Advertisement

ಮೊದಲೆರಡು ಐಪಿಎಲ್‌ ಪಂದ್ಯಗಳಿಗೆ ಮುಸ್ತಫಿಜುರ್‌ ಅನುಮಾನ

11:56 PM Apr 03, 2021 | Team Udayavani |

ಹೊಸದಿಲ್ಲಿ: ರಾಜಸ್ಥಾನ್‌ ರಾಯಲ್ಸ್‌ ತಂಡದ ಬಾಂಗ್ಲಾದೇಶದ ಪೇಸ್‌ ಬೌಲರ್‌ ಮುಸ್ತಫಿಜುರ್‌ ರಹಮಾನ್‌ ಮೊದಲೆರಡು ಐಪಿಎಲ್‌ ಪಂದ್ಯಗಳಲ್ಲಿ ಆಡುವ ಸಾಧ್ಯತೆ ಇಲ್ಲ ಎಂದು ಫ್ರಾಂಚೈಸಿ ಮೂಲಗಳು ತಿಳಿಸಿವೆ.

Advertisement

ಸದ್ಯ ಮುಸ್ತಫಿಜುರ್‌ ನ್ಯೂಜಿಲ್ಯಾಂಡ್‌ ಪ್ರವಾಸ ಮುಗಿಸಿದ್ದು, ಇನ್ನೂ ತಂಡದ ಜತೆಯೇ ಇದ್ದಾರೆ. ರವಿವಾರ ಭಾರತಕ್ಕೆ ಹೊರಡಲಿದ್ದಾರೆ ಎಂದು ಬಿಸಿಬಿಯ ಸೀನಿಯರ್‌ ಮ್ಯಾನೇಜರ್‌ ರಬೀದ್‌ ಇಮಾಮ್‌ ಹೇಳಿದ್ದಾರೆ.

ಭಾರತಕ್ಕೆ ಬಂದ ಬಳಿಕ ಕ್ವಾರಂಟೈನ್‌ನಲ್ಲಿ ಉಳಿಯಬೇಕಾದ ಕಾರಣ ಪಂಜಾಬ್‌ (ಎ. 12) ಮತ್ತು ಡೆಲ್ಲಿ (ಎ. 15) ಎದುರಿನ ಪಂದ್ಯಗಳಲ್ಲಿ ಮುಸ್ತಫಿಜುರ್‌ ಆಡುವುದು ಅನುಮಾನ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next