Advertisement
ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದಲ್ಲಿ ದಾವೆ ಹೂಡಿದ್ದ ಇಕ್ಬಾಲ್ ಅನ್ಸಾರಿ ಸೇರಿದಂತೆ ಹಲವರು ಅಯೋಧ್ಯೆಯ ಅಭಿವೃದ್ಧಿಗೆ ಬಿಜೆಪಿಗೇ ಕ್ರೆಡಿಟ್ ನೀಡಿದ್ದು, ಇತರರು ಲಾಭವನ್ನು ದೇವಾಲಯದ ಪಟ್ಟಣದ ಎಲ್ಲಾ ಭಾಗಗಳಿಗೆ ತಲುಪಿಸಲು ಸಾಕಷ್ಟು ಕೆಲಸ ಮಾಡಬೇಕಾಗಿದೆ ಎಂದು ಭಾವಿಸಿದ್ದಾರೆ.
Related Articles
Advertisement
ಹಲವಾರು ಮುಸ್ಲಿಮರನ್ನು ಮಾತಿಗೆಳೆದ ಪಿಟಿಐ
ತ್ರಿವಳಿ ತಲಾಖ್ ವಿಷಯದಲ್ಲಿ ಬಿಜೆಪಿ ಕೈಗೊಂಡ ತೀರ್ಮಾನಕ್ಕೆ ಮುಸ್ಲಿಂ ಮಹಿಳೆಯರು ಮೆಚ್ಚುಗೆ ಸೂಚಿಸಿದ್ದಾರೆ. ತ್ರಿವಳಿ ತಲಾಖ್ ಮತ್ತು ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಬಿಜೆಪಿಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಫೈಜಾಬಾದ್ ಲೋಕಸಭಾ ಕ್ಷೇತ್ರದ ರುದೌಲಿ ವಿಧಾನಸಭಾ ವಿಭಾಗದಲ್ಲಿ ಗಮನಾರ್ಹ ಸಂಖ್ಯೆಯ ಮುಸ್ಲಿಮರು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆಗಳನ್ನು ಪಡೆದಿದ್ದಾರೆ. ಸ್ಥಳೀಯ ನಿವಾಸಿ ಬಬ್ಲು ಖಾನ್ ಅವರು “ಅಯೋಧ್ಯೆಯಲ್ಲಿ ಅಭಿವೃದ್ಧಿಯ ಹೊಳೆ ಹರಿಯುತ್ತಿದೆ” ಎಂದು ಹೇಳಿದ್ದಾರೆ.
ಅಯೋಧ್ಯೆಯ ಜನರು ತೃಪ್ತರಾಗಿದ್ದಾರೆ ಮತ್ತು ಫೈಜಾಬಾದ್‌ನ ಹಾಲಿ ಬಿಜೆಪಿ ಸಂಸದ ಲಲ್ಲು ಸಿಂಗ್ ಮೂರನೇ ಅವಧಿಗೆ ಮರಳಲಿದ್ದಾರೆ’ ಎಂದು ಕೆಲ ಮುಸ್ಲಿಮರು ಹೇಳಿದ್ದಾರೆ.
ಎಲ್ಲರೂ ಈ ಮಾತನ್ನು ಒಪ್ಪಲಿಲ್ಲ. 25 ವರ್ಷದ ಮೊಹಮ್ಮದ್ ಅಮೀರ್, ‘ಜನರು “ಮಂದಿರ-ಮಸ್ಜಿದ್” ನಲ್ಲಿ ಆಸಕ್ತಿ ಹೊಂದಿಲ್ಲ ಮತ್ತು ಉದ್ಯೋಗಗಳನ್ನು ಬಯಸುತ್ತಾರೆ’ ಎಂದು ಹೇಳಿದ್ದಾರೆ.
“ನಮಗೆ ಉದ್ಯೋಗ ಬೇಕು. ‘ಮಂದಿರ-ಮಸ್ಜಿದ್’ ಸಮಸ್ಯೆ ಇಟ್ಟುಕೊಂಡು ಮನೆ ನಡೆಸಲಾಗುವುದಿಲ್ಲ. ನಾನು ಮುಸ್ಲಿಂ ಎಂಬ ಕಾರಣಕ್ಕೆ ಈ ಮಾತನ್ನು ಹೇಳುತ್ತಿಲ್ಲ, ಉದ್ಯೋಗವಿಲ್ಲದ ವ್ಯಕ್ತಿಯಾಗಿ ಹೇಳುತ್ತಿದ್ದೇನೆ. ‘ಮಂದಿರ-ಮಸೀದಿ’ ಚುನಾವಣೆ ವಿಷಯವಾಗಬಾರದು” ಎಂದರು.
ಅಯೋಧ್ಯೆಯಲ್ಲಿ ಚುನಾವಣ ಕಣದಲ್ಲಿರುವ ಏಕೈಕ ಮುಸ್ಲಿಂ ಸ್ವತಂತ್ರ ಅಭ್ಯರ್ಥಿ ಫರೀದ್ ಸಲ್ಮಾನಿ ಮಾತನಾಡಿ, ”ಕ್ಷೇತ್ರದ ಹೊರವಲಯದಲ್ಲಿ ವಾಸಿಸುವ ಜನರ ಜೀವನವು ಅಭಿವೃದ್ಧಿಯಿಂದ ಅಸ್ಪೃಶ್ಯವಾಗಿದೆ.’ನನ್ನ ಬಾಲ್ಯದಿಂದಲೂ ಕ್ಷೇತ್ರದ ಹೊರ ಪ್ರದೇಶಗಳಲ್ಲಿ, ಅದರಲ್ಲೂ ಹಳ್ಳಿಗಳಲ್ಲಿನ ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳುಗಮನ ನೀಡಿಲ್ಲ. ಹೆಚ್ಚು ಕಡಿಮೆ ಬದಲಾಗದೆ ಉಳಿದಿವೆ. ಬಹುತೇಕ ಎಲ್ಲ ಜಾತಿಯ ಸಂಸದರು ಮತ್ತು ಶಾಸಕರು ಚುನಾಯಿತರಾಗಿದ್ದಾರೆ ಆದರೆ ಅಭಿವೃದ್ಧಿ ಇನ್ನೂ ಅನೇಕ ಪ್ರದೇಶಗಳನ್ನು ತಲುಪಿಲ್ಲ”ಎಂದು ಹೇಳಿದ್ದಾರೆ.
ಫೈಜಾಬಾದ್ ಲೋಕಸಭಾ ಕ್ಷೇತ್ರ, ದರಿಯಾಬಾದ್, ರುದೌಲಿ, ಮಿಲ್ಕಿಪುರ (SC), ಬಿಕಾಪುರ್ ಮತ್ತು ಅಯೋಧ್ಯೆ ಐದು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು ಇವುಗಳಲ್ಲಿ, ದರಿಯಾಬಾದ್ ನೆರೆಯ ಬಾರಾಬಂಕಿ ಜಿಲ್ಲೆಯಲ್ಲಿದ್ದು ಉಳಿದ ನಾಲ್ಕು ವಿಧಾನಸಭಾ ಕ್ಷೇತ್ರಗಳು ಅಯೋಧ್ಯೆ ಜಿಲ್ಲೆಯಲ್ಲಿವೆ. ಕ್ಷೇತ್ರದಲ್ಲಿ 19,27,459 ಅರ್ಹ ಮತದಾರರಿದ್ದಾರೆ.
ಬಿಜೆಪಿಯ ಸಿಂಗ್ ಮತ್ತು ಸಮಾಜವಾದಿ ಪಕ್ಷದ ಹಾಲಿ ಶಾಸಕ ಅವಧೇಶ್ ಪ್ರಸಾದ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಏಳು ಹಂತದ ಚುನಾವಣೆಯ ಐದನೇ ಸುತ್ತಿನಲ್ಲಿ ಮೇ 20 ರಂದು ಮತದಾನ ನಡೆಯಲಿದೆ.