Advertisement
1. ಮಾವಿನಹಣ್ಣುಬೇಕಾಗುವ ಸಾಮಗ್ರಿ: ಹುಳಿಸಿಹಿ ಮಾವಿನಹಣ್ಣು- 4, ಕಾಯಿತುರಿ- ಅರ್ಧ ಕಪ್, ಹಸಿಮೆಣಸು, ಸಾಸಿವೆ, ಸಿಹಿಮೊಸರು-1 ಕಪ್, ಉಪ್ಪು. ಒಗ್ಗರಣೆಗೆ-ಎಣ್ಣೆ, ಸಾಸಿವೆ, ಉದ್ದಿನಬೇಳೆ, ಒಣಮೆಣಸು, ಕರಿಬೇವು.
ಬೇಕಾಗುವ ಸಾಮಗ್ರಿ: ಹೆಚ್ಚಿದ ಟೊಮೇಟೊ ಮತ್ತು ಈರುಳ್ಳಿ ತಲಾ- 2 ಕಪ್, ಮೊಸರು-2 ಕಪ್, ಕಾಯಿತುರಿ-ಅರ್ಧ ಕಪ್, ಹಸಿಮೆಣಸು-2, ಕೊತ್ತಂಬರಿ ಸೊಪ್ಪು, ಉಪ್ಪು- ರುಚಿಗೆ ತಕ್ಕಷ್ಟು, ಸಾಸಿವೆ. ಒಗ್ಗರಣೆಗೆ: ಎಣ್ಣೆ, ಸಾಸಿವೆ, ಉದ್ದಿನಬೇಳೆ, ಒಣಮೆಣಸು, ಕರಿಬೇವು.
Related Articles
Advertisement
3. ಹಾಗಲಕಾಯಿಬೇಕಾಗುವ ಸಾಮಗ್ರಿ: ಮಧ್ಯಮ ಗಾತ್ರದ ಹಾಗಲಕಾಯಿ- 1, ಹಸಿಮೆಣಸು-2, ಕಾಯಿತುರಿ- ಅರ್ಧ ಕಪ್, ಮೊಸರು-2 ಕಪ್, ಉಪ್ಪು- ರುಚಿಗೆ, ಎಣ್ಣೆ-2 ಚಮಚ, ಉದ್ದಿನಬೇಳೆ, ಸಾಸಿವೆ, ಕರಿಬೇವು. ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಹಾಕಿ, ಉದ್ದಿನಬೇಳೆ, ಸಾಸಿವೆ, ಹಸಿಮೆಣಸು ಹಾಕಿ ಹುರಿಯಿರಿ. ನಂತರ ಅದಕ್ಕೆ ಹೆಚ್ಚಿದ ಹಾಗಲಕಾಯಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಆರಲು ಬಿಡಿ. ಕಾಯಿತುರಿಗೆ ಉಪ್ಪು ಸೇರಿಸಿ, ರುಬ್ಬಿ. ಅದನ್ನು ಹುರಿದಿಟ್ಟ ಮಿಶ್ರಣಕ್ಕೆ ಸೇರಿಸಿ. ನಂತರ ಮೊಸರು ಬೆರೆಸಿ. 4. ಬಾಳೆಕಾಯಿ
ಬೇಕಾಗುವ ಸಾಮಗ್ರಿ:ಬೇಯಿಸಿದ ಬಾಳೆಕಾಯಿ- 2, ಮೊಸರು-2 ಕಪ್, ಹಸಿಮೆಣಸು-1, ಕಾಯಿತುರಿ-ಅರ್ಧ ಕಪ್, ಒಗ್ಗರಣೆಗೆ: ಎಣ್ಣೆ, ಉದ್ದಿನಬೇಳೆ, ಸಾಸಿವೆ ಒಣಮೆಣಸು, ಕರಿಬೇವು. ಮಾಡುವ ವಿಧಾನ: ಬಾಳೆಕಾಯಿಯನ್ನು ಬೇಯಿಸಿ, ಸಿಪ್ಪೆ ಸುಲಿದು ಚಿಕ್ಕದಾಗಿ ಹೆಚ್ಚಿ ಅಥವಾ ಕೈಯಿಂದ ನುರಿದುಕೊಳ್ಳಿ. ಕಾಯಿತುರಿ, ಹಸಿಮೆಣಸು, ಸ್ವಲ್ಪ ನೀರು ಹಾಕಿ ರುಬ್ಬಿ. ಆ ಮಸಾಲೆಯನ್ನು ಬೇಯಿಸಿದ ಬಾಳೆಕಾಯಿ, ಉಪ್ಪು, ಮೊಸರು ಸೇರಿಸಿ ಒಗ್ಗರಣೆ ಕೊಡಿ. 5. ಸೌತೆಕಾಯಿ
ಬೇಕಾಗುವ ಸಾಮಗ್ರಿ: ಹೆಚ್ಚಿದ/ ತುರಿದ ಎಳೆ ಸೌತೆಕಾಯಿ- 2 ಕಪ್, ಹೆಚ್ಚಿದ ಹಸಿಮೆಣಸಿನ ಕಾಯಿ-2, ಕಾಯಿತುರಿ- ಅರ್ಧ ಕಪ್, ಸಿಹಿ ಮೊಸರು -2 ಕಪ್, ಕೊತ್ತಂಬರಿ ಸೊಪ್ಪು, ಸಾಸಿವೆ, ಉಪ್ಪು- ರುಚಿಗೆ. ಒಗ್ಗರಣೆಗೆ- ಎಣ್ಣೆ, ಸಾಸಿವೆ, ಉದ್ದಿನಬೇಳೆ, ಒಣಮೆಣಸು, ಕರಿಬೇವು. ಮಾಡುವ ವಿಧಾನ: ಕಾಯಿತುರಿಯನ್ನು ಸಾಸಿವೆ ಮತ್ತು ಸ್ವಲ್ಪ ನೀರಿನೊಂದಿಗೆ ರುಬ್ಬಿ, ಹೆಚ್ಚಿಟ್ಟ ಸೌತೆಕಾಯಿ, ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪಿನ ಮಿಶ್ರಣಕ್ಕೆ ಸೇರಿಸಿ. ಅದಕ್ಕೆ ಮೊಸರು ಮತ್ತು ಉಪ್ಪು ಸೇರಿಸಿ, ನಂತರ ಒಗ್ಗರಣೆ ಕೊಡಿ. -ಗೀತಾ ಎಸ್ ಭಟ್