ಹೈದರಾಬಾದ್ : ಇಬ್ಬರು ಮಕ್ಕಳ ನಡುವಿನ ಅಂತರವನ್ನು ಕಾಯ್ದುಕೊಳ್ಳಲು ಮುಸ್ಲಿಂ ಸಮುದಾಯದವರು ಕುಟುಂಬ ಯೋಜನಾ ಸಾಧನ ಕಾಂಡೋಮ್ ಅನ್ನು ಹೆಚ್ಚು ಬಳಸುತ್ತಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಆರ್‌ಎಸ್‌ಎಸ್ ಸರಸಂಘ ಚಾಲಕ್ ಮೋಹನ್ ಭಾಗವತ್ ಅವರ ಇತ್ತೀಚಿನ ಜನಸಂಖ್ಯೆಯ ಅಸಮತೋಲನದ ಹೇಳಿಕೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ : ಈ ಎರಡು ಸೀಟ್ ನನ್ನದು.. ಜನ ತುಂಬಿದ ಬಸ್ ನಲ್ಲಿ ಹಾಯಾಗಿ ಮಲಗಿದ ನಾಯಿ; ವಿಡಿಯೋ ವೈರಲ್
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಓವೈಸಿ, ಭಾಗವತ್ ಅವರು ಇದನ್ನು ಉಲ್ಲೇಖಿಸುವುದಿಲ್ಲ ಮತ್ತು ಜನಸಂಖ್ಯೆಯ ಬೆಳವಣಿಗೆಯನ್ನು ಚರ್ಚಿಸುವ ಮೊದಲು ಅವರು ಅಂಕಿ ಅಂಶಗಳನ್ನು ಇಡಬೇಕು ಎಂದು ಹೇಳಿದರು.
”ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿಲ್ಲ. ಆ ಬಗ್ಗೆ ಯಾವುದೇ ಚಿಂತೆ ಬೇಡ. ನಮ್ಮ ಜನಸಂಖ್ಯೆಯು ಕ್ಷೀಣಿಸುತ್ತಿದೆ.ಮುಸ್ಲಿಮರ ಮಕ್ಕಳ TFR (ಒಟ್ಟು ಫಲವತ್ತತೆ ದರ) ಕ್ಷೀಣಿಸುತ್ತಿದೆ. ಇಬ್ಬರು ಮಕ್ಕಳ ನಡುವೆ ಹೆಚ್ಚು ಅಂತರ ಕಾಯ್ದುಕೊಳ್ಳುವವರು ಯಾರು ಗೊತ್ತೇ? ಮುಸ್ಲಿಮರು ನಿರ್ವಹಿಸುತ್ತಿದ್ದಾರೆ. ಕಾಂಡೋಮ್‌ಗಳನ್ನು ಯಾರು ಹೆಚ್ಚು ಬಳಸುತ್ತಿದ್ದಾರೆ? ನಾವು ಬಳಸುತ್ತಿದ್ದೇವೆ ಎಂದು ನಿಮಗೆ ತಿಳಿಸುತ್ತಿದ್ದೇವೆ. ಮೋಹನ್ ಭಾಗವತ್ ಈ ಬಗ್ಗೆ ಮಾತನಾಡುವುದಿಲ್ಲ ಎಂದಿದ್ದಾರೆ.
ನಾಗ್ಪುರದ ರೇಶಿಂಬಾಗ್ ಮೈದಾನದಲ್ಲಿ ಆರ್‌ಎಸ್‌ಎಸ್ ದಸರಾ ರ‍್ಯಾಲಿಯಲ್ಲಿ ಅಕ್ಟೋಬರ್ 5 ರಂದು ಭಾಗವತ್ ಭಾರತವು ಸಮಗ್ರ ಚಿಂತನೆಯ ನಂತರ ಸಿದ್ಧಪಡಿಸಿದ ಜನಸಂಖ್ಯಾ ನೀತಿಯನ್ನು ಹೊಂದಬೇಕು.ಇದು ಎಲ್ಲಾ ಸಮುದಾಯಗಳಿಗೆ ಸಮಾನವಾಗಿ ಅನ್ವಯಿಸಬೇಕು ಎಂದು ಹೇಳಿದ್ದರು. ಸಮುದಾಯ ಆಧಾರಿತ ಜನಸಂಖ್ಯೆಯ ಅಸಮತೋಲನವು ಒಂದು ಪ್ರಮುಖ ವಿಷಯವಾಗಿದೆ ಮತ್ತು ಅದನ್ನು ನಿರ್ಲಕ್ಷಿಸಬಾರದು. ಜನಸಂಖ್ಯೆಯ ಅಸಮತೋಲನವು ಭೌಗೋಳಿಕ ಗಡಿಗಳಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂದಿದ್ದರು.