Advertisement

“ಮುಸ್ಲಿಮರು ದೇಶಾಭಿಮಾನದಿಂದ ಭಾರತದಲ್ಲಿ ಉಳಿದುಕೊಂಡಿದ್ದಾರೆ’

09:49 PM Jan 26, 2020 | Sriram |

ಉಡುಪಿ: ವಿಭಜನೆ ಸಂದರ್ಭದಲ್ಲಿ ಮುಸ್ಲಿಮರಿಗೆ ಪಾಕಿಸ್ತಾನಕ್ಕೆ ಹೋಗುವ ಅವಕಾಶವಿತ್ತಾದರೂ ಅವರು ದೇಶದ ಮೇಲಿನ ಅಭಿಮಾನದಿಂದ ಭಾರತದಲ್ಲಿ ಉಳಿದುಕೊಂಡಿದ್ದಾರೆ. ಮುಸ್ಲಿಮರು ದೇಶದಲ್ಲಿ ಉಳಿದು ಕೊಂಡಿರುವುದು ಅವರ ಇಚ್ಛೆಯಿಂದ ಹೊರತು ಅನಿವಾರ್ಯತೆಯಿಂದಲ್ಲ ಎಂದು ಎಸ್‌.ಡಿ.ಪಿ.ಐ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಮಜೀದ್‌ ಕೂಡ್ಲಿಪೇಟೆ ತಿಳಿಸಿದರು.

Advertisement

ಶನಿವಾರ ಮಿಶನ್‌ ಕಾಂಪೌಡ್‌ನ‌ಲ್ಲಿ ಆಯೋಜಿಸಿದ್ದ “ಖಾಗಝ್ ನಹಿ ದಿಖಾಯೇಂಗೆ’ ರಾಷ್ಟ್ರೀಯ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದಕ್ಕೆ ನಮ್ಮ ವಿರೋಧ. ದೇಶದಲ್ಲಿ ಉನ್ನತ ಶಿಕ್ಷಣ ವಿವಿಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ವಿದ್ಯಾರ್ಥಿಗಳು ಕೇಂದ್ರ ಸರಕಾರದ ಎನ್‌ ಆರ್‌ಸಿ, ಎನ್‌ಆರ್‌ಪಿ ಕಾಯ್ದೆ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಎಂದು ಹೇಳಿದರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಜನರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರಲ್ಲಿ ಮುಸ್ಲಿಂರು ಇದ್ದಾರೆ ಎಂದು ನೆನಪಿಸಿಕೊಂಡರು.

ಕೇಂದ್ರ ಸರಕಾರ ಆಡಳಿತ ಅವಧಿಯ ಆತ್ಮಾವಲೋಕ ಮಾಡಿಕೊಳ್ಳಬೇಕು. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಜಿಎಸ್‌ಟಿಯಿಂದಾಗಿ ಉದ್ಯಮಗಳು ಮುಚ್ಚಿವೆ. ನೋಟ್‌ ಬ್ಯಾನ್‌ನಿಂದ ಆರ್ಥಿಕ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಕೇಂದ್ರ ಈ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಬಿಟ್ಟು, ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಕಾಯ್ದೆ ಜಾರಿಗೆ ತಂದಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎನ್‌ಆರ್‌ಸಿ ಜನ ಹಾಗೂ ಬಡವರ ವಿರೋಧಿ ಕಾಯ್ದೆ ಆಗಿದೆ. ಕಳೆದ 70 ವರ್ಷದಲ್ಲಿ ದಾಖಲೆಗಾಗಿ ಸರಕಾರಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ. ಆದರೆ ದಾಖಲೆ ಮಾತ್ರ ಜನರಿಗೆ ತಲುಪಿಲ್ಲ ಎಂದು ವ್ಯಂಗ್ಯವಾಡಿದರು.

Advertisement

ಭಾರತೀಯ ಮುಕ್ತಿ ಮೊರ್ಚಾ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ವಿಲಾಸ್‌ ತುಕಾರಾಮ್‌, ಪಿಎಫ್ಐ ರಾಜ್ಯಾಧ್ಯಕ್ಷ ಮುಹಮ್ಮದ್‌ ಸಾಖೀಬ್‌, ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಆಲ್ಫಾನ್ಸೋ ಫ್ರಾಂಕೋ, ಉಡುಪಿ ಜಿಲ್ಲಾ ಮುಸ್ಲಿಮ್‌ ಒಕ್ಕೂಟದ ಅಧ್ಯಕ್ಷ ಯಾಸೀನ್‌ ಮಲ್ಪೆ, ಚಿಂತಕ ಜಿ. ರಾಜಶೇಖರ್‌, ರಾಜ್ಯ ದಲಿತ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಬಿ.ಆರ್‌.ಭಾಸ್ಕರ ಪ್ರಸಾದ್‌, ಧರ್ಮಗುರು ಫಾಣ ವಿಲಿಯಂ ಮಾರ್ಟಿಸ್‌, ಪತ್ರಕರ್ತ ಶಶಿಧರ ಹೆಮ್ಮಾಡಿ, ಸಹಬಾಳ್ವೆ ಉಡುಪಿ ಅಧ್ಯಕ್ಷ ಅಮೃತ್‌ ಶೆಣೈ, ಮಿತ್ತೂರ್‌ ಕೆಜಿಎನ್‌ ದಾವಾ ಕಾಲೇಜಿನ ಹುಸೇನ್‌ ಅಹ್ಸಾನಿ ಮಾತನಾಡಿದರು.

ದಸಂಸ ಜಿಲ್ಲಾ ಸಂಚಾಲಕ ಸುಂದರ್‌ ಮಾಸ್ತರ್‌, ಎಸ್‌ಡಿಪಿಐ ಗುಲ್ಬರ್ಗ ಜಿಲ್ಲಾಧ್ಯಕ್ಷ ಶಾಹೀದ್‌ ನಾಸೀರ್‌, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ತೌಫೀಕ್‌, ಪಿಎಫ್ಐ ಜಿಲ್ಲಾಧ್ಯಕ್ಷ ನಜೀರ್‌ ಅಹ್ಮದ್‌, ಉಡುಪಿ ಸಂಯುಕ್ತ ಜಮಾಅತ್‌ ಅಧ್ಯಕ್ಷ ಎಂ.ಅಬೂಬಕ್ಕರ್‌, ತಬ್ಲಿಕ್‌ ಜಮಾಅತ್‌ನ ಖಾಲಿದ್‌ ಮಣಿಪುರ, ಎಸ್‌ಡಿಟಿಯು ರಾಜ್ಯಾಧ್ಯಕ್ಷ ಜಲೀಲ್‌ ಕೃಷ್ಣಾಪುರ, ಇಮಾಮ್‌ ಕೌನ್ಸಿಲ್‌ ರಾಜ್ಯ ಸದಸ್ಯ ಮೌಶಿಮ್‌ ಮೌಲಾನ, ನ್ಯಾಯವಾದಿ ಹಂಝತ್‌ ಹೆಜಮಾಡಿ ಕೋಡಿ, ವಕ್ಫ್ ಜಿಲ್ಲಾ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹಿಂ ಮಟಪಾಡಿ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಆಸೀಫ್ ಕೋಟೇಶ್ವರ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಇಲ್ಯಾಸ್‌ ಸಾಸ್ತಾನ ವಂದಿಸಿದರು. ಶಫೀಕ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next