Advertisement
120 ಸೆಂ.ಮೀ. ಎತ್ತರವಿರುವ ಸಿನಿ ಮೋಳ್ ಅವರು ತಮ್ಮ ಎಲ್ಲ ಸಂಕಷ್ಟಗಳು, ಅಡೆ-ತಡೆಗಳನ್ನು ಮೀರಿ, ಜು.28ರಿಂದ ಆ.5ರವರೆಗೆ ನಡೆಯ ಲಿರುವ “ವಿಶ್ವ ಕುಬ್ಜರ ಕ್ರೀಡಾಕೂಟ 2023’ರ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿ ದ್ದಾರೆ. ಅವರು ಈಜು ವಿಭಾಗಗಳಾದ ಬ್ರೆಸ್ಟ್ರೋಕ್, ಫ್ರೀಸ್ಟೈಲ್ ಹಾಗೂ ಶಾಟ್‌ಪುಟ್, ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ ಮತ್ತು ಬೋಶಿಯಾ ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
Related Articles
Advertisement
ಈ ಕುರಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುತ್ತೂಟ್ ಫೈನಾನ್ಸ್ ಉಪ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಎಂ. ಜಾರ್ಜ್ “ಸಮಾಜಕ್ಕೆ ಕೊಡುಗೆ ನೀಡಬೇಕೆಂಬ ಮುತ್ತೂಟ್ ಫೈನಾನ್ಸ್ ಧ್ಯೇಯದೊಂದಿಗೆ, ಜಾಗತಿಕವಾಗಿ ಭಾರತವನ್ನು ಪ್ರತಿನಿಧಿಸುತ್ತಿರುವ ಸಿನಿ ಮೋಳ್ ಅವರಿಗೆ ಪ್ರೋತ್ಸಾಹ ನೀಡು ತ್ತಿರುವುದು ಹೆಮ್ಮೆಯ ವಿಷಯ,’ ಎಂದು ಹೇಳಿದ್ದಾರೆ.
ದೇಶದಲ್ಲಿ ಮುತ್ತೂಟ್ ಫೈನಾನ್ಸ್ 500ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿವೆ. ಅಲ್ಲದೇ ಅಮೆರಿಕ, ಬ್ರಿಟನ್, ಯುಎಇ, ಕೋಸ್ಟರಿಕಾ, ನೇಪಾಲ ಮತ್ತು ಶ್ರೀಲಂಕಾ ದಲ್ಲೂ ಶಾಖೆಗಳನ್ನು ಹೊಂದಿದೆ.