Advertisement

ಅಧಿಕಾರದಲ್ಲಿದ್ದಾಗ ಜನಪರವಾಗಿರಬೇಕು

05:18 PM Aug 20, 2019 | Team Udayavani |

ಕೋಲಾರ: ಯಾವುದೇ ಅಧಿಕಾರ ಸ್ಥಾನದಲ್ಲಿ ದ್ದಾಗ ಅದನ್ನು ಜನರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ನಾನು ಸ್ಪೀಕರ್‌ ಸ್ಥಾನದಲ್ಲಿ ಈಗ ಇಲ್ಲವಾದರೂ ಗೌರವ ನೀಡು ವಂತಿರಬೇಕಷ್ಟೇ ಎಂದು ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಹೇಳಿದರು.

Advertisement

ಕೋಲಾರದ ಎಸ್ಸೆನ್ನಾರ್‌ ಜಿಲ್ಲಾಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಹಿತ ಬಂದಾಗ ತಾವೆಲ್ಲರೂ ಒಂದಾಗಬೇಕು. ರಾಜಕೀಯಕ್ಕೆ ಸಂಬಂಧಿ ಸಿದಂತೆ ಯಾವುದೇ ಪ್ರತಿಕ್ರಿಯೆ ನಾವು ನೀಡು ವುದಿಲ್ಲ. ಬಿಜೆಪಿ ಸಂಸದರು, ಜೆಡಿಎಸ್‌ ಶಾಸಕರು, ನಾನೂ, ನಜೀರ್‌ಅಹಮದ್‌ ಕಾಂಗ್ರೆಸ್‌ ಪಕ್ಷದವರು. ಇಲ್ಲಿ ಸಭೆ ನಡೆಸುತ್ತಿ ದ್ದೇವೆ. ಆದರೆ, ಯಾವುದೇ ರಾಜಕೀಯ ಬೆರೆಸುತ್ತಿಲ್ಲ ಎಂದು ಹೇಳಿದರು.

ಕರ್ನಾಟಕದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ದೃಷ್ಟಹೀನರೂ ಯಾರೂ ಇಲ್ಲ. ಉತ್ತರ ಕರ್ನಾಟಕದಲ್ಲಿ ನೀರಿನ ಪ್ರವಾಹ ಆದರೆ, ಇಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಬದುಕೇ ನಾಶದ ಅಂಚಿನಲ್ಲಿದೆ. ಇಂತಹ ಸಮ ಯದಲ್ಲಿ ನಾನು ರಾಜಕೀಯ ಮಾಡಿಕೊಂ ಡಿರಲು ಸಾಧ್ಯವಿಲ್ಲ. ನಮ್ಮನ್ನು ಕೆಣಕಬೇಡಿ ಎಂದು ಮಾಧ್ಯಮದವರಿಗೆ ಮನವಿ ಮಾಡಿದರು.

ಜೈಲಿಗೆ ಹಾಕ್ತೀವಿ: ಕೆ.ಸಿ. ವ್ಯಾಲಿ ನೀರು ಒಳ ಹರಿವು ಕಡಿಮೆಯಾಗಿಲ್ಲ. ಆದರೆ, ಕೆಲವು ಸ್ವಾರ್ಥಿಗಳು ಮೋಟರ್‌ಗಳನ್ನಿಟ್ಟು ನೀರನ್ನು ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈಗಲೂ ಬದಲಾಗದಿದ್ದರೆ ಜೈಲಿನಲ್ಲಿ ಇಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಎತ್ತಿನಹೊಳೆ ಭೂಸಾಧೀನಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿ ಅಂಕಿತವೂ ಆಗಿದೆ. ಶತಾಯಗತಾಯ 2020ಕ್ಕೆ ನೀರು ತರಲು ತೀವ್ರ ಪ್ರಯತ್ನ ನಡೆಸುತ್ತಿದ್ದೇವೆ ಎಂದರು. ರೈಲ್ವೇ ಕೋಚ್ ಫ್ಯಾಕ್ಟರಿ ಕೈಬಿಟ್ಟಿಲ್ಲ. ಇಲ್ಲಸಲ್ಲದ ಊಹಾಪೋಹಗಳಿಗೆ ಕಿವಿಗೊಡಬೇಡಿ. ಕೇಂದ್ರ ಸರಕಾರವು ಯಾವುದೇ ಯೋಜನೆ ಜಾರಿ ಮಾಡುವ ಮುನ್ನ ಎಲ್ಲ ಪ್ರಕ್ರಿಯೆಗಳನ್ನು ನಡೆಸಿದ ಬಳಿಕವೇ ಶಂಕುಸ್ಥಾಪನೆ ಮಾಡಲಾಗುತ್ತದೆ. ಭೂಸಾಧೀನ ವಿಚಾರವಾಗಿ ತಡವಾಗಿದೆ ಹೊರತು ಬೇರೆ ಏನೂ ಇಲ್ಲ ಎಂದರು.

Advertisement

ಸ್ವಲ್ಪ ಹೆಚ್ಚಿಗೆ ಹಣ ಬರುತ್ತದೆ ಎನ್ನುವ ಆಸೆಯಿಂದಾಗಿ ಕೆಲವರು ಇಲ್ಲಸಲ್ಲದ ಅರ್ಜಿಗಳನ್ನು ನೀಡಿದ್ದಾರೆ. ಸ್ವಲ್ಪ ಹೆಚ್ಚಾ ಕಡಿಮೆಯಾದರೂ ಯೋಜನೆ ಜಾರಿ ಆಗೇ ಆಗುತ್ತದೆ ಎಂದರು. ಸಂಸದ ಎಸ್‌.ಮುನಿಸ್ವಾಮಿ ಮಾತನಾಡಿ, ಯೋಜನೆ ಜಾರಿ ಆಗುವುದಿಲ್ಲ ಎಂದು ನಾನು ಹೇಳಿಲ್ಲ. ಕೋಚ್ ಕಾರ್ಖಾನೆ ಬದಲಿಗೆ ವರ್ಕ್‌ಶಾಪ್‌ ಮಾಡುವ ಕುರಿತು ಹೇಳಿದ್ದೇನಷ್ಟೇ ಎಂದರು. ಶಾಸಕ ಕೆ.ಶ್ರೀನಿವಾಸಗೌಡ, ಎಂಎಲ್ಸಿ ನಜೀರ್‌ ಅಹಮದ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next