Advertisement

ಮುಷ್ತಾಕ್‌ ಅಲಿ: ಫ್ರಾಂಚೈಸಿಗಳನ್ನು ಸೆಳೆಯುವ ಸೆಮಿಫೈನಲ್‌

01:06 AM Jan 29, 2021 | Team Udayavani |

ಅಹ್ಮದಾಬಾದ್: ಪ್ರಸಕ್ತ ಋತುವಿನ ಮೊದಲ ದೇಶಿ ಕ್ರಿಕೆಟ್‌ ಪಂದ್ಯಾವಳಿ “ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟ್ರೋಫಿ’ ಸೆಮಿಫೈನಲ್‌ನತ್ತ ಮುಖ ಮಾಡಿದೆ. ಶುಕ್ರವಾರ ಎರಡೂ ಉಪಾಂತ್ಯ ಪಂದ್ಯಗಳು ಇಲ್ಲಿನ “ಸರ್ದಾರ್‌ ಪಟೇಲ್‌ ಸ್ಟೇಡಿಯಂ’ನಲ್ಲಿ ನಡೆಯಲಿದ್ದು, ಫೆ. 18ರ ಐಪಿಎಲ್‌ ಹರಾಜಿಗೆ ಫ್ರಾಂಚೈಸಿಗಳನ್ನು ಆಕರ್ಷಿಸಲು ಆಟಗಾರರಿಗೆ ಇದೊಂದು ಉತ್ತಮ ಅವಕಾಶವಾಗಿದೆ.

Advertisement

ಫ್ರಾಂಚೈಸಿಗಳ ಕೆಲವು ಮಾಲಕರು ಈ ಪಂದ್ಯಗಳ ವೇಳೆ ಉಪಸ್ಥಿತರಿರುವರು ಎನ್ನಲಾಗಿದೆ. ಜತೆಗೆ ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್‌ ಶರ್ಮ ಕೂಡ ಪಂದ್ಯಗಳನ್ನು ವೀಕ್ಷಿಸುವ ಕಾರ್ಯಕ್ರಮವಿತ್ತು. ಆದರೆ ಅಚ್ಚರಿಯೆಂಬಂತೆ ಅವರು ಚೆನ್ನೈಗೆ ಆಗಮಿಸಿ ಜೈವಿಕ ಸುರಕ್ಷಾ ವಲಯವನ್ನು ಪ್ರವೇಶಿಸಿದ್ದಾರೆ.

ಇದನ್ನೂ ಓದಿ:ಗಂಗೂಲಿಗೆ ಆ್ಯಂಜಿಯೊಪ್ಲಾಸ್ಟಿ, ಮತ್ತೆರಡು ಸ್ಟೆಂಟ್‌ ಅಳವಡಿಕೆ

ಟಿ20 ಸ್ಪೆಷಲಿಸ್ಟ್‌ ಆಟಗಾರರು
ಅಪರಾಹ್ನದ ಪಂದ್ಯದಲ್ಲಿ ತಮಿಳು ನಾಡು-ರಾಜಸ್ಥಾನ ಎದುರಾದರೆ, ರಾತ್ರಿ ಪಂಜಾಬ್‌-ಬರೋಡ ಮುಖಾಮುಖೀ ಯಾಗಲಿವೆ. ವಿಜೇತ ತಂಡಗಳು ರವಿವಾರದ ಪ್ರಶಸ್ತಿ ಸಮರದಲ್ಲಿ ಸೆಣಸಾಡಲಿವೆ.

ನಾಲ್ಕೂ ತಂಡಗಳು ಟಿ20 ಸ್ಪೆಷಲಿಸ್ಟ್‌ ಆಟಗಾರರನ್ನು ಹೊಂದಿದ್ದು, ಕುತೂಹ ಲಕಾರಿ ಹೋರಾಟ ಕಂಡುಬರು
ವುದರಲ್ಲಿ ಅನುಮಾನವಿಲ್ಲ. ಇವುಗಳಲ್ಲಿ, ಅಜೇಯ ಪಂಜಾಬ್‌ ಮತ್ತು ಆತಿಥೇಯ ಬರೋಡ ತಂಡಗಳ ನಡುವೆ ಜಿದ್ದಾಜಿದ್ದಿ ಸ್ಪರ್ಧೆ ಏರ್ಪಡಬಹುದೆಂಬುದು ಎಲ್ಲರ ನಿರೀಕ್ಷೆ.

Advertisement

ಹರ್ಯಾಣ ಎದುರಿನ ಕ್ವಾರ್ಟರ್‌ ಫೈನಲ್‌ನಲ್ಲಿ ಮಿಂಚಿದ ವಿಷ್ಣು ಸೋಲಂಕಿ ಬರೋಡದ ಆಕರ್ಷಣೆಯಾಗಿದ್ದಾರೆ. ಕೊನೆಯ ಎಸೆತವನ್ನು ಹೆಲಿಕಾಪ್ಟರ್‌ ಶಾಟ್‌ ಮೂಲಕ ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ಅವರು ಗೆಲುವಿನನ ರೂವಾರಿಯಾಗಿ ಹೊರಹೊಮ್ಮಿದ್ದರು. ಪಂಜಾಬ್‌ ಪೇಸ್‌ ವಿಭಾಗ ಅತ್ಯಂತ ಬಲಿಷ್ಠವಾಗಿದೆ. ಸಿದ್ಧಾರ್ಥ್ ಕೌಲ್‌, ಸಂದೀಪ್‌ ಶರ್ಮ, ಆರ್ಷದೀಪ್‌ ಅವರನ್ನು ಎದುರಿಸಿ ನಿಲ್ಲುವುದು ಸುಲಭವಲ್ಲ ಎಂಬುದೊಂದು ಲೆಕ್ಕಾಚಾರ. ಲೆಗ್‌ಸ್ಪಿನ್ನರ್‌ ಮಾಯಾಂಕ್‌ ಮಾರ್ಕಂಡೆ ಕೂಡ ಉತ್ತಮ ಲಯದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next