Advertisement
ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಾದವೇ ಅರ್ಥವಾಗುತ್ತಿಲ್ಲ. ಅವರಿಗೆ ಗೊಂದಲ, ದೊಂಬಿ, ಗಲಭೆ, ಹಿಂಸೆ ಮಾಡುವುದು, ಅಲ್ಪಸಂಖ್ಯಾತರ ದಾರಿ ತಪ್ಪಿಸುವುದನ್ನು ಹೊರತುಪಡಿಸಿದರೆ ಬೇರೆ ಉದ್ದೇಶವೇ ಇದ್ದಂತಿಲ್ಲ ಎಂದು ವಾಗ್ಧಾಳಿ ನಡೆಸಿದರು.
Related Articles
Advertisement
ಎನ್‌ಆರ್‌ಸಿ ಆದಾಗಲೂ ದಾಖಲೆ ಇಲ್ಲದಿದ್ದರೂ ದೇಶದಲ್ಲಿ ಜನಸಿದ್ದಕ್ಕೆ ಪ್ರಮಾಣ ಪತ್ರ ನೀಡಿದರೂ ಬೇರೆ ಯಾವುದೇ ರೀತಿಯಲ್ಲೂ ಪೌರತ್ವ ಸಾಬೀತುಪಡಿಸುವ ಅಗತ್ಯವಿಲ್ಲ. ಎನ್‌ಆರ್‌ಸಿ ಜಾರಿ ನಂತರವೂ ಪಾಸ್‌ಪೋರ್ಟ್ ಕಾಯ್ದೆ, ಸಿಎಎ ಕಾಯ್ದೆ ಆಧಾರದ ಮೇಲೆ ತನಿಖೆ ನಡೆಯಲಿದೆ. ಯಾರನ್ನೂ ಏಕಾಏಕಿ ಹೊರಗೆ ಕಳುಹಿಸಲು ಸಾಧ್ಯವಿಲ್ಲ. ಈ ನಾಗರಿಕತ್ವಕ್ಕೂ, ಎನ್‌ಆರ್‌ಸಿಗೂ ಸಂಬಂಧವಿಲ್ಲ. ಆದರೆ ಕಾಂಗ್ರೆಸ್ ಜನರನ್ನು ತಪ್ಪು ದಾರಿಗೆ ಎಳೆಯುವ ಷಡ್ಯಂತ್ರ ನಡೆಸುತ್ತಿದೆ ಎಂದು ಹೇಳಿದರು.
ಜನರ ಸ್ವಭಾವದಲ್ಲಿ ಜಾತ್ಯಾತೀತತೆ ಇದೆದೇಶ ಜಾತ್ಯಾತೀತವಾಗಿರುವುದು ಕಾಂಗ್ರೆಸ್‌ನಿಂದ, ನೆಹರು, ಇಂದಿರಾಗಾಂಧಿಯವರು ಆಡಳಿತ ನಡೆಸಿದ ಕಾರಣಕ್ಕೆ ಜಾತ್ಯಾತೀತವಾಗಿದೆ ಎಂಬ ಭಾವನೆ ಬೇಡ. ದೇಶದಲ್ಲಿ ರಾಷ್ಟ್ರೀಯತೆ ಹೊಂದಿರುವ ಬಹುಸಂಖ್ಯಾತ ಹಿಂದೂ ಸಮುದಾಯದವರ ಸ್ವಭಾವ, ರಕ್ತದಲ್ಲಿ ಜಾತ್ಯಾತೀತತೆ ಇದೆ. ಹಾಗಾಗಿ ತಪ್ಪು ತಿಳಿವಳಿಕೆ ದೂರ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಪ್ರಧಾನಿ ಮೋದಿಯವರ ಸರ್ಕಾರದಲ್ಲಿ ಅಲ್ಪಸಂಖ್ಯಾತರಿಗೆ ಎಲ್ಲ ರೀತಿಯ ರಕ್ಷಣೆ ಸಿಗಲಿದೆ. ಈ ಮುಠಾuಳ- ಮನೆಹಾಳ ಕಾಂಗ್ರೆಸ್, ಎಸ್.ಪಿ, ಟಿ.ಎಂ.ಸಿಯವರ ಸಂಚಿನಲ್ಲಿ ಬೀಳಬಾರದು. ಮೋದಿಯವರ ಸರ್ಕಾರದಲ್ಲಿ ಅಲ್ಪಸಂಖ್ಯಾತರು ಈ ಹಿಂದೆ ಐದು ವರ್ಷ ಸುರಕ್ಷಿತವಾಗಿದ್ದರು. ಈಗಿನ ಐದು ವರ್ಷದಲ್ಲೂ ಸುರಕ್ಷಿತವಾಗಿರಲಿದ್ದು, ಆ ನಂತರದ ಐದು ವರ್ಷಕ್ಕೂ ಪ್ರಧಾನಿ ಮೋದಿಯವರೇ ಇರಲಿದ್ದು, ಹೆಚ್ಚು ಸುರಕ್ಷಿತವಾಗಿರಲಿದ್ದಾರೆ ಎಂದು ಭರವಸೆ ನೀಡಿದರು. ಪಾಕಿಸ್ತಾನ, ಆಫ್ಘಾನಿಸ್ಥಾನ, ಬಾಂಗ್ಲಾ ದೇಶದಿಂದ ಮುಸ್ಲಿಮರು ಶರಣಾಗಿ ಸಹಜ ಪ್ರಕ್ರಿಯೆಯಡಿ ಅರ್ಜಿ ಸಲ್ಲಿಸಿ ಪೌರತ್ವ ಬಯಸಿದರೆ ಪರಿಶೀಲಿಸಿ ನೀಡಲಾಗುತ್ತದೆ. ಹಾಗೆಂದು ಜಗತ್ತಿನ 40 ಮುಸ್ಲಿಂ ರಾಷ್ಟ್ರಗಳಿಂದ ಎಲ್ಲರನ್ನು ಕರೆತರಲು ಭಾರತ ಧರ್ಮಶಾಲೆಯೇನು. ಕಳೆದ ಐದು ವರ್ಷದಲ್ಲಿ 550 ಮುಸ್ಲಿಮರಿಗೆ ಪೌರತ್ನ ನೀಡಲಾಗಿದೆ ಎಂದು ಪ್ರತಿಕ್ರಿಯಿಸಿದರು. ಜನರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಯಿತೆ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಹ್ಲಾದ್ ಜೋಷಿ, ತಪ್ಪು ಮಾಹಿತಿ ಬಹುಬೇಗ ಹರಡುತ್ತದೆ. ಇದೀಗ ಸರಿಯಾದ ಮಾಹಿತಿ ನೀಡುವ ಪ್ರಕ್ರಿಯೆ ನಡೆದಿದೆ ಎಂದು ಹೇಳಿದರು. ಜಿಡಿಪಿ ಪ್ರಗತಿ, ಆರ್ಥಿಕ ಸ್ಥಿತಿ ಕುರಿತು ಚರ್ಚೆಯಾಗದಂತೆ ತಡೆಯಲು ಕಾಯ್ದೆ ತಂದು ಗೊಂದಲ ಸೃಷ್ಟಿಸಲಾಗುತ್ತಿದೆ ಎಂಬ ಆರೋಪ ನಿರಾಧಾರ. ಆರ್ಥಿಕತೆ ಕುರಿತು ಚರ್ಚೆ ನಡೆಸದಂತೆ ಕಾಂಗ್ರೆಸ್‌ನವರನ್ನು ತಡೆದವರು ಯಾರು. ಕಾಂಗ್ರೆಸ್‌ನವರು ಈ ಗಲಾಟೆ ಮಾಡಿಸದಿದ್ದರೆ ಚರ್ಚೆ ನಡೆಸಬಹುದಿತ್ತು. ಹಾಗೆಯೇ ಬಿಜೆಪಿ ಸರ್ಕಾರಗಳಿರುವ ರಾಜ್ಯಗಳಲ್ಲೇ ಪ್ರತಿಭಟನೆಯಾಗುತ್ತಿದೆ ಆರೋಪವೂ ಅರ್ಥಹೀನ. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರವಿಟ್ಟುಕೊಂಡು ನಾವೇ ಕಾನೂನು- ಸುವ್ಯವಸ್ಥೆ ಹದಗೆಸಿಕೊಂಡು ಆರೋಪ ಹೊತ್ತುಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಶಾಸಕ ಶಿವನಗೌಡ ನಾಯಕ್, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್, ಮಾಧ್ಯಮ ಸಂಚಾಲಕ ಎ.ಎಚ್. ಆನಂದ್ ಉಪಸ್ಥಿತರಿದ್ದರು. ಕಚೇರಿಯಲ್ಲೇ ಮಾಹಿತಿ ವ್ಯವಸ್ಥೆ
ಸಿಎಎ ಬಗ್ಗೆ ಯವುದೇ ರೀತಿಯ ಪ್ರಶ್ನೆ, ಸ್ಪಷ್ಟತೆ ಅಗತ್ಯವೆನಿಸಿದರೆ ಪಕ್ಷದ ಕಚೇರಿಯಲ್ಲೇ ಒಬ್ಬರನ್ನು ಮಾಹಿತಿಗೆ ನಿಯೋಜಿಸಲಾಗುವುದು. ಶಾಂತಿಯುವಾಗಿ ಕೋರಿದರೆ ಎಲ್ಲರಿಗೂ ಮಾಹಿತಿ ನೀಡಲು ಸಿದ್ಧ. ಇಂದು ದೊಂಬಿ, ಗಲಭೆ, ಹಿಂಸೆಗೆ ಪ್ರಚೋದನೆ ನೀಡುವರರು ಮುಂದೆ ಜೈಲಿಗೆ ಹೋದಾಗ ಬಿಡಿಸಲು ಬರುವುದಿಲ್ಲ. ಈವರೆಗೆ ಮುಸ್ಲಿಂ ಸಮುದಾಯವರನ್ನು ಬಾವಿಯಲ್ಲಿದ್ದು, ಐದು ವರ್ಷಕ್ಕೊಮ್ಮೆ ಹಗ್ಗ ಬಿಟ್ಟು ಮೇಲೆತ್ತಿ ಹೆದರಿಸಿ ಮತ ಪಡೆದು ಅದೇ ಸ್ಥಿತಿಯಲ್ಲಿಟ್ಟರು. ಯುಪಿಎ ಸರ್ಕಾರದ ಅವಧಿಯ ಸಮಿತಿಗಳೇ ಮುಸ್ಲಿಮರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ್ದಾರೆ ಎಂದು ಹೇಳಿವೆ. ಇದನ್ನು ಅಲ್ಪಸಂಖ್ಯಾತರು ಅರಿತುಕೊಳ್ಳಬೇಕು.
– ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ