Advertisement

ಕಡ್ಡಾಯವಾಗಿ ಕಾಲುಬಾಯಿ ಲಸಿಕೆ ಹಾಕಿಸಿ

07:28 AM Feb 06, 2019 | Team Udayavani |

ಜಾವಗಲ್‌: ಜಾನುವಾರುಗಳಿಗೆ ಮುಂಜಾ ಗ್ರತಾ ಕ್ರಮವಾಗಿ ಕಾಲುಬಾಯಿ ರೋಗದ ಲಸಿಕೆ ಹಾಕಿಸಿ ಎಂದು ಜಾವಗಲ್‌ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ಎಸ್‌.ಎಸ್‌. ವಿಜಯ ಕುಮಾರ್‌ ತಿಳಿಸಿದರು.

Advertisement

ಜಾವಗಲ್‌ ಪಟ್ಟಣದ ಕೋಟೆ ಬೀದಿ, ಜಂಡಮ್ಮನ ವಠಾರ, ಗೋವಿಂದೇ ಗೌಡರ ವಠಾರ, ಲಕ್ಷ್ಮೀಪುರ ಬಡಾವಣೆ, ಗಾಂಧಿ ನಗರದ ಅರಳಿಕಟ್ಟೆ ವೃತ್ತ ಹಾಗೂ ಪಶು ಆಸ್ಪತ್ರೆಯ ಆವರಣದಲ್ಲಿ ಇಲಾಖೆಯಿಂದ ಏರ್ಪಡಿಸಿದ್ದ 15ನೇ ಸುತ್ತಿನ ಕಾಲುಬಾಯಿ ಜ್ವರದ ವಿರುದ್ಧ ಉಚಿತ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ವರ್ಷಕ್ಕೆ ಎರಡು ಬಾರಿ ಲಸಿಕೆ: ಪಶುಪಾಲನಾ ಇಲಾಖೆಯಿಂದ ವರ್ಷದಲ್ಲಿ 2ಬಾರಿ ಜಾನು ವಾರುಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗು ತ್ತಿದೆ ಎಂದು ತಿಳಿಸಿದರು. ಕೃಷಿ ಚಟುವಟಿಕೆ ಗಳಲ್ಲಿ ಸಂಪೂರ್ಣವಾಗಿ ರೈತರಿಗೆ ಜಾನುವಾರು ಗಳು ಹೆಚ್ಚು ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತವೆ. ಆದ್ದರಿಂದ ಪ್ರತಿಯೊಬ್ಬ ರೈತರು ತಮ್ಮ ಜಾನುವಾರುಗಳ ಆರೋಗ್ಯ ಸುಧಾ ರಣೆಗೆ ಹೆಚ್ಚು ಗಮನ ಹರಿಸಬೇಕೆಂದರು.

ಹೋಬಳಿಯ ಕರಗುಂದ ಮತ್ತು ಅರಕೆರೆ ಗ್ರಾಮ ಪಂಚಾಯಿತಿಗಳನ್ನು ಹೊರತುಪಡಿಸಿ ಜಾವಗಲ್‌ ಪಶು ಆಸ್ಪತ್ರೆ ವ್ಯಾಪ್ತಿಗೆ ಸೇರಿದ ಬಂದೂರು, ಜಾವಗಲ್‌, ಉಂಡಿಗನಾಳು, ನೇರ್ಲಿಗೆ, ಕಲ್ಯಾಡಿ, ಹಂದ್ರಾಳು, ಕೋಳಗುಂದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ 5 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಿಗೆ ಸಂಬಂಧಪಟ್ಟ 48 ಗ್ರಾಮಗಳಲ್ಲಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ರೋಗದ ಲಕ್ಷಣಗಳು: ಜಾನುವಾರುಗಳಲ್ಲಿ ಮುಖ್ಯವಾಗಿ ತೀವ್ರ ಜ್ವರ ಕಾಣಿಸಿಕೊಳ್ಳುವುದು, ಬಾಯಲ್ಲಿ ಹುಣ್ಣಾಗುವುದು, ಬಾಯಲ್ಲಿ ನೀರುಗುಳ್ಳೆ, ಜೆೊಲ್ಲು ಸುರಿಸುವುದು, ಕಾಲು ಕುಂಟುವುದು, ಗರ್ಭಧ‌ರಿಸಿದ ರಾಸುಗಳಲ್ಲಿ ಗರ್ಭಪಾತ, ರಾಸುಗಳು ಮೇವು ಹಾಗೂ ನೀರನ್ನು ಬಿಡುವುದು, ಕೆಚ್ಚಲಿನ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುವುದು, ಕಾಲುಬಾಯಿ ಜ್ವರದ ಲಕ್ಷಣಗಳಾಗಿರುತ್ತವೆ ಎಂದರು.

Advertisement

ಜಾನುವಾರುಗಳ ಬಗ್ಗೆ ನಿಗಾ ವಹಿಸಿ: ರೈತರು ತಮ್ಮ ಜಾನುವಾರುಗಳ ಮೇಲೆ ಪ್ರತಿನಿತ್ಯ ಹೆಚ್ಚಿನ ಗಮನ ನೀಡಬೇಕು. ಅವುಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಕೂಡಲೇ ಸಮೀಪದ ಪಶು ಚಿಕಿತ್ಸಾಕೇಂದ್ರಕ್ಕೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸ ಬೇಕೆಂದು ಸಲಹೆ ನೀಡಿದರು.

ಸಾಮೂಹಿಕ ಲಸಿಕಾ ಕಾರ್ಯಕ್ರಮ: ಕಾಲು ಬಾಯಿ ರೋಗ ನಿಯಂತ್ರಣಕ್ಕೆ ಲಸಿಕೆ ಹಾಕುವು ದೊಂದೆ ಮಾರ್ಗವಾಗಿದ್ದು ಪ್ರತಿ 6 ತಿಂಗಳಿ ಗೊಮ್ಮೆ ಕೈಗೊಳ್ಳುವ ಸಾಮೂಹಿಕ ಲಸಿಕಾ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಎಲ್ಲಾ ಜಾನು ವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ರಾಜ್ಯ ವನ್ನು ಸಂಪೂರ್ಣವಾಗಿ ಕಾಲುಬಾಯಿ ರೋಗ ಮುಕ್ತ ರಾಜ್ಯವನ್ನಾಗಿ ಮಾಡುವ ಪ್ರಯತ್ನದಲ್ಲಿ ಇಲಾಖೆಯೊಂದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.

ಪಶುಪಾಲನಾ ಇಲಾಖೆಯ ಜಾನುವಾರು ಅಧಿಕಾರಿ ಬಿ.ಎನ್‌. ನಾಗರಾಜು, ಹಿರಿಯ ಪಶುವೈದ‌್ಯಕೀಯ ಪರೀಕ್ಷಕರಾದ ಎಚ್.ಬಿ. ನಾಗರಾಜು ಗಣೇಶ, ಚಂದ್ರು, ವಿಜಯ ನಾಯಕ, ಚಂದ್ರನಾಯಕ, ಬಿ.ಶಿವಕುಮಾರ್‌, ಪಶುವೈದ‌್ಯಕೀಯ ಸಹಾಯಕರುಗಳಾದ ಶಿವಕುಮಾರ್‌, ಅತೀಕ್‌ ಅಹಮದ್‌, ಗೌರಮ್ಮ, ವಿನಯಕುಮಾರ್‌, ಸಿಬ್ಬಂದಿ ಬಾಲಕೃಷ್ಣ ಒಳಗೊಂಡಂತೆ 5 ತಂಡ‌ಗಳನ್ನು ರಚಿಸಿ ಪ್ರತಿ ಗ್ರಾಮದ ಜಾನುವಾರು ಹೊಂದಿರುವ ಮನೆ ಮನೆಗೆ ತೆರಳಿ ಲಸಿಕೆ ಹಾಕುವ ಕಾರ್ಯವನ್ನು ಫೆ. 16ರ ವರೆಗೆ ಹಮ್ಮಿಕೊಂಡಿದ್ದು ಸಾರ್ವಜನಿಕರು ಕಾರ್ಯ ಕ್ರಮವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next