾ| ಜಿ.ಜಿ. ಲಕ್ಷ್ಮಣ್‌ ಪ್ರಭು, ಅಂಬೇಡ್ಕರ್‌ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ 2004ರಲ್ಲಿ ಮೊದಲ ಮೂತ್ರ ಪಿಂಡ ಕಸಿ ನಡೆದಾಗಿನಿಂದ ಬದಲಿ ಮೂತ್ರಪಿಂಡ ಜೋಡಣೆ ಸೇವೆ ಉತ್ತಮವಾಗಿ ನಡೆಯುತ್ತಿವೆ.  ಮೂತ್ರ ಪಿಂಡ ತೆಗೆದು ಕಸಿ ಮಾಡಲು ಆಸ್ಪತ್ರೆ ಅಧಿಕೃತ ಮಾನ್ಯತೆ ಪಡೆದಿದೆ ಎಂದರು. ಆಸ್ಪತ್ರೆ ಪ್ರಥಮ ಮೂತ್ರಪಿಂಡ ಕಸಿ ರೋಗಿ ದಾಮೋದರ್‌ ಆಚಾರ್ಯ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next