Advertisement

ಮೀಸೆಯೇ ಸುಖಕ್ಕೆ ಮೂಲ!

07:50 PM Dec 27, 2019 | Lakshmi GovindaRaj |

ನಾನು ಈ ವ್ಯಕ್ತಿಯನ್ನು ನೋಡಿದ್ದು, ಅಲಹಾಬಾದ್‌ನ ಕುಂಭಮೇಳದಲ್ಲಿ. ಅಬ್ಟಾ! ಮೀಸೆಯೇ… ಕುಂಭಮೇಳ ಎಂದರೆ, ಮೊದಲೇ ಜನಪ್ರವಾಹ. ಮೊದಲ ನೋಟಕ್ಕೇ ಈತ ಸೆಳೆದುಬಿಟ್ಟ. ಈ ಮೀಸೆ, 60 ವರ್ಷದ ಆರೈಕೆಯ ಫ‌ಲವಂತೆ. ನಿತ್ಯವೂ ಎಣ್ಣೆ ಹಚ್ಚಿ, ಮೀಸೆಯನ್ನು ಸುಂದರಗೊಳಿಸುವ ಶ್ರದ್ಧೆಯಲ್ಲಿಯೇ ಈತನ ಬದುಕು ಕಳೆದಿದೆ ಅಂದುಕೊಂಡೆ. ಸುಮಾರು 2 ಅಡಿ ಉದ್ದದ ಮೀಸೆ ಅದು. ಬಂದವರೆಲ್ಲ, ಆ ಮೀಸೆಯನ್ನು ಮುಟ್ಟಿ ಮುಟ್ಟಿ ನೋಡುತ್ತಿದ್ದರು. ಮೋಟುದ್ದ ಜಡೆಯ ಹುಡುಗಿಯರು, ತಮ್ಮ ಜಡೆಗೆ ಅಳತೆ ಹಿಡಿದು, ಹುಸಿನಗು ಬೀರುತ್ತಿದ್ದರು. ಉತ್ತರ ಪ್ರದೇಶದ ದೂರದ ಹಳ್ಳಿಯಿಂದ ಬಂದ ಈತ, ಕುಂಭಮೇಳದ ನೂರಾರು ಆಕರ್ಷಣೆಗಳಲ್ಲಿ ಒಂದಾಗಿದ್ದ.

Advertisement

* ಸುಧೀಂದ್ರ ಕೆ.ಪಿ.

Advertisement

Udayavani is now on Telegram. Click here to join our channel and stay updated with the latest news.

Next